ಭಾನುವಾರ , ಡಿಸೆಂಬರ್ 22 2024
kn
Breaking News

ಕೃಷಿಕರ ಉಪಕಸಬುಗಳಿಗೆ ಸೂಕ್ತ ಮಾರುಕಟ್ಟೆಯ ಅವಶ್ಯಕತೆ ಒದಗಿಸಬೇಕು: ಶ್ರೀ ಬಿಳಿಯಾನಸಿದ್ಧ ಸ್ವಾಮೀಜಿ

Spread the love

ಮೂಡಲಗಿ: ಕೃಷಿಯ ಜೊತೆಯಾಗಿ ರೈತರು ಅವಲಂಬಿತವಾಗಿರುವ ಕುರಿ, ಆಡು, ಕೋಳಿ, ದನಕರುಗಳ ಸಾಕಾಣಿಕೆದಾರರಿಗೆ ಸೂಕ್ತ ಮಾರುಕಟ್ಟೆ ಸೌಲಭ್ಯ ಒದಗಿಸಿದಾಗ ಮಾತ್ರ ಆರ್ಥಿಕವಾಗಿ ಸ್ವಾವಲಂಬಿ ಜೀವನ ನಡೆಸಲು ಸಾಧ್ಯವಾಗುವದು ಎಂದು ಜೋಕಾನಟ್ಟಿಯ ಶ್ರೀ ಯೋಗಿಸಿದ್ದೇಶ್ವರ ಆಶ್ರಮದ ಬಿಳಿಯಾನಸಿದ್ಧ ಮಹಾಸ್ವಾಮೀಜಿ ನುಡಿದರು.
ಸಮೀಪದ ಕಲ್ಲೋಳಿ ಪಟ್ಟಣದಲ್ಲಿ ಜರುಗಿದ ರಾಯಣ್ಣ ಕುರಿ ಮತ್ತು ಆಡು ರೈತ ಉತ್ಪಾದಕರ ಸಂಸ್ಥೆಯ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ಕುರಿಗಾರರಿಗೆ ಸಿಗುವ ಸೌವಲತ್ತುಗಳನ್ನು ಪ್ರತಿಯೊಬ್ಬರಿಗೂ ದೊರೆಯುವಂತಾಗಬೇಕು. ಸರ್ಕಾರ ಮತ್ತು ನಿಗಮಗಳಿಂದ ಸೌಲಭ್ಯಗಳು, ಸಂರಕ್ಷಣೆ, ದಲ್ಲಾಳಿಗಳಿಂದಾಗುವ ಮೊಸ, ಬಿಸಿಲು, ಚಳಿ, ಮಳೆಯಿಂದಾಗುವ ಪ್ರಕೃತಿ ವಿಕೋಪಗಳಂತಹ ಸಂದರ್ಭದಲ್ಲಿ ಸೂಕ್ತ ಸಹಾಯ ನೀಡಬೇಕಾದದ್ದು ಸರಕಾರ, ನಿಗಮ, ಸಂಘ ಸಂಸ್ಥೆಗಳದ್ದಾಗಿರುತ್ತದೆ. ಮೂಡಲಗಿ ತಾಲೂಕಿನ ಜನತೆ ಇದರ ಸದುಪಯೋಗ ಪಡೆದುಕೊಳ್ಳ ಬೇಕು. ಸಂಸ್ಥೆಯು ಕುರಿಗಾರರ ಹಿತ ಕಾಯುವಲ್ಲಿ ಪ್ರಮುಖ ಪಾತ್ರವಹಿಸಿ ಮೂಲ ಉದ್ದೇಶವನ್ನು ಈಡೇರಿಸ ಬೇಕೆಂದು ಹೇಳಿದರು.
ಪ್ರಾಸ್ತವಾವಿಕವಾಗಿ ಸಂಸ್ಥೆಯ ಅಧ್ಯಕ್ಷ ಮಾರುತಿ ಮರ್ಡಿ ಮಾತನಾಡಿ, ಸಂಸ್ಥೆಯ ಧ್ಯೇಯೊದ್ದೇಶಗಳು, ಷೇರು ಬಂಡವಾಳ, ಸರಕಾರ ಮತ್ತು ನಿಗಮಗಳಿಂದ, ವಿವಿಧ ಇಲಾಖೆಗಳಿಂದ ಸಿಗುವ ಸೌಲಭ್ಯಗಳ ಕುರಿತು ವಿವರಿಸಿದರು.
ಸಮಾರಂಭದಲ್ಲಿ ಮುಖಂಡರುಗಳಾದ ಸುಬಾಸ ಕುರಬೇಟ್, ಬಸಪ್ಪ ಯಾದಗೂಡ, ಲಕ್ಷö್ಮಣ ಮರ್ಡಿ, ರವಿ ಹೆಬ್ಬಾಳ, ಶಿವಾನಂದ ಹೆಬ್ಬಾಳ, ನೀಲಕಂಠ ಕಪ್ಪಲಗುದ್ದಿ, ಲಕ್ಕಪ್ಪ ಮಾಯನ್ನವರ, ಪಾಂಡು ದೊಡಮನಿ, ಗೋಪಾಲ ಕುದರಿ, ಸಂಸ್ಥೆಯ ಉಪಾಧ್ಯಕ್ಷ ಪ್ರಕಾಶ ಪಾಟೀಲ, ಸದಸ್ಯರಾದ ಮಡ್ಡೆಪ್ಪ ಕೊರಕಪೂಜೇರಿ, ಮುತ್ತುರಾಜ ಬಡವಣ್ಣಿ, ಅಲ್ಲಪ್ಪ ಗಣೇಶವಾಡಿ, ಸಿದ್ದು ದೇವರಮನಿ, ಸುರೇಶ ಕರವನ್ನವರ, ಭೀಮಶಿ ಆಲಕನೂರ, ಉದ್ದಪ್ಪ ಖಿಲಾರಿ, ಮುಖ್ಯ ಕಾರ್ಯನಿರ್ವಾಹಕ ಸಿದ್ದು ಕಟ್ಟಿಕಾರ, ನಾಗಪ್ಪ ಮಾಯನ್ನವರ, ಸಚಿನ ದೊಡ್ಡಶಿವಪ್ಪಗೋಳ ಹಾಗೂ ಸಂಸ್ಥೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.


Spread the love

About gcsteam

Check Also

ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಆಗ್ರಹಿಸಿ ಮೂಡಲಗಿಯಲ್ಲಿ ಪ್ರತಿಭಟನೆ

Spread the loveಮೂಡಲಗಿ: ಅರಭಾವಿ ಕ್ಷೇತ್ರದ ಶಾಸಕರು ಹಾಗೂ ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಉಪ್ಪಾರ ಸಮಾಜದ ಮೀಸಲಾತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page