ಬುಧವಾರ , ಮೇ 31 2023
kn
Breaking News

ಕಿಸಾನ್ ಡ್ರೋನ್ ಕೃಷಿ ಕ್ಷೇತ್ರದಲ್ಲಿ ಹೊಸ ಕ್ರಾಂತಿಯ ಮೊದಲ ಹೆಜ್ಜೆ-ಸಂಸದ ಈರಣ್ಣ ಕಡಾಡಿ

Spread the love

ಮೂಡಲಗಿ: ಕಿಸಾನ್ ಡ್ರೋನ್‌ಗಳು ಕೃಷಿ ಕ್ಷೇತ್ರದಲ್ಲಿ ಹೊಸ ಕ್ರಾಂತಿಯ ಮೊದಲ ಹೆಜ್ಜೆಯಾಗಿದೆ. ಹೊಸ ಉದ್ಯೋಗ ಸೃಷ್ಠಿಸುವ ಜೊತೆಗೆ ವಿದ್ಯಾವಂತ ಯುವ ಕೃಷಿಕರಿಗೆ ಹೊಸ ಅವಕಾಶಗಳನ್ನು ನಿರ್ಮಿಸುತ್ತದೆ. ಇದರಿಂದಾಗಿ ರೈತರಿಗೆ ಸಾಕಷ್ಟು ಸಮಯ ಉಳಿತಾಯವಾಗಲಿದೆ. ಕಾರ್ಮಿಕರ ಸಮಸ್ಯೆ ಎದುರಿಸುತ್ತಿರುವ ಕೃಷಿ ಕ್ಷೇತ್ರಕ್ಕೆ ಇದು ವರದಾನವಾಗಲಿದೆ ಎಂದು ರಾಜ್ಯಸಭಾ ಸಂಸದ ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಕೇಂದ್ರ ಸರ್ಕಾರದ ಕ್ರಮವನ್ನು ಸ್ವಾಗತಿಸಿದ್ದಾರೆ.
ರವಿವಾರ ಫೆ-೨೦ ರಂದು ಪತ್ರಿಕಾ ಹೇಳಿಕೆ ನೀಡಿದ ಸಂಸದ ಈರಣ್ಣ ಕಡಾಡಿ ಅವರು ಫೆಬ್ರುವರಿ ೧ ರಂದು ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಘೋಷಣೆಯಾಗಿದ್ದ, ಕಿಸಾನ್ ಡ್ರೋನ್ ಯೋಜನೆಯನ್ನು ಕೇವಲ ೧೮ ದಿನಗಳಲ್ಲಿ ಜಾರಿಗೆ ಬರುವಂತೆ ಮಾಡಿದ ದೇಶದ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜ್ಯದ ರೈತರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆಂದರು.
ಕೃಷಿ ಮಾರುಕಟ್ಟೆಗಳಿಗೆ ಕೃಷಿ ಉತ್ಪನ್ನಗಳನ್ನು ಸಾಗಿಸಲು ತುಂಬಾ ಸಹಕಾರಿಯಾಗಲಿದೆ. ಕೀಟನಾಶಕ, ಔಷಧ, ಪೋಷಕಾಂಶಗಳ ಸಿಂಪಡಣೆ, ಬೆಳೆ ಆರೋಗ್ಯ ತಪಾಸಣೆ, ಭೂ ದಾಖಲೆಗಳ ಡಿಜಿಟಲೀಕರಣ, ಜಮೀನುಗಳ ಸರ್ವೆ ಈ ಎಲ್ಲ ಕಾರ್ಯಗಳಿಗೆ ಕಿಸಾನ್ ಡ್ರೋನ್ ಯೋಜನೆ ಅನುಕೂಲವಾಗಲಿದೆ. ರೈತ ಉತ್ಪಾದಕ ಸಂಸ್ಥೆಗಳಿಗೆ ಖರೀದಿಸಲು ಸರ್ಕಾರ ಶೇ. ೭೫ ರಷ್ಟು ಸಬ್ಸಿಡಿ ನೀಡುತ್ತದೆ. ಹೆಕ್ಟೇರ್‌ಗೆ ೬.೦೦೦ ರೂ. ನಂತೆ ಪಾವತಿಸಿ ಬಾಡಿಗೆಗೂ ಪಡೆಯಬಹುದು. ಸದ್ಯ ೧೦೦ ಸ್ಥಳಗಳಲ್ಲಿ ಕಿಸಾನ್ ಡ್ರೋನ್ ಯೋಜನೆ ಜಾರಿಗೆ ಚಾಲನೆ ನೀಡಲಾಗಿದ್ದು, ೨ ವರ್ಷಗಳಲ್ಲಿ ಈ ಸಂಖ್ಯೆ ೧ ಲಕ್ಷಕ್ಕೇರಲಿದೆ ಎಂದರು.


Spread the love

About gcsteam

Check Also

ಹಳೆಯ ಪಿಂಚಣಿ ಯೋಜನೆ ಜಾರಿಗೆ ಪ್ರಾಮಾಣಿಕ ಪ್ರಯತ್ನ:ಬೀರಪ್ಪ ಅಂಡಗಿ

Spread the loveಕೊಪ್ಪಳ: ೧ನೇ ಏಪ್ರೀಲ್ ೨೦೦೬ ರ ನಂತರ ನೇಮಕಗೊಂಡ ರಾಜ್ಯ ಸರಕಾರಿ ನೌಕರರಿಗೆ ಜಾರಿಗೆ ಮಾಡಲಾಗಿರುವ ನೂತನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page