ಮೂಡಲಗಿ- ಮೂಡಲಗಿಗೆ ಹೊಸ ಉಪ ನೋಂದಣಿ ಕಛೇರಿ ಮಂಜೂರಾದ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳು ಬುಧವಾರದಂದು ಕಛೇರಿಗೆ ಅಗತ್ಯವಿರುವ ಸ್ಥಳವನ್ನು ಪರಿಶೀಲನೆ ನಡೆಸಿದರು.
ಪಟ್ಟಣದ ತಹಶಿಲ್ದಾರರ ಕಚೇರಿಗೆ ಹೊಂದಿಕೊಂಡಿರುವ ಮೂರು ಕೊಠಡಿಗಳನ್ನು ಪರಿಶೀಲಿಸಿದ ಜಿಲ್ಲಾ ನೋಂದಣಿ ಅಧಿಕಾರಿ ಶಿವಕುಮಾರ ಅಪರಂಜಿ ಅವರು, ಈ ಮೂರು ಕೊಠಡಿಯಲ್ಲಿ ಹೊಸ ಉಪ ನೋಂದಣಿ ಕಚೇರಿಯನ್ನುಆರಂಭಿಸಲಾಗುವುದು. ಶೀಘ್ರವಾಗಿ ಮೂಡಲಗಿಯಲ್ಲಿ ಕಚೇರಿ ಆರಂಭ ಮಾಡಲಾಗುವುದು ಎಂದು ಹೇಳಿದರು.
ಅರಭಾವಿ ಶಾಸಕ ಹಾಗೂ ಕಹಾಮ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಪ್ರಯತ್ನದ ಫಲವಾಗಿ ಮೂಡಲಗಿಯಲ್ಲಿ ಹೊಸ ಕಚೇರಿ ಆರಂಭವಾಗಲಿದೆ. ಮೂಡಲಗಿ ತಾಲೂಕಿನ ಸಾರ್ವಜನಿಕರ ಹಿತದೃಷ್ಟಿಯಿಂದ ಗೋಕಾಕದಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳನ್ನೇ ಇಲ್ಲಿ ತಾತ್ಕಾಲಿಕವಾಗಿ ನಿಯೋಜನೆ ಮಾಡಲಾಗುತ್ತದೆ.ನಾಗರೀಕರು ಹಾಗೂ ರೈತರಿಗೆ ಎಲ್ಲ ರೀತಿಯ ಅನುಕೂಲ ಕಲ್ಪಿಸಲಾಗುತ್ತದೆ ಎಂದು ಹೇಳಿದರು.
ಬೈಲಹೊಂಗಲ ಉಪ-ವಿಭಾಗಾಧಿಕಾರಿ ಡಾ. ಶಶಿಧರ ಬಗಲಿ, ತಹಶಿಲ್ದಾರ ಡಿ.ಜೆ ಮಹಾತ, ಗೋಕಾಕ ಉಪ ನೋಂದಣಿ ಅಧಿಕಾರಿ ರವಿ ಸಂಕನಗೌಡ್ರ, ಶಾಸಕರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ ಹಾಗೂ ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Tags corona covid-19 covid19 Gokak HALLUR HIJAB JIHAD kanndafilmnews LATEST NEWS NEWS police positive sarvavani savalekar virus
Check Also
ತಮ್ಮ ಸ್ವಂತ ವೆಚ್ಚದಲ್ಲಿ ಅರಭಾವಿ ಕ್ಷೇತ್ರದಲ್ಲಿ ಜಾನುವಾರುಗಳ ಚರ್ಮ ಗಂಟು ರೋಗದ ಕಿಟ್‌ಗಳನ್ನು ವಿತರಿಸಿದ ಬಾಲಚಂದ್ರ ಜಾರಕಿಹೊಳಿ
Spread the loveಗೋಕಾಕ : ಜಾನುವಾರುಗಳಿಗೆ ಚರ್ಮ ಗಂಟು ರೋಗ ಹರಡುತ್ತಿದ್ದು, ಹಳ್ಳಿಗಳಿಗೆ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಜಾನುವಾರುಗಳನ್ನು …