ಮೂಡಲಗಿ: ಪಟ್ಟಣದಲ್ಲಿ ಕಳೆದ ತಿಂಗಳಿನಿಂದ ಸರಣಿ ಕಳ್ಳತನವಾಗುತ್ತಿದ್ದು ಪಟ್ಟಣದ ವಾಸಿಗಳಲ್ಲಿ ಆತಂಕ ಸೃಷ್ಟಿಯಾಗಿದೆ.
ಕಳೆದ ನವೆಂಬರ್ 28ರ ರಾತ್ರಿ ಕಲ್ಮೇಶ್ವರ ವೃತದಲ್ಲಿನ ಒಂದು ಅಂಗಡಿಯನ್ನು ಕಳ್ಳರು ಕದಿಯಲು ಪ್ರಯತ್ನಿಸಿದ್ದು, ಅದೃಷ್ಟವಶಾತ್ ಈ ಕದಿಮರ ಕೈಗೆ ಬೆಲೆಬಾಳುವ ವಸ್ತು, ಹಣ ಸಿಕ್ಕಿಲ್ಲ.
ಮತ್ತೆ ಅದೆ ನವೆಂಬರ ತಿಂಗಳಿನ 29ರ ರಾತ್ರಿ ಮಾರ್ಕೆಟ್ ರಸ್ತೆಯಲ್ಲಿನ ತಗಡಿನ ಶೆಡ್ ಅಲ್ಲಿರುವ ಸುಭಾಸ ಗಾರ್ಮೆಂಟ್ಸ್ ಅನ್ನವ ಬಡಪಾಯಿ ವ್ಯಕ್ತಿಯ ಬಟ್ಟೆ ಅಂಗಡಿಯಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಅಂಗಡಿಯ ಪಕ್ಕದಲ್ಲಿ ಒಂದು ಚಿಕ್ಕ ದಾರಿ ಇದ್ದು, ಆ ದಾರಿಯಲ್ಲಿ ಬಂದು ಕದಿಮರು ಸುಭಾಸ ಗಾರ್ಮೆಂಟ್ಸ್ ಶಡ್ಡನ ತಗಡನ್ನು ಕತ್ತರಿಸಿ ಒಳನುಗ್ಗಿ ಕೆಲವು ಬಟ್ಟೆಗಳನ್ನ ಹೊತ್ತೊಯಿದಿದ್ದಾರೆ.
ಅದೆತೆರನಾಗಿ ಡಿಸೆಂಬರ 10ರ ಮದ್ಯರಾತ್ರಿ ಮತ್ತೆ ಅದೆ ಕಳ್ಳರು ಮೂಡಲಗಿ ಪಟ್ಟಣದ ಲಕ್ಷ್ಮೀ ನಗರದಲ್ಲಿರು ಒಬ್ಬ ಉದ್ಯಮಿಯ ಮನೆಯ ಪಕ್ಕದಲ್ಲಿರು ಒತ್ತುವ ಕಬ್ಬಿನದ ಗಾಡಿ(ನೀರು ತರುವ ಗಾಡಿ) ಯನ್ನು ರಾಜಾರೊಷವಾಗಿ ಹೊತ್ತೊಯ್ಯುವದರ ಮೂಲಕ ಈ ಕಳ್ಳರಿಗೆ ಯಾರ ಭಯವು ಇಲ್ಲವೆಂದು ಸಾಬಿತುಪಾಡಿಸಿದ್ದಾರೆ. ಈ ಕಳ್ಳತನದ ವಿಡಿಯೋವನ್ನ ನೋಡಿ ಇದರಿಂದ ಪೋಲಿಸ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಅಧಿಕಾರಿಗಳು ಕಳ್ಳರ ಜಾಲ ಪತ್ತೆಮಾಡಲು ಬಲೆ ಬೀಸಿದ್ದಾರೆ.
ಇಂತಹ ಕಳ್ಳರಿಂದ ಪಟ್ಟಣದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಕಳ್ಳತನ ಮಾಡುವುದಲ್ಲದೆ, ಒಬ್ಬೊಬ್ಬರಾಗಿ ಇರುವ ಮನೆಗಳಿಗೆ ಬಂದು ಏನಾದರೂ ಅನಾಹುತ ಮಾಡುತ್ತಾರೊ ಅನ್ನುವ ಭಯ ಶುರುವಾಗಿದೆ.