ಗುರುವಾರ , ಡಿಸೆಂಬರ್ 26 2024
kn
Breaking News

ನೆರೆ,ಸಂತ್ರಸ್ತರ ಮನೆ ಹಾಗೂ ಬೆಳೆ ಪರಿಹಾರಕ್ಕಾಗಿ ಮತ್ತು ಅಧಿವೇಶನದಲ್ಲಿ ಚರ್ಚಿಸಲು ಆಗ್ರಹಿಸಿ ಧರಣಿ- ಭೀಮಪ್ಪ ಗಡಾದ

Spread the love

ಮೂಡಲಗಿ: ತಾಲೂಕಿನಲ್ಲಿ ಘಟಪ್ರಭಾ ನದಿಯ ಪ್ರವಾಹದಲ್ಲಿ ಮನೆಗಳನ್ನು ಕಳೆದುಕೊಂಡು ಸುಮಾರು ಎರಡು ವರ್ಷಗಳು ಗತಿಸಿದ್ದರೂ ಕೂಡಾ ಸರಕಾರದಿಂದ ಮನೆ ಪರಿಹಾರ ಹಣ ದೊರೆಯದೇ ಇರುವುದರಿಂದ, ಮನೆ ಹಾಗೂ ಬೆಳೆ ಪರಿಹಾರಕ್ಕೆ ಮತ್ತು ನೆರೆ ಸಂತ್ರಸ್ತರ ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ಚರ್ಚಿಸಲು ಆಗ್ರಹಿಸಿ ಸ.15ರಂದು ಬೆಳಗಾವಿ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಮುಂದೆ ಧರಣಿ ನಡೆಸಲು ನಿರ್ಧರಿಸಲಾಗಿದೆ ಎಂದು ಮೂಡಲಗಿಯ ಸಮಾಜ ಸೇವಕ ಮತ್ತು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ತಿಳಿಸಿದರು.
ಪಟ್ಟಣದ ಸಮರ್ಥ ಶಾಲೆಯ ಆವರಣದಲ್ಲಿ ಭಾನುವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ. ಅರಭಾವಿ ಕ್ಷೇತ್ರದ ಅನೇಕ ಗ್ರಾಮಗಳ ಸಾಕಷ್ಟು ಕುಟುಂಬಗಳು ಇನ್ನೂ ಸಹ ಗುಡಿ ಗುಂಡಾರ, ಸಾರ್ವಜನಿಕ ಕಟ್ಟಡಗಳಲ್ಲಿ ವಾಸ ಮಾಡುತ್ತಿದ್ದಾರೆ. ಅಲ್ಲದೇ ಸಾಕಷ್ಟು ರೈತ ಕುಟುಂಬಗಳಿಗೆ ಎರಡು ವರ್ಷಗಳಾದರೂ ಬೆಳೆ ಪರಿಹಾರದ ಹಣ ಬಂದಿರುವುದಿಲ್ಲಾ.
ಪೂರ್ಣ ಪ್ರಮಾಣದಲ್ಲಿ ಮನೆಗಳು ಬಿದ್ದಿದ್ದರೂ ಕೂಡಾ ಸ್ಥಳೀಯ ರಾಜಕಾರಣದಿಂದ ಹಾಗೂ ಅಧಿಕಾರಿಗಳ ಬೇಜವಾಬ್ದಾರಿಯಿಂದ ಸಾಕಷ್ಟು ಕುಟುಂಬಗಳಿಗೆ ಪರಿಹಾರ ಬಂದಿರುವುದಿಲ್ಲಾ, ಇನ್ನು ಪೂರ್ಣ ಪ್ರಮಾಣದಲ್ಲಿ ಮನೆಗಳು ಬಿದ್ದಿದ್ದರೂ ಈ ಮನೆಗಳನನ್ನು “ಸಿ” ವರ್ಗದಲ್ಲಿ ಅಳವಡಿಸಲಾಗಿದೆ. ಕೆಲವರು ತಮಗೆ ಮಂಜೂರಾಗಿರುವ ಮನೆಗಳನ್ನು ಅವರ ಹೆಸರಿನಿಂದಲೇ ಇರುವ ಬೇರೆ ಸುರಕ್ಷಿತ ಸ್ಥಳಗಳಲ್ಲಿ ಅಥವಾ ಅವರ ಸ್ವಂತ ಜಮೀನುಗಳಲ್ಲಿ ನಿರ್ಮಿಸಿಕೊಳ್ಳಲು ಮುಂದಾಗುತ್ತಿದ್ದು ಅಧಿಕಾರಿಗಳು ಇದಕ್ಕೆ ಅವಕಾಶ ನೀಡುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ ಅದರಂತೆ ತಂತ್ರಾಂಶಗಳ ಲೋಪದೋಷಗಳಿಂದಾಗಿ ಸಾಕಷ್ಟು ಕುಟುಂಬಗಳಿಗೆ ಪರಿಹಾರದ ಕನಸು ಮರೀಚಿಕೆಯಾಗಿರುವದು ಕೆಲ ಕುಟುಂಬಗಳಿಗೆ 05 ಲಕ್ಷ ಹಣ ಮಂಜೂರಾತಿ ಆದೇಶವಾಗಿದ್ದರೂ ಇದುವರೆಗೂ ಬಂದಿರುವದು ಕೇವಲ 01 ಲಕ್ಷ ರೂ.ಗಳು ಮಾತ್ರ.
ನದಿ ತೀರದಲ್ಲಿರುವ ಸಾಕಷ್ಟು ಗ್ರಾಮಗಳು ಪ್ರತಿ ವರ್ಷ ನದಿಯ ಪ್ರವಾಹಕ್ಕೆ ತುತ್ತಾಗಿ ಅಪಾರ ಪ್ರಮಾಣದಲ್ಲಿ ಹಾನಿಯಾಗುತ್ತಿರುವುದರಿಂದ ಈ ಗ್ರಾಮಗಳನ್ನು ಸ್ಥಳಾಂತರಿಸಿ ಕುಟುಂಬಗಳಿಗೆ ಸರಕಾರದ ಯೋಜನೆಗಳಲ್ಲಿ ಮನೆ ನಿರ್ಮಿಸಿ ಕೊಡುವಂತೆಯೂ ಸರಕಾರವನ್ನು ಒತ್ತಾಯಿಸಲಾಗುವದು, ನದಿ ತೀರದಲ್ಲಿರುವ ಎಲ್ಲ ಗ್ರಾಮಗಳನ್ನು ಶಾಶ್ವತ ಮುಳುಗಡೆ ಪ್ರದೇಶಗಳೆಂದು ಸರಕಾರದಿಂದ ಅಧಿಕೃತವಾಗಿ ಘೋಷಣೆ ಮಾಡುವಂತೆಯೂ ಸರಕಾರಕ್ಕೆ ಆಗ್ರಹಿಸಲಾಗುವದು ಈ ಕುರಿತು ಈಗಾಗಲೇ ಕಂದಾಯ ಸಚಿವರಿಗೆ ಹಾಗೂ ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಪತ್ರ ಕೂಡ ಬರೆಯಲಾಗಿದೆ ಎಂದ ಅವರು ಈ ಪ್ರತಿಭಟನೆಯಲ್ಲಿ ಸಂತ್ರಸ್ತ ಕುಟುಂಬಗಳು ತಮ್ಮ ಮನೆಗಳಿಂದಲೇ ಬುತ್ತಿ ಗಂಟುಗಳ್ನು ಕಟ್ಟಿಕೊಂಡು ಬರುವುದರ ಮೂಲಕ ವಿನೂತನವಾಗಿ ಈ ಪ್ರತಿಭಟನೆ ನಡೆಸಲಾಗುವುದು ಎಂದರು.
ಈ ಸಂಧರ್ಭದಲ್ಲಿ ಮಲ್ಲಪ್ಪ ಮದಗುಣಕಿ, ಚನ್ನಪ್ಪ ಅಥಣಿ, ಈರಣ್ಣ ಕೊಣ್ಣುರ, ಮಲ್ಲಪ್ಪ ತೇರದಾಳ, ಪ್ರವೀನ ಹೊಸಕೋಟಿ, ಶ್ರೀಶೈಲ್ ಜೈನಾಪೂರ, ಸಂಗಪ್ಪ ಕಳ್ಳಿಗುದ್ದಿ ಮತ್ತಿತರಿದ್ದರು.


Spread the love

About gcsteam

Check Also

ತಮ್ಮ ಸ್ವಂತ ವೆಚ್ಚದಲ್ಲಿ ಅರಭಾವಿ ಕ್ಷೇತ್ರದಲ್ಲಿ ಜಾನುವಾರುಗಳ ಚರ್ಮ ಗಂಟು ರೋಗದ ಕಿಟ್‌ಗಳನ್ನು ವಿತರಿಸಿದ ಬಾಲಚಂದ್ರ ಜಾರಕಿಹೊಳಿ

Spread the loveಗೋಕಾಕ : ಜಾನುವಾರುಗಳಿಗೆ ಚರ್ಮ ಗಂಟು ರೋಗ ಹರಡುತ್ತಿದ್ದು, ಹಳ್ಳಿಗಳಿಗೆ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಜಾನುವಾರುಗಳನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page