ಮೂಡಲಗಿ: ತಾಲೂಕಿನ ಖಾನಟ್ಟಿ ಗ್ರಾಮದ ವೀರಯೋಧ ಸುಬೇದಾರ ಮಾರುತಿ ಶಿವಲಿಂಗಪ್ಪ ಉದ್ದನ್ನವರ ಸುಧೀರ್ಘ 30 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ತಾಯ್ನಾಡಿಗೆ ಆಗಮಿಸುತ್ತಿದ್ದಾರೆ. ಯಶಸ್ವಿ ಸೇವೆ ಸಲ್ಲಿಸಿರುವ ಪ್ರಯುಕ್ತ ಗ್ರಾಮಸ್ಥರಿಂದ ಅಭಿನಂದನಾ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವು ಸ. 3 ಶುಕ್ರವಾರದಂದು ಶ್ರೀ ಬಸವೇಶ್ವರ ಹಿರಿಯ ಪ್ರಾಥಮಿ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಸಮಾರಂಭದಲ್ಲಿ ದಿವ್ಯ ಸಾನಿಧ್ಯವನ್ನು ಜೋಡಕುರಳಿಯ ಚಿದ್ಘನಾನಂದ ಸ್ವಾಮಿಗಳು, ಉದ್ಘಾಟಕರಾಗಿ ಕೆಎಮ್‍ಎಫ್ ಅಧ್ಯಕ್ಷರು ಹಾಗೂ ಅರಭಾಂವಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿ, ಅಧ್ಯಕ್ಷತೆಯನ್ನು ಗ್ರಾ.ಪಂ ಅಧ್ಯಕ್ಷೆ ಮಾಯವ್ವ ಲಂಗೋಟಿ ವಹಿಸುವರು. ಮುಖ್ಯ ಅತಿಥಿಗಳಾಗಿ ಬೆಳಗಾವಿ ಜಿಪಂ ಉಪಕಾರ್ಯದರ್ಶಿ ಬಸವರಾಜ ಹೆಗ್ಗನಾಯಕ, ತಹಶೀಲ್ದಾರ ಡಿ.ಜಿ ಮಹಾತ, ಬಿಇಒ ಅಜೀತ ಮನ್ನಿಕೇರಿ, ಮಾಜಿ ರಾಜ್ಯಾಧ್ಯಕ್ಷರ ಕರ್ನಾಟಕ ಪ್ರದೇಶ ಕುರುಬರ ಸಂಘದ ಡಾ. ರಾಜೇಂದ್ರ ಸಣ್ಣಕ್ಕಿ, ತಾಲೂಕಾಧ್ಯಕ್ಷ ಡಾ.ಎಸ್.ಎಸ್ ಪಾಟೀಲ, ಪುರಸಭೆ ಸದಸ್ಯ ಸಂತೋಷ ಸೋನವಾಲಕರ, ಭೂ ನ್ಯಾಯ ಮಂಡಳಿ ಸದಸಿ ಭೀಮಶಿ ಮಗದುಮ, ಮೂಡಲಗಿ ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ ಹಾಗೂ ಅತಿಥಿಗಳು ಗ್ರಾಮಸ್ಥರು ದೇಶ ಪ್ರೇಮಿಗಳು ಆಗಮಿಸುತ್ತಾರೆ.
Check Also
ತಮ್ಮ ಸ್ವಂತ ವೆಚ್ಚದಲ್ಲಿ ಅರಭಾವಿ ಕ್ಷೇತ್ರದಲ್ಲಿ ಜಾನುವಾರುಗಳ ಚರ್ಮ ಗಂಟು ರೋಗದ ಕಿಟ್‌ಗಳನ್ನು ವಿತರಿಸಿದ ಬಾಲಚಂದ್ರ ಜಾರಕಿಹೊಳಿ
Spread the loveಗೋಕಾಕ : ಜಾನುವಾರುಗಳಿಗೆ ಚರ್ಮ ಗಂಟು ರೋಗ ಹರಡುತ್ತಿದ್ದು, ಹಳ್ಳಿಗಳಿಗೆ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಜಾನುವಾರುಗಳನ್ನು …