ಭಾನುವಾರ , ಡಿಸೆಂಬರ್ 22 2024
kn
Breaking News

ಅಪ್ರಾಪ್ತ ದಲಿತ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ: ಆರೋಪಿಗಳನ್ನ ಗಲ್ಲು ಶಿಕ್ಷೆಗೆ ಒಳಪಡಿಸಲು ಒತ್ತಾಯ

Spread the love

ಮೂಡಲಗಿ: ತಾಲೂಕಿನ ರಾಜಾಪೂರ ಗ್ರಾಮದ ಅಪ್ರಾಪ್ತ ವಯಸ್ಕ ದಲಿತ ಹೆಣ್ಣುಮಗಳ ಮೇಲೆ ಜುಲೈ 12ರಂದು ಐದು  ಜನ ದುಷ್ಕರ್ಮಿಗಳು ಸೇರಿ ಸಾಮೂಹಿಕ ಅತ್ಯಾಚಾರ ವ್ಯಸಗಿದ್ದರು.

ಇದನ್ನ ಖಂಡಿಸಿದ ಮೂಡಲಗಿ ತಾಲೂಕಾ ದಲಿತ ಸಂಘಟನೆಗಳ ಒಕ್ಕೂಟ, ಪಟ್ಟಣದ ಕಲ್ಮೇಶ್ವರ ವೃತ್ತವನ್ನು ಬಂದ ಮಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ಕೃತ್ಯಗಳು ಮೇಲೆಂದ ಮೇಲೆ ದಲಿತ ಸಮುದಾಯದ ಮಹಿಳೆಯರನ್ನೆ ಗುರಿಯಾಗಿಸಿಕೊಂಡು ಇಂತಹ ಕೃತ್ಯಗಳು ಜರಗುತ್ತದ್ದು, ಭಾರತ ದೇಶದಲ್ಲಿ ಇಂತಹ ಅಮಾನವೀಯ ಘಟನೆಗಳನ್ನ ತಡೆಗಟ್ಟುವಲ್ಲಿ ರಾಜ್ಯ ಸರ್ಕಾರದ ವೈಪಲ್ಯವೆ ಎದ್ದು ಕಾಣುತ್ತಿದೆ. ಇದಕ್ಕೆ ಕರ್ನಾಟಕ ಸರ್ಕಾರವು ಹೊರತಾಗಿಲ್ಲಾ ಎಂದು ಅಕ್ರೋಷ ವ್ಯಕ್ತಪಡಿಸಿದರು.

ಕರ್ನಾಟಕದಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಿದೆ. ಹಾಗೂ ದಲಿತರ ಮೇಲೆಯೂ ಕೂಡ ನಿರಂತರ ದೌರ್ಜನ್ಯ ದಬ್ಬಾಳಿಕೆ ನಡೆಯುತ್ತಲೆ ಇವೆ. ಇಂತಹ ಘಟನೆಗಳು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೆ ಬುಡಮೇಲು ಮಾಡುವ ಹೀನ ಕೃತ್ಯಗಳಾಗಿರುತ್ತವೆ.

ಸಂವಿದಾನದಲ್ಲಿ ಮಹಿಳೆಯರಿಗಾಗಿ ಸಾಕಷ್ಟು ಕಾನೂನುಗಳಿದ್ದರೂ ನಿರರ್ಥಕವಾಗಿರುತ್ತವೆ. ಇಂತಹ ವೈಪಲ್ಯಗಳ ಹೊಣೆಯನ್ನು ಆಳುವ ಸರಕಾರಗಳೆ ಹೋಗಬೇಕಾಗುತ್ತದೆ ಎಂದು ಸರ್ಕಾರದ ವಿರುದ್ದ ದ್ವನಿ ಎತ್ತಿದ ಸಂಘಟನೆಯ ಮುಖ್ಯಸ್ತರು.

ಸದರಿ ಗ್ರಾಮದಲ್ಲಿ ಈ ಘಟನೇಯು ದಿನಾಂಕ 12-7-2021ರಂದೇ ನಡೆದಿದ್ದು ಇದೂವರೆಗೆ ಐದು ಜನರಲ್ಲಿ ನಾಲ್ಕು ಜನರನ್ನ ಬಂದಿಸಿದ್ದು, ಇನ್ನೊಬ್ಬ ಆರೋಪಿಯನ್ನ ಬೇಗನೆ ಹುಡುಕಿ ಬಂದಿಸಲು ಆದೇಶ ನೀಡುವಂತೆ ಸರಕಾರಕ್ಕೆ ಒತ್ತಾಯಿಸಿದರು. ಈ ಐದು ಜನ ಕಾಮುಕರ ಮೇಲೆ ಉಗ್ರ ಕಾನೂನು ಕ್ರಮ ಕೈಗೊಂಡು ಗಲ್ಲಿಗೇರಿಸುವ ವ್ಯವಸ್ಥೆಯಾಗಬೇಕು. ಒಂದು ವೇಳೆ ತನಿಖೆಯಲ್ಲಿ ಏನಾದರೂ ಲೋಪದೋಷ ಕಂಡು ಬಂದರೆ ಮತ್ತು ಆರೋಪಿಗಳ ಮೇಲೆ ಕ್ರಮ ಜರುಗದಿದ್ದರೆ ರಾಜ್ಯಾದ್ಯಂತ ದಲಿತರು ಬೀದಿಗಿಳಿದು ಸರಕಾರದ ವಿರುದ್ದ ಪ್ರತಿಭಟನೆ, ಸತ್ಯಾಗ್ರಹವನ್ನ ಮಾಡುವುದಾಗಿ ಸರಕಾರಕ್ಕೆ ಎಚ್ಚರಿಕೆಯನ್ನ ನೀಡುತ್ತಾ, ಮೂಡಲಗಿ ತಹಶಿಲ್ದಾರರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ವರದಿ: ಶಶಿಕುಮಾರ್ ದೊಡಮನಿ


Spread the love

About gcsteam

Check Also

ತಮ್ಮ ಸ್ವಂತ ವೆಚ್ಚದಲ್ಲಿ ಅರಭಾವಿ ಕ್ಷೇತ್ರದಲ್ಲಿ ಜಾನುವಾರುಗಳ ಚರ್ಮ ಗಂಟು ರೋಗದ ಕಿಟ್‌ಗಳನ್ನು ವಿತರಿಸಿದ ಬಾಲಚಂದ್ರ ಜಾರಕಿಹೊಳಿ

Spread the loveಗೋಕಾಕ : ಜಾನುವಾರುಗಳಿಗೆ ಚರ್ಮ ಗಂಟು ರೋಗ ಹರಡುತ್ತಿದ್ದು, ಹಳ್ಳಿಗಳಿಗೆ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಜಾನುವಾರುಗಳನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page