ಮೂಡಲಗಿ: ಕೊರೋನಾ ವೈರಸ್ ಸೋಂಕು ನಿಯಂತ್ರಣದ ಲಾಕ್‍ಡೌನ್ ಸಮಯದಲ್ಲಿ ಬಿಸಿ ಲು,ಗಾಳಿ ಲೆಕ್ಕಿಸದೆ ಕರ್ತವ್ಯ ನಿರ್ವಹಿಸುತ್ತಿರುವ ಪೋಲಿಸ ಸಿಬ್ಬಂದಿಗೆ ಮತ್ತು ಯಾವುದೇ ಫಲಾಪೇಕ್ಷೆ ಇಲ್ಲದೆ ಕೋವಿಡ್‍ನಿಂದ ಮೃತಪಟ್ಟ ಶವಗಳನ್ನು ಅಂತ್ಯ ಸಂಸ್ಕಾರ ಮಾಡುತ್ತಿರುವ ಮೂಡಲಗಿ ಅಂಜುಮನ್ ಇಸ್ಲಾಂ ಕಮಿಟಿ ಯುವ ಪಡೆಗೆ, ಹಾಗೂ ಪತ್ರಕರ್ತರಿಗೆ ಇಲ್ಲಿಯ ಶಿವಲಿಂಗೇಶ್ವರ ಕ್ಯಾಂಟಿನ್ ಮಾಲಿಕ ಚನ್ನಯ್ಯಾ ನಿರ್ವಾಣಿ ಅವರು ಪಟ್ಟಣ ಸಂಪದಯ್ಯಾ ಮಠದ ಆವರಣದಲ್ಲಿ ಬೆಳಗಿನ ಉಪಹಾರದ ವ್ಯವಸ್ಥೆ ಮಾಡಿದರು.
ಉಪಹಾರ ವಿತರಿಸಿ ಮಾತನಾಡಿದ ಅವರು, ಈ ಲಾಕ್‍ಡೌನ ಸಮಯದಲ್ಲಿ ಕೊರೋನಾ ಯೋಧರಾಗಿ ಸಾರ್ವಜನಿಕರ ರಕ್ಷಣೆಗಾಗಿ ಕಾರ್ಯ ನಿರ್ವಹಿಸುತ್ತಿರುವ ಪೋಲಿಸ ಸಿಬ್ಬಂದಿಗಳ ಕಾರ್ಯ, ಪತ್ರಕರ್ತರ ಕಾರ್ಯ ಮತ್ತು ಮಾನವೀಯತೆ ಕಾರ್ಯ ಮಾಡುತ್ತಿರುವ ಅಂಜುಮನ ಯುವಕರ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಈ ಸಂಧಭ್ದಲ್ಲಿ ಪಿಎಸ್‍ಐ ಎಚ್ ವಾಯ್ ಬಾಲದಂಡಿ, ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ, ಶಿವಾನಂದ ನಿರ್ವಾಣಿ, ರಾಚಯ್ಯ ನಿರ್ವಾಣಿ, ನಿಂಗಯ್ಯ ನಿರ್ವಾಣಿ, ಪೋಲಿಸ ಸಿಬ್ಬಂದಿ, ಅಂಜುಮನ ಯುವಕರು ಹಾಗೂ ಪತ್ರಕರ್ತರು ಇದ್ದರು.
Check Also
ತಮ್ಮ ಸ್ವಂತ ವೆಚ್ಚದಲ್ಲಿ ಅರಭಾವಿ ಕ್ಷೇತ್ರದಲ್ಲಿ ಜಾನುವಾರುಗಳ ಚರ್ಮ ಗಂಟು ರೋಗದ ಕಿಟ್‌ಗಳನ್ನು ವಿತರಿಸಿದ ಬಾಲಚಂದ್ರ ಜಾರಕಿಹೊಳಿ
Spread the loveಗೋಕಾಕ : ಜಾನುವಾರುಗಳಿಗೆ ಚರ್ಮ ಗಂಟು ರೋಗ ಹರಡುತ್ತಿದ್ದು, ಹಳ್ಳಿಗಳಿಗೆ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಜಾನುವಾರುಗಳನ್ನು …