ಮೂಡಲಗಿ: ಗ್ರಾಮೀಣ ಪ್ರದೇಶದಲ್ಲಿ ಕೋವಿಡ್ ಸೋಂಕಿತರ ಪ್ರಮಾಣ ಹೆಚ್ಚಾಗಿ ಕಂಡು ಬರುತ್ತಿರುವ ಕಾರಣದಿಂದ ಸರ್ಕಾರ ವೈದ್ಯರ ನಡಿಗೆ ಹಳ್ಳಿಯ ಕಡೆಗೆ ಎಂಬ ಕಾರ್ಯಕ್ರಮ ಜಾರಿಗೆ ತಂದಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ಸೋಮವಾರ ಮೇ 24 ರಂದು ತುಕ್ಕಾನಟ್ಟಿ ಗ್ರಾಮ ಪಂಚಾಯತ ಆವರಣದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದ ಈರಣ್ಣ ಕಡಾಡಿ ಅವರು ಗ್ರಾಮದ ಪ್ರತಿಯೊಬ್ಬ ವ್ಯಕ್ತಿಯನ್ನು ರ‍್ಯಾಪಿಡ್ ಪರೀಕ್ಷೆಗೆ ಒಳಪಡಿಸಲಾಗುವುದು. ಹೀಗೆ ಪರೀಕ್ಷೆಗೆ ಒಳಪಟ್ಟ ವ್ಯಕ್ತಿಗಳಲ್ಲಿ ಕರೋನಾ ಸೋಂಕು ದೃಢಪಟ್ಟರೇ ಅವರನ್ನು ಜನರಿಂದ ಬೇರ್ಪಡಿಸಿ ನಾಗನೂರ ಪಟ್ಟಣದಲ್ಲಿ ಪ್ರಾರಂಭಿಸಲಾದ ಕರೋನಾ ಆರೈಕೆ ಕೇಂದ್ರಗಳಿಗೆ ಕಳುಹಿಸಿಕೊಡಲಾಗುವುದು. ಹೀಗೆ ಮಾಡುವುದರಿಂದ ಕರೋನಾ ಸರಪಳಿಯನ್ನು ತುಂಡರಿಸಿದoತಾಗುತ್ತದೆ. ಆದ ಕಾರಣ ಗ್ರಾಮದ ಎಲ್ಲಾ ಜನರು ಸ್ವಯಂ ಪ್ರೇರಣೆಯಿಂದ ಕೋವಿಡ್ ಪರೀಕ್ಷೆ ಒಳಪಡಬೇಕೆಂದು ವಿನಂತಿಸಿದರು.
ಸೋoಕಿನ ನಂತರ ಜನರು ನಿರ್ಲಕ್ಷ ವಹಿಸಿದ ಕಾರಣದಿಂದಾಗಿ ಸಾವಿನ ಪ್ರಮಾಣಗಳು ಹೆಚ್ಚಾಗುತ್ತಿದ್ದು ಪ್ರಾರಂಭದಲ್ಲಿ ಅಗತ್ಯ ಮುನ್ನಚ್ಚರಿಕೆ ಕ್ರಮ ವಹಿಸಿ ಚಿಕಿತ್ಸೆ ಪಡೆದರೇ ಸಾಕಷ್ಟು ಸಾವಿನ ಪ್ರಮಾಣವನ್ನು ಕಡಿಮೆ ಮಾಡಬಹುದಾಗಿದೆ. ಹೀಗಾಗಿ ಈ ಬಗ್ಗೆ ಗ್ರಾಮದ ಜನರಲ್ಲಿ ಜಾಗೃತಿ ಮೂಡಿಸಲು ವೈದ್ಯರು, ಎ.ಎನ್.ಎಮ್, ಆಶಾ, ಅಂಗನವಾಡಿ ಕಾರ್ಯಯರ್ತರಿಗೆ ಸೂಚಿಸಿದರು.
ತಹಶೀಲ್ದಾರ ಡಾ. ಮೋಹನಕುಮಾರ ಭಸ್ಮೆ, ಅರಭಾವಿ ಶಾಸಕರ ಆಪ್ತ ಸಹಾಯಕ ನಾಗಪ್ಪ ಶೇಖರಪ್ಪಗೊಳ, ತಾಲೂಕಾ ಆರೋಗ್ಯಾಧಿಕಾರಿ ಡಾ. ಮುತ್ತಣ್ಣ ಕೊಪ್ಪದ, ಶಿಕ್ಷಕಣಾಧಿಕಾರಿ ಅಜೀತ ಮನ್ನಿಕೇರಿ, ಮೂಡಲಗಿ ಸಿಪಿಐ ವೆಂಕಟೇಶ ಮುರನಾಳ, ಘಟಪ್ರಭಾ ಸಿಪಿಐ ಶ್ರೀಶೈಲ ಬ್ಯಾಕೂಡ್, ಗ್ರಾಮ ಪಂಚಾಯತ ಅಧ್ಯಕ್ಷ ಕುಮಾರ ಮರ್ದಿ, ಪಿಡಿಒ ವೀರಭದ್ರ ಗುಂಡಿ, ಭರಮಣ್ಣ ಉಪ್ಪಾರ, ಸೋಮು ಹುಲಕುಂದ, ರವೀಂದ್ರ ಗದಾಡಿ, ತಿಪ್ಪಣ್ಣ ಹುಲಕುಂದ, ಡಾ. ವಂಸತ್ ನಾಯ್ಕವಾಡಿ, ಗ್ರಾಪಂ ಸದಸ್ಯರು ಹಾಗೂ ಟಾಸ್ಕ್ ಪೋರ್ಸ ಸಮಿತಿ ಸದಸ್ಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.