ಮೂಡಲಗಿ : ಈಗಾಗಲೇ ಸುಮಾರು ಆರೇಳು ಚಿತ್ರಗಳಲ್ಲಿ ಚಿಕ್ಕ ಪಾತ್ರಗಳಲ್ಲಿ ನಟಿಸಿರುವ ಮೂಡಲಗಿ ಕಲಾವಿದ ಮಂಜುನಾಥ ರೇಳೆಕರ ಕನ್ನಡದ ಸ್ಟಾರ್ ನಟರೊಬ್ಬರ ಸಿನೆಮಾಗೆ ಆಯ್ಕೆ ಆಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು ನಿಜ. ಇನ್ನು ಆ ಸ್ಟಾರ್ ನಟರು ಯಾರೆಂದರೆ ಕನ್ನಡದ ಖ್ಯಾತ ನಟಿ ಪ್ರಮೀಳಾ ಜೋಷಾಯ್ ಮತ್ತು ನಟಿ ಮೇಘನಾ ರಾಜ್ ಕುಟುಂಬದವರಲ್ಲಿ ಒಬ್ಬರಾದ ನಟ ಅಲ್ಟಿಮೇಟ್ ಸ್ಟಾರ್ ತೇಜ್, ಈಗಾಗಲೇ ಇವರು ಕನ್ನಡದ ಮೀಸೆ ಚಿಗುರಿದಾಗ, ಮಹೇಶ್ವರ, ರಿವೈಂಡ್ ತಮಿಳಿನ ಗಾಂಠಮ್, ಕಾಧಲುಕ್ಕು ಮರನಮಿಲೈ, ಕೊಂಜೆಮ್‍ವೆಯಿಲ್ ಕೊಂಜನ ಮಜೈ ಸಿನೆಮಾಗಳಲ್ಲಿ ನಟಿಸಿದ ತೇಜ್ ಅವರು ಈಗ ರಾಮಾಚಾರಿ 2.0 ಮುಖ್ಯ ಪಾತ್ರದಲ್ಲಿ ನಟನೆ ಮಾಡಲಿದ್ದು ಸದ್ಯದಲ್ಲೆ ಚಿತ್ರೀಕರಣ ಆರಂಭವಾಗಲಿದೆ ಎನ್ನಲಾಗಿದೆ. ಈ ಚಿತ್ರದಲ್ಲಿ ನಟನೆ ಮಾಡಲು ನಮ್ಮ ಮೂಡಲಗಿ ಕಲಾವಿದ ಮಂಜುನಾಥ ಆಯ್ಕೆ ಆಗಿರೋದು ಮೂಡಲಗಿ ಜನತೆಯಲ್ಲಿ ಖುಷಿ ತಂದಿದೆ. ಬಡ ಕುಟುಂಭದಿಂದ ಬಂದಂತಹ ಮಂಜುನಾಥ ಅವರಿಗೆ ಹೀಗೆಯೇ ಹತ್ತಾರು ಒಳ್ಳೆಯ ಅವಕಾಶ ಸಿಗಲಿ ಎನ್ನುವುದೇ ಸ್ಥಳೀಯರ ಆಶಯ.
