ಮೂಡಲಗಿ: ಕೊರೊನಾ ಲಾಕ್‍ಡೌನ್ ಸಂದರ್ಭದಲ್ಲಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಶಿಲುಕಿದ ತಾಲೂಕಿನ ಪೆಂಡಾಲ ಸಪ್ಲಾಯರ್ಸ,ಲೈಟಿಂಗ ಮತ್ತು ಧ್ವನಿವರ್ದಕ ವೃತ್ತಿಪರ ಕಾರ್ಮಿಕರಿಗೆ ವಿಶೇಷ ಪ್ಯಾಕೇಜ್‍ನ್ನು ಸರ್ಕಾರವು ಘೋಷಿಸಬೇಕೆಂದು ಮೂಡಲಗಿ ತಾಲ್ಲೂಕಾ ಪೆಂಡಾಲ ಮತ್ತು ಡೆಕೊರೆಟರ್ಸ,ಲೈಟಿಂಗ,ಸೌಂಡ,ಸಪ್ಲಾಯರ್ಸ ಮಾಲಿಕರ ಸಂಘದವರು ಬುಧವಾರ ತಹಶೀಲ್ದಾರ ಡಿ.ಜಿ.ಮಹಾತ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ನೀಡಿದರು.
ನಾವು ಅಸಂಘಟಿತ ವೃತ್ತಿಪರ ಕಾರ್ಮಿಕರಾಗಿದ್ದು ಕೊರೋನಾ ಲಾಕ್‍ಡೌನ್ ಸಮಯದಲ್ಲಿ ಮದುವೆ,ಧಾರ್ಮಿಕ,ರಾಜಕೀಯ,ಶೈಕ್ಷಣಿಕ ಇನ್ನಿತರ ಸಭೆ,ಸಮಾರಂಭಗಳು ರದ್ದಾಗಿ ತುಂಬ ತೊಂದರೆ ಅನುಭವಿಸುತ್ತಿದ್ದು ಜೀವನ ನಡೆಸುವುದು ದುಸ್ತರವಾಗಿದೆ ಬ್ಯಾಂಕಿನಿಂದ ಪಡೆದುಕೊಂಡ ಸಾಲದ ಕಂತು,ಬಡ್ಡಿಯನ್ನು ತುಂಬಲು ತೊಂದರೆ ಆಗುತ್ತಿದೆ ತಾಲೂಕಿನಲ್ಲಿ 50ಕ್ಕೂ ಅಧಿಕ ಮಾಲಿಕರಿದ್ದು 500ಜನ ಕೆಲಸಗಾರರು ಕೆಲಸವಿಲ್ಲದೇ ತೊಂದರೆ ಅನುಭವಿಸುವಂತಾಗುದೆ. ಸದ್ಯ ಸರಕಾರ ನಮಗೆ ಯಾವದೆ ರೀತಿಯ ಪ್ಯಾಕೇಜ್ ಮತ್ತು ಸೌಲಭ್ಯವನ್ನು ಕಲ್ಪಿಸಿಕೊಡದೆ ಸಂಪೂರ್ಣವಾಗಿ ನಿರ್ಲಕ್ಷಿಸಿದ್ದು ನಮಗೆಲ್ಲ ನೋವು ತಂದಿದೆ. ಸಾಕಷ್ಟು ಜನ ಬಡವರಿದ್ದು, ತೊಂದರೆಯಲ್ಲಿರುವರು. ಲಾಕ್‍ಡೌನ್ ಸಂದರ್ಭದಲ್ಲಿ ಆಗಿರುವ ತೊಂದರೆಗೆ ಪ್ರತಿಯಾಗಿ ಸರ್ಕಾರವು ವಿವಿಧ ವರ್ಗದ ಜನರಿಗೆ ವಿಶೇಷ ಪ್ಯಾಕೇಜ್ ನೀಡಿದೆ . ನಮ್ಮ ವರ್ಗಕ್ಕೂ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಅಸ್ಲಂ ಕುರಬೇಟ್,ಉಪಾದ್ಯಕ್ಷ ರಮೇಶ ಮೇದಾರ,ಇಬ್ರಾಹಿಂ ಅತ್ತಾರ,ಖಾದೀರ ರಾಜೇಖಾನ,ನಿಜಾಮ ಡಾಂಗೆ,ಸಂತೋಷ ಸಂಗಮಿ,ಮಂಜುನಾಥ ರಾವಳ,ರಾಜು ಮುಗುಟಖಾನ,ಶಾನೂರ ಅತ್ತಾರ,ಭೀಮಪ್ಪ ಮೇತ್ರಿ,ಸಂಗಯ್ಯ ಮಠಪತಿ,ಮಲೀಕಜಾನ ಸಣ್ಣಕ್ಕಿ,ರಾಜು ಮೋಮಿನ ಇನ್ನಿತರರು ಇದ್ದರು.