ಗುರುವಾರ , ನವೆಂಬರ್ 21 2024
kn
Breaking News

ರಾಜ್ಯಾಧ್ಯಕ್ಷರ ಮೇಲೆ ತಳ್ಳಾಟ- ನೂಕಾಟ ಮಾಡಿದವರು ಕ್ಷಮೆಯಾಚನೆ

Spread the love

ಕೊಪ್ಪಳ: ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರು ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕರಾದ ಬೀರಪ್ಪ ಅಂಡಗಿ ಅವರ ಮೇಲೆ ತಳ್ಳಾಟ ಹಾಗೂ ನೂಕಾಟ ಮಾಡಿವರು ನಡೆದ ಘಟನೆಯ ಕುರಿತಾಗಿ ಕ್ಷಮೆಯಾಚನೆ ಮಾಡಿದ್ದಾರೆ.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳ ಸಭೆಗೆ ತೆರಳಿದ ಬೀರಪ್ಪ ಅಂಡಗಿ ಅವರ ಮೇಲೆ ಸಂಘದ ಪದಾಧಿಕಾರಿಗಳಲ್ಲದವರು ಅವರನ್ನು ತಳ್ಳಾಟ ಹಾಗೂ ನೂಕಾಟ ಮಾಡುವುದರ ಮೂಲಕ ಹಲ್ಲೆಗೆ ಮುಂದಾಗಿದ್ದರು.ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಭೆಗೆ ಆಹ್ವಾನ ನೀಡದೆ ಜೊತೆಗೆ ನಿಯಮದಲ್ಲಿ ಇಲ್ಲದೇ ಸಿ.ಆರ್.ಪಿ.ಹಾಗೂ ಬಿ.ಆರ್.ಪಿ.ಅವರ ಮೇಲೆ ಯಾವ ರೀತಿಯಲ್ಲಿ ದೂರು ನೀಡಿದ್ದಿರಿ ಎಂಬ ವಿಷಯವನ್ನು ಪ್ರಸ್ತಾಪಿಸಿದ್ದು,ಘಟನೆಗೆ ಮೂಲಕ ಕಾರಣವಾಗಿತ್ತು.ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರ ಮೇಲೆ ಹಲ್ಲೆಗೆ ಯತ್ನ ನಡೆದಿರುವ ಘಟನೆಯ ಬಗ್ಗೆ ರಾಜ್ಯಾಧ್ಯಂತಹ ವಿಕಲಚೇತನ ನೌಕರರು ಆಕ್ರೋಶ ವ್ಯಕ್ತಪಡಿಸಿದ್ದರು.ಅಲ್ಲದೇ ತಳ್ಳಾಟ ಹಾಗೂ ನೂಕಾಟ ಮಾಡಿದವರು ಕೂಡಲೇ ಕ್ಷಮೆ ಕೆಳಬೇಕು ಇಲ್ಲದಿದ್ದರೆ ವಿಕಲಚೇತನ ನೌಕರರ ಸಂಘದ ವತಿಯಿಂದ ಜ.೨೯ ರಂದು ಪ್ರತಿಭಟನೆ ನಡೆಸುವ ಬಗ್ಗೆ ಭಾನುವಾರ ಹಮ್ಮಿಕೊಂಡಿದ್ದ ತಾಲೂಕ ಮಟ್ಟದ ವಿಕಲಚೇತನ ನೌಕರರ ಸಭೆಯಲ್ಲಿ ತಿರ್ಮಾನಿಸಲಾಗಿತ್ತು.ಇದನ್ನು ಅರಿತು ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರ ಮೇಲೆ ನೂಕಾಟ ಹಾಗೂ ತಳ್ಳಾಟ ನಡೆಸಿದವರು ವಿಕಲಚೇತನ ನೌಕರರ ಕ್ಷಮೆಯಾಚನೆ ಮಾಡಿದ್ದಾರೆ.
ಈ ಸಮಯಲ್ಲಿ ಮಾತನಾಡಿದ ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ,ಯಾವುದೇ ಸಭೆ ಇರಬಹುದು ಸಭೆಯಲ್ಲಿ ಪರಸ್ಪರ ವಿಷಯಗಳ ಕುರಿತು ಚರ್ಚೆಯಾಗಬೇಕು ಹೊರೆತು ತಳ್ಳಾಟ ಹಾಗೂ ನೂಕಾಟ ಮಾಡುವುದು ಸರಿಯಾದ ಕ್ರಮವಲ್ಲ ಜೊತೆಗೆ ಯಾವುದೇ ಸಭೆಗೆ ಇರಬಹುದು ಆ ಸಭೆಗೆ ಸಂಧಿಸಿದವರು ಮಾತ್ರ ಭಾಗವಹಿಸಬೇಕು.ಸಭೆಯ ಕುರಿತಾಗಿ ಪ್ರಶ್ನೆ ಮಾಡುವ ಅಧಿಕಾರವನ್ನು ಆ ಸಂಘದ ನಿರ್ಧೇಶಕರು ಹೊಂದಿರುತಾರೆ ಅಧ್ಯಕ್ಷರಾದವರು ಅವರ ಪ್ರಶ್ನೆಗೆ ಸರಿಯಾದ ಉತ್ತರ ನೀಡುವ ಜವಾಬ್ದಾರಿಯನ್ನು ಹೊಂದಿರುತ್ತಾರೆ.ಮತ್ತೊಮ್ಮೆ ಈ ರೀತಿಯ ಕೃತವನ್ನು ಯಾರ ಮೇಲೂ ಮಾಡಬಾರದು ಎಂದು ಹೇಳಿದರು.
ತಳ್ಳಾಟ ಹಾಗೂ ನೂಕಾಟ ನಡೆಸಿದವರು ಕ್ಷಮೆಯಾಚನೆ ಮಾಡಿದ್ದರಿಂದ ಈ ಘಟನೆಯು ಸುಖಾಂತ್ಯ ಕಂಡಿದೆ.


Spread the love

About gcsteam

Check Also

ಗಾನ ಕೋಗಿಲೆ ಲತಾ ಮಂಗೇಶ್ಕರ್ ನಿಧನ-ಸಂಸದ ಕಡಾಡಿ ಸಂತಾಪ

Spread the loveಮೂಡಲಗಿ: ಏಳು ದಶಕಗಳ ಕಾಲ ತಮ್ಮ ಗಾನಸುಧೆಯಿಂದ ಸಂಗೀತ ಜಗತ್ತನ್ನು ಶ್ರೀಮಂತಗೊಳಿಸಿದ ಗಾನ ಕೋಗಿಲೆ, ಭಾರತರತ್ನ, ಪದ್ಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page