ಬುಧವಾರ , ಸೆಪ್ಟೆಂಬರ್ 18 2024
kn
Breaking News

ದೇವಿ ದರ್ಶನಕ್ಕಾಗಿ ವಿಕಲಚೇತನರ ಪ್ರತ್ಯೇಕ ಪ್ರವೇಶ ದ್ವಾರದ ನಿರ್ವಹಣೆ ಅಳಿಸಿ ಹೋದ ನಾಮಫಲಕವನ್ನು ಅಳವಡಿಸಿ : ಬೀರಪ್ಪ ಅಂಡಗಿ

Spread the love

ಕೊಪ್ಪಳ: ಜಿಲ್ಲೆಯ ಪ್ರಸಿದ್ದ ದೇವಸ್ಥಾನವಾದ ಹುಲಿಗೇಮ್ಮ ದೇವಿ ದರ್ಶನಕ್ಕಾಗಿ ಬರುವ ವಿಕಲಚೇತನರಿಗೆ ಅವರಿಗಾಗಿ ಮೀಸಲಿರಿಸಿದ ಪ್ರತ್ಯೇಕ ಪ್ರವೇಶ ದ್ವಾರದ ಸರಿಯಾದ ನಿರ್ವಹಣೆ ಹಾಗೂ ಅಳಿಸಿ ಹೋದ ನಾಮಫಲಕವನ್ನು ಪುನ: ಹಾಕುವಂತೆ ಒತ್ತಾಯಿಸಿ ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಹುಲಿಗೇಮ್ಮ ದೇವಿ ದೇವಸ್ಥಾನದ ಕಾರ್ಯನಿರ್ವಹಕ ಅಧಿಕಾರಿಗಳಾದ ಅರವೀಂದ ಸುತಗೊಂಡ ಅವರಿಗೆ ಮನವಿ ಸಲ್ಲಿಸಿದರು.
ಈ ಸಮಯದಲ್ಲಿ ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಮಾತನಾಡುತ್ತಾ,ರಾಜ್ಯ ಹಾಗೂ ಕೇಂದ್ರ ಸರಕಾರದ ಅಧಿನದಲ್ಲಿ ಕಾರ್ಯನಿರ್ವಹಿಸುತ್ತಿರುವ ದೇವಸ್ಥಾನಗಳಲ್ಲಿ ದರ್ಶನಕ್ಕಾಗಿ ಆಗಮಿಸುವ ವಿಕಲಚೇತನರಿಗೆ ಹಾಗೂ ಅವರ ಸಹಾಯಕರಿಗೆ ಸಾಮಾನ್ಯರಂತೆ ಸರತಿ ಸಾಲಿನಲ್ಲಿ ನಿಲ್ಲಿಸದೇ ನೇರವಾಗಿ ದರ್ಶನ ಮಾಡುವ ಅವಕಾಶ ನೀಡುವಂತೆ ಆದೇಶದಲ್ಲಿ ತಿಳಿಸಲಾಗಿದೆ.ಆದರೆ ಹುಲಗೇಮ್ಮ ದೇವಿ ದೇವಸ್ಥಾನದಲ್ಲಿ ಮಾತ್ರ ಈ ಆದೇಶ ಅನ್ವಯ ಆಗದ ರೀತಿಯಲ್ಲಿ ಅಲ್ಲಿನ ಸಿಬ್ಬಂದಿಗಳು ನಡೆದುಕೊಳ್ಳುತ್ತಿದ್ದ ರೀತಿಯನ್ನು ಮನಗಂಡು ಈ ಹಿಂದೆ ಕಾರ್ಯನಿರ್ವಹಕ ಅಧಿಕಾರಿಗಳಾಗಿದ್ದ ಚಂದ್ರಮೌಳಿ ಅವರು ದೇವಸ್ಥಾನದಲ್ಲಿ ವಿಕಲಚೇತನರು ದೇವರ ದರ್ಶನ ಮಾಡಲು ಪ್ರತ್ಯೇಕವಾದ ದ್ವಾರವನ್ನು ಬೀಡುವುದರ ಜೊತೆಗೆ ದ್ವಾರದ ಮೇಲೆ ವಿಕಲಚೇನರಿಗೆ ಮಾತ್ರ ದರ್ಶನಕ್ಕೆ ಪ್ರವೇಶ ಎಂದು ನಾಮಫಕಲ ಹಾಕಲಾಗಿತ್ತು.ಆದರೆ ಆ ನಾಮ ಫಕಲ ಇಂದು ಮಾಯವಾಗಿದೆ.ದೇವಸ್ಥಾನದಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ವಿಕಲಚೇತನರಿಗೆ ನೇರವಾಗಿ ದರ್ಶನ ಮಾಡಲು ಈ ಇರುವ ಆದೇಶದ ಬಗ್ಗೆ ಸರಿಯಾದ ಮಾಹಿತಿ ಇಲ್ಲದ ಕಾರಣ ಅನೇಕ ಬಾರಿ ವಿಕಲಚೇತನರಿಗೆ ಪ್ರವೇಶವನ್ನು ನಿರಾಕರಿಸಿದ್ದಾರೆ.ದೇವಸ್ಥಾನದಲ್ಲಿ ಕೆಲಸ ಮಾಡುವ ಎಲ್ಲಾ ಸಿಬ್ಬಂದಿಗಳಿಗೆ ಇದರ ಬಗ್ಗೆ ಸರಿಯಾದ ತರಬೇತಿ ನೀಡಬೇಕು.ಸರಕಾರದ ಆದೇಶದಂತೆ ವಿಕಲಚೇತನರಿಗೆ ದೇವರ ದರ್ಶನ ಮಾಡಲು ನೇರ ಅವಕಾಶವನ್ನು ಕಲ್ಪಿಸಿ ಕೊಡುವುದರ ಜೊತೆಗೆ ಈ ಹಿಂದಿನ ರೀತಿಯಲ್ಲಿ ಇರುವಂತೆ ಪ್ರವೇಶ ದ್ವಾರದಲ್ಲಿ ಹಾಕಲಾಗಿದ್ದ ನಾಮಫಲಕವನ್ನು ಹಾಕುವುದು ಮತ್ತು ಅದರ ಸರಿಯಾದ ನಿರ್ವಹಣೆ ಮಾಡುವಂತೆ ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಬಳಿಕ ಕಾರ್ಯನಿರ್ವಹಕ ಅಧಿಕಾರಿ ಅರವಿಂದ ಸುತಗೊಂಡ ಮಾತನಾಡಿ,ವಿಕಲಚೇತನರಿಗೆ ಸಾಮಾನ್ಯರಂತೆ ಸರತಿ ಸಾಲಿನಲ್ಲಿ ನಿಲ್ಲಿಸದೇ ನೇರ ದರ್ಶನಕ್ಕೆ ಅವರ ಜೊತೆಗೆ ಒಬ್ಬ ಸಹಾಯಕರನ್ನು ಕೂಡಾ ಕಳಿಸಿ ಕೊಡುವ ಅವಕಾಶವಿದೆ.ವಿಕಲಚೇತನರಿಗೆ ನೇರ ದರ್ಶನ ಮಾಡಲು ತೊಂದರೆ ಉಂಟು ಮಾಡುವ ಸಿಬ್ಬಂಧಿಗಳ ವಿರುದ್ದ ಕ್ರಮ ಕೈಗೊಳ್ಳುತ್ತೆನೆ.ವಿಕಲಚೇತನರಿಗಾಗಿ ಈ ಹಿಂದಿನoತೆ ಪ್ರವೇಶ ದ್ವಾರದಲ್ಲಿ ವಿಕಲಚೇತನರಿಗೆ ದರ್ಶನದ ದ್ವಾರ ಎಂದು ನಾಮಫಕಲ ಹಾಕುವುದರ ಜೊತೆಗೆ ಅದರ ಸರಿಯಾದ ನಿರ್ವಹಣೆ ಮಾಡುವುದರ ಮೂಲಕ ವಿಕಲಚೇತನರಿಗೆ ಅನುಕೂಲ ಮಾಡಿಕೊಡುವುದಾಗಿ ಭರವಸೆ ನೀಡಿದರು.


Spread the love

About gcsteam

Check Also

ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಆಗ್ರಹಿಸಿ ಮೂಡಲಗಿಯಲ್ಲಿ ಪ್ರತಿಭಟನೆ

Spread the loveಮೂಡಲಗಿ: ಅರಭಾವಿ ಕ್ಷೇತ್ರದ ಶಾಸಕರು ಹಾಗೂ ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಉಪ್ಪಾರ ಸಮಾಜದ ಮೀಸಲಾತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page