ಕೊಪ್ಪಳ: ಸಿ.ಪಿ.ಎಸ್.ಶಾಲೆಯ ಶಿಕ್ಷಕರಾದ ಬೀರಪ್ಪ ಅಂಡಗಿ ಚಿಲವಾಡಗಿ ಅವರ ಮೇಲೆ ಭ್ರಷ್ಟಾಚಾರ ಹಾಗೂ ಹಗರಣ ಸೇರಿದಂತೆ ವಿವಿಧ ಅಂಶಗಳನ್ನು ಒಳಗೊಂಡಂತೆ ಬಸವರಾಜ ಶೀಲವಂತರ ಎಂಬುವರು ದೂರು ನೀಡಿದ್ದರು.
ದೂರಿನ ಅನ್ವಯ ಬಿ.ಇ.ಓ.ಅವರು ನಿಯಮದಲ್ಲಿ ಇಲ್ಲದಿದ್ದರೂ ಕೂಡಾ ತನಿಖಾಧಿಕಾರಿ ಹಾಗೂ ಮಂಡನಾಧಿಕಾರಿಗಳನ್ನು ನೇಮಕ ಮಾಡಿ,ಆ ದೂರಿಗೆ ಸಂಬಂಧಿಸಿದಂತೆ ತನಿಖಾ ವರದಿಯನ್ನು ಸಲ್ಲಿಸಿ ನಾಲ್ಕು ತಿಂಗಳು ಕಳೆದಿದೆ.ಅಲ್ಲದೇ ಬೀರಪ್ಪ ಅಂಡಗಿ ಚಿಲವಾಡಗಿ ಅವರು ಕೂಡಾ ತಮ್ಮ ದೂರಿಗೆ ಸಂಬಂಧಿಸಿದಂತೆ ನೀಡಿದ ದೂರಿನ ದಾಖಲೆ ಹಾಗೂ ತನಿಖಾಧಿಕಾರಿಗಳು ನೀಡಿದ ವರದಿಯ ನಕಲು ಪ್ರತಿಯನ್ನು ನೀಡುವಂತೆ ಪತ್ರ ನೀಡಿದರೂ ಇಲ್ಲಿಯ ತನಕ ಯಾವುದೇ ವರದಿಯನ್ನು ನೀಡದೆ ವಿಳಂಭ ನೀತಿಯನ್ನು ಅನುಸರಿಸುತ್ತಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಉಮೇಶ ಅವರ ವಿರುದ್ಧ ಅವರ ಕಚೇರಿಯ ಮುಂದೆ ಬೆಳಗ್ಗೆ ೧೧ ಗಂಟೆಗೆ ಧರಣಿಯನ್ನು ನಡೆಸಲಾಗುತ್ತದೆ ಎಂದು ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
