ಶುಕ್ರವಾರ , ನವೆಂಬರ್ 15 2024
kn
Breaking News

ಕಲರವ ಶಿಕ್ಷಕರ ಸೇವಾ ಬಳಗ ಕಾರ್ಯಕ್ಕೆ ಕೈಜೋಡಿಸಿದ: ಡಿಸಿ ಹಾಗೂ ಸಿ.ಇ.ಓ.

Spread the love

ಕೊಪ್ಪಳ: ಕಲರವ ಶಿಕ್ಷಕರ ಸೇವಾ ಬಳಗದ ಸರಕಾರಿ ಶಾಲೆಗಳಿಗೆ ತಮ್ಮ ಸ್ವಂತ ಹಣದ ಮೂಲಕ‌ ಸರಕಾರಿ ಶಾಲೆಗೆ ಸುಣ್ಣ- ಬಣ್ಣ ಅಚ್ಚುವ ಕಾರ್ಯಕ್ಕೆ ಕೈಜೋಡಿಸುವುದರೊಂದಿಗೆ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಕಲರವ ಶಿಕ್ಷಕರ ಸೇವಾ ಬಳಗವು ೧೦ ಜನ ಸಮಾನ ಮನಸ್ಕರ ಶಿಕ್ಷಕರು ಸೇರಿಕೊಂಡು ತಿಂಗಳ‌ ಕೊನೆಯ ಭಾನುವಾರ ತಾಲ್ಲೂಕಿನ ಒಂದು ಸರಕಾರಿ ಶಾಲೆಯನ್ನು ಆಯ್ಕೆ ಮಾಡಿಕೊಂಡು ಆ ಶಾಲೆಗೆ ಸುಣ್ಣ ಹಾಗೂ ಬಣ್ಣ ಅಚ್ಚುವುದರೊಂದಿಗೆ ಶಾಲೆಯ ಅಂದ ಚೆಂದವನ್ನು ಹೆಚ್ವಿಸು ಕಾರ್ಯ ಮಾಡುತ್ತಿದ್ದು,ಇಂದು ತಾಲೂಕಿನ ಅಳವಂಡಿ ವಲಯದ ಮಂಗಳಾಪುರ ಶಾಲೆಯಲ್ಲಿ ೧೧ ನೇ ಸೇವಾ ಕಾರ್ಯವನ್ನು ಪ್ರಾರಂಭ ಮಾಡಲಾಯಿತು.ಈ ಕಾರ್ಯಕ್ಕೆ ಜಿಲ್ಲಾಧಿಕಾರಿಗಳಾದ ವಿಕಾಶ ಕಿಶೋರ ಸುರಳ್ಕರ ಹಾಗೂ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಪೌಜೀಯಾ ತರನ್ನುಮ ಭೇಟಿ ನೀಡಿದರು.
ಈ ಸಮಯದಲ್ಲಿ ಜಿಲ್ಲಾಧಿಕಾರಿಗಳಾದ ವಿಕಾಶ ಕಿಶೋರ ಸುರಳ್ಕರ ಮಾತನಾಡಿ,ಸೇವೆ ಮಾಡಬೇಕು ಎಂಬ ಮನೋಭಾವ ಎಲ್ಲರಲ್ಲೂ ಬರಲು ಸಾಧ್ಯವಿಲ್ಲ. ಕೆಲವರು ಮಾತ್ರ ಈ ಕಾರ್ಯಕ್ಕೆ ಮುಂದಾಗುತ್ತಾರೆ.ಆದರೆ ಯಾವುದೇ ಸ್ವಾರ್ಥ ಮನೋಭಾವ ಇಲ್ಲದೇ ನಿಸ್ವಾರ್ಥ ಮನೋಭಾವ ಇಟ್ಟುಕೊಂಡು ಇಂತಹ ಕಾರ್ಯವನ್ನು ಮಾಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ಇಂತಹ ಮಾದರಿಯ ಕಾರ್ಯವೂ ರಾಜ್ಯಕ್ಕೆ ಮಾದರಿಯಾಗಿದೆ.ಅಲ್ಲದೇ ಇಂತಹ ಉತ್ತಮ ಕಾರ್ಯಗಳಿಗೆ ಇಲಾಖೆಯ ಸಂಪೂರ್ಣ ಸರಕಾರ ಇರಲಿದೆ.ಇನ್ನೂ ಹೆಚ್ಚು ಹೆಚ್ಚು ಇಂತಹ ಕಾರ್ಯಗಳು ಜರುಗಲಿ ಎಂದು ಹೇಳಿದರು.
ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಪೌಜೀಯಾ ತರನ್ನುಮ ಮಾತನಾಡುತ್ತಾ,ಕಲರವ ಶಿಕ್ಷಕರ ಸೇವಾ ಬಳಗ ಮಾಡುತ್ತಿರುವ ಕೆಲಸವನ್ನು ಅನುಸರಿಸಿ ರಾಜ್ಯದ ಅನೇಕ ಕಡೆಯಲ್ಲಿ ಇದೇ ರೀತಿಯಲ್ಲಿ ಸೇವಾ ಕಾರ್ಯ ಮಾಡುತ್ತಿರುವುದು ಕಂಡು ಬಂದಿದೆ.ಇದು ನಿಜಕ್ಕೂ ಮಾದರಿಯ ಕಾರ್ಯವಾಗಿದೆ.ಕಲರವ ಶಿಕ್ಷಕರ ಸೇವಾ ಬಳಗದಲ್ಲಿ ಸರಕಾರಿ ಶಾಲೆಯ ಶಿಕ್ಷಕರನ್ನು ಒಳಗೊಂಡ ತಂಡವಾಗಿದೆ.ತಾವು ಸರಕಾರಿ ಶಾಲೆಯಿಂದಲೇ ವೇತನವನ್ನು ಪಡೆಯುತ್ತಿರುವುದರಿಂದ ವೇತನ ಕೆಲ ಭಾಗ ಸಾಮಾಜಿಕವಾಗಿ ವ್ಯಯ ಮಾಡಬೇಕು ಎಂಬ ಉದ್ದೇಶದಿಂದ ಸರಕಾರಿ ಶಾಲೆಗೆ ಸುಣ್ಣ ಹಾಗೂ ಬಣ್ಣವನ್ನು ಅಚ್ಚುವ ಕಾರ್ಯದಂತೆ ಇತರರು ಕೂಡಾ ಇದೇ ರೀತಿ ಒಂದಲ್ಲ ಒಂದು ರೀತಿಯಲ್ಲಿ ತಮ್ಮದೆಯಾದ ಕೊಡುಗೆಯನ್ನು ನೀಡಿದಾಗ ಮಾತ್ರ ಶೈಕ್ಷಣಿಕ ಪ್ರಗತಿಯಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ. ವಿಶೇಷವಾಗಿ ” ಶಾಲೆ ನಿಮ್ಮದು ಸೇವೆ ನಮ್ಮದು ” ಎಂಬ ಇವರ ಕಲ್ಪನೆ ಕೂಡಾ ಬಹಳ ಉತ್ತಮವಾಗಿದೆ ಎಂದು ಹೇಳಿದರು.
ಈ ಸಮಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಮತ್ತಪ್ಪ ರಡ್ಡೆರ,ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ,ಕಲರವ ಶಿಕ್ಷಕರ ಸೇವಾ ಬಳಗದ ಸದಸ್ಯರಾದ ಬೀರಪ್ಪ ಅಂಡಗಿ ಚಿಲವಾಡಗಿ, ಕಾಶಿನಾಥ ಸಿರಿಗೇರಿ,ಹನುಮಂತಪ್ಪ ಕುರಿ, ಅಣ್ಣಪ್ಪ ಹಳ್ಳಿ,ಗುರುಸ್ವಾಮಿ,ಸುರೇಶ ಕಂಬಳಿ,ಶರಣಪ್ಪ ರಡ್ಡೇರ,ಮಲ್ಲಪ್ಪ ಗುಡದಣ್ಣನ್ನವರ,ಹುಲುಗಪ್ಪ ಭಜಂತ್ರಿ,,ಶಾಲೆಯ ಶಿಕ್ಷಕರಾದ ಚಂದ್ರಶೇಖರ ಕುಷ್ಟಗಿ ಮುಂತಾದವರು ಹಾಜರಿದ್ದರು.


Spread the love

About gcsteam

Check Also

ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಆಗ್ರಹಿಸಿ ಮೂಡಲಗಿಯಲ್ಲಿ ಪ್ರತಿಭಟನೆ

Spread the loveಮೂಡಲಗಿ: ಅರಭಾವಿ ಕ್ಷೇತ್ರದ ಶಾಸಕರು ಹಾಗೂ ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಉಪ್ಪಾರ ಸಮಾಜದ ಮೀಸಲಾತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page