ಬುಧವಾರ , ಮೇ 31 2023
kn
Breaking News

ಬಾಲಚಂದ್ರ ಜಾರಕಿಹೊಳಿ ಅರಬಾಂವಿ ಕ್ಷೇತ್ರದ ಅನ್ನದಾತರಾಗಿದ್ದಾರೆ: ಜಿ. ಪಂ.ಸದಸ್ಯೆ ತೇರದಾಳ

Spread the love

ಮೂಡಲಗಿ: ಅರಬಾಂವಿ ಕ್ಷೇತ್ರದ ಜನತೆಯ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸಿ 86ಸಾವಿರ ಅಹಾರ ಸಾಮಗ್ರಿಗಳ ಕಿಟ್ ವಿತರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಅರಬಾಂವಿ ಕ್ಷೇತ್ರದ ಅನ್ನದಾತರಾಗಿದ್ದಾರೆ ಎಂದು ಹಳ್ಳೂರ ಜಿ.ಪಂ.ಸದಸ್ಯೆ ವಾಸಂತಿ ತೇರದಾಳ ಹೇಳಿದರು.

ಸೋಮವಾರ ಸಾಯಂಕಾಲ ಹಳ್ಳೂರ ಗ್ರಾಮದ ತಮ್ಮ ನಿವಾಸದಲ್ಲಿ ಜಾಣಪದ ಜಾಣ ಶಬ್ಬೀರ ಡಾಂಗೆ ರಚಿಸಿ ಹಾಡಿದ “ಮಂದಿಯ ಕಷ್ಟ ನೋಡ್ಯಾರ, ಎನ್ ಚಂದ ಸಂತಿ ಮಾಡ್ಯಾರ” ಎಂಬ ಜಾನಪದ ಹಾಡಿನ ವಿಡಿಯೊ ಸಿ.ಡಿ.ಬಿಡುಗಡೆಯ ಸರಳ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿ,ಕಳೆದ 15-16 ವರ್ಷಗಳಿಂದ ಕಷ್ಟದಲ್ಲಿದ್ದ ಕ್ಷೇತ್ರದ ಜನತೆಗೆ ಸಹಾಯ ಹಸ್ತ ನೀಡುತ್ತಿದ್ದಾರೆ. ಕೊರೋನಾ ಲಾಕ್‍ಡೌನ ಸಮಯದಲ್ಲಿ ಉದ್ಯೋಗವಿಲ್ಲದೆ ಜನತೆ ಹಸಿವಿನಿಂದ ಇರಬಾರದು ಎಂದು ಪಕ್ಷಬೇದ, ಜಾತಿಬೇದ ಮಾಡದೆ ಕ್ಷೇತ್ರದ ಪ್ರತಿ ಕುಟುಂಬಗಳಿಗೆ ಅಹಾರ ದಾನ್ಯ ವಿತರಿಸಿ ರಾಜ್ಯಕ್ಕೆ ಮಾದರಿ ಶಾಸಕರಾಗಿದ್ದಾರೆ. ಅವರ ಜನಹಿತ ಕಾರ್ಯಗಳ ಕುರಿತಾದ ಹಾಡಿದ ಹಾಡು ಎಲ್ಲರೂ ಮೆಚ್ಚುವಂತಾಗಿದೆ ಎಂದರು.

ಅತಿಥಿಗಳಾದ ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಮಾತನಾಡಿ, ಹಳ್ಳೂರ ಪಿ.ಕೆ.ಪಿ.ಎಸ್.ಮಾಜಿ ಅದ್ಯಕ್ಷ ಹಾಲಿ ನಿರ್ದೇಶಕ ಹಣಮಂತ ತೇರದಾಳ ಅವರ ಪ್ರಾಯೋಜಿತ ಶಾಸಕರ ಕುರಿತಾದ ಹಾಡಿದ ವಿಡಿಯೋ ಸಿ.ಡಿ.ಯಲ್ಲಿ ಜನತೆಗೆ ಹಂಚಿದ ಅಹಾರ ಕಿಟ್ಟ್, ಮಾಸ್ಕ ಮತ್ತು ಕೆ.ಎಮ್.ಎಫ್ ಹಾಲನ್ನು ರಾಜ್ಯದ ಜನತೆಗೆ ವಿತರಿಸಿ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಹೇಳಿ ವಿಡಿಯೋ ಹಾಡಿಗೆ ಶ್ರಮಿಸಿದ ತಂಡಕ್ಕೆ ಶುಭ ಕೋರಿದರು.

ಅದ್ಯಕ್ಷತೆ ವಹಿಸಿದ್ದ ಹಳ್ಳೂರ ಗ್ರಾ.ಪಂ. ಮಾಜಿ ಅದ್ಯಕ್ಸ ಬಿ.ಜಿ. ಸಂತಿ ಹಳ್ಳೂರ ಗ್ರಾಮಕ್ಕೆ ಒದಗಿಸಿದ ಸೌಕರ್ಯಗಳ ಬಗ್ಗೆ ಹೇಳಿದರು.

ಸಿದ್ದು ದುರದುಂಡಿ ಸ್ವಾಗತಿಸಿ ನಿರೂಪಿಸಿದರು, ಶಂಕರ ತುಕ್ಕನ್ನವರ ವಂದಿಸಿದರು.

ಸಮಾರಂಭದಲ್ಲಿ ಶಾಸಕರ ಪ್ರತಿನಿಧಿ ನಾಗಪ್ಪ ಶೇಖರಗೋಳ, ಹಣಮಂತ ತೇರದಾಳ, ತಾ.ಪಂ.ಸದಸ್ಯೆ ಸವಿತಾ ಡಬ್ಬನವರ,  ಕುಮಾರ ಲೋಕನ್ನವರ, ಭೀಮಶಿ ಡಬ್ಬನವರ, ಹಣಮಂತ ತೇರದಾಳ, ಬಾಳೇಶ ನೇಸೂರ, ಸಂಗಪ್ಪ ಪಟ್ಟಣಶಟ್ಟಿ, ಮಲ್ಲಪ್ಪಾ ಛಬ್ಬಿ, ಚನ್ನಪ್ಪ ಅಥಣಿ, ಅಶೋಕ ತೇರದಾಳ, ಲಕ್ಕಪ್ಪ ಸಪ್ತಸಾಗರ, ಸಂತೋಷ ಉಪಾದ್ಯ, ನಾಗಪ್ಪ ಲೋಕನ್ನವರ, ಮಹಾಂತೇಶ ಕುಡಚಿ, ಮಾರುತಿ ಸಿದ್ದಾಪೂರ ಹಾಗೂ ಇನ್ನಿತರರು ಇದ್ದರು.


Spread the love

About gcsteam

Check Also

ಮೀಸಲಾತಿ ಸಂಬoಧ ನಡೆಸುತ್ತಿರುವ ಹೋರಾಟಗಾರರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು : ಶಾಸಕ ಬಾಲಚಂದ್ರ ಜಾರಕಿಹೊಳಿ ಕಿವಿಮಾತು

Spread the loveಮೂಡಲಗಿ: ಈಗಾಗಲೇ ಸರ್ಕಾರದ ಮೀಸಲಾತಿ ಸಂಬoಧ ಪಂಚಮಸಾಲಿ, ಕುರುಬ, ಉಪ್ಪಾರ ಹಾಗೂ ಮಾದಿಗ ಸಮುದಾಯದವರು ಹೋರಾಟಕ್ಕೆ ಇಳಿದಿದ್ದು, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page