ಬುಧವಾರ , ಮೇ 31 2023
kn
Breaking News

ಕೊರೋನಾ ವಾರಿಯರ್ಸಗೆ ಸನ್ಮಾನ ಮಾಡುವ ಮೂಲಕ ಜನ್ಮದಿನಾಚಾರಣೆ ಆಚರಿಸಿಕೊಂಡ ಜಿಪಂ ಸದಸ್ಯೆ ವಾಸಂತಿ ತೇರದಾಳ

Spread the love

ಮೂಡಲಗಿ : ಕೊರೋನಾ ವೈರಸ್ ನಿಯಂತ್ರಣಕ್ಕೆ ಸೈನಿಕರಂತೆ ತಮ್ಮ ಜೀವದ ಹಂಗು ತೊರೆದು ಜನರಿಗೊಸ್ಕರ ದುಡಿಯುತ್ತಿರುವ ಕೊರೋನಾ ವಾರಿಯರ್ಸಗೆ ಗೌರವ ಸಮರ್ಪಣೆ ಮಡುವುದು ನಮ್ಮ ದೇಶದ ಪ್ರತಿಯೊಬ್ಬ ನಾಗರಿಕರ ಆದ್ಯ ಕರ್ತವ್ಯವಾಗಬೇಕು ಎಂದು ಜಿಲ್ಲಾ ಪಂಚಾಯತ್ ಸದಸ್ಯೆ ವಾಸಂತಿ ಹ ತೇರದಾಳ ಹೇಳಿದರು.

ಸಮೀಪದ ಹಳ್ಳೂರ ಗ್ರಾಮದ ಜಿಲ್ಲಾ ಪಂಚಾಯತ ಸದಸ್ಯೆ ವಾಸಂತಿ ತೇರದಾಳ ಅವರು ಹುಟ್ಟು ಹುಬ್ಬದ ಪ್ರಯುಕ್ತ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಉಡಿ ತುಂಬವ ಮೂಲಕ ಸರಳವಾಗಿ ಹುಟ್ಟು ಹಬ್ಬವನ್ನು ಆಚರಿಸಿಕೊಂಡು ಮಾತನಾಡಿ, ಸರ್ಕಾರ ಆಶಾ ಕಾರ್ಯಕರ್ತೆಯರಿಗೆ ನೀಡುವ ಅಲ್ಪ ಸಹಾಯಧನದಲ್ಲೆ, ತಮ್ಮ ಪ್ರಾಣ ಲೆಕ್ಕಿಸದೆ ಕೊರೋನಾ ಲಾಕ್ ಡೌನದ ಸಂದಿಗ್ಧ ಪರಿಸ್ಥಿತಿಯಲ್ಲಿ ಹಳ್ಳಿಗಳಿಗೆ ತೆರಳಿ ಮನೆ ಮನೆಗೆ ಸುತ್ತಾಡಿ ಜನರಲ್ಲಿ ಕೊರೋನಾ ಜಾಗೃತಿ ಮೂಡಿಸುವ ಕಾರ್ಯ ಹಾಗೂ ಜನರಲ್ಲಿ ಯಾವುದೇ ಲಕ್ಷಣ ಕಂಡುಬAದರೂ ಜನ ಸಾಮಾನ್ಯರ ಆರೋಗ್ಯ ತಪಾಸಣೆಗೆ ಮುಂದಾಗಿದ್ದಾರೆ, ಅವರ ಸೇವೆ ನಿಜಕ್ಕೂ ಸ್ಮರಣಿಯವಾದುದ್ದು ಹಾಗೂ ಜನರ ಸೇವೆ ಮಾಡಲು ಅವಕಾಶ ನೀಡಿದಂತ ನನ್ನ ಎಲ್ಲ ಜನರಿಗೂ ಮತ್ತು ಕೆಎಂಎಫ್ ರಾಜ್ಯಾಧ್ಯಕ್ಷ ಹಾಗೂ ಜನಪ್ರೀಯ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಕೂಡಾ ಅಭಿನಂದನೆ ಸಲ್ಲಿಸಿದರು.

ಪಿಕೆಪಿಎಸ್ ಸದಸ್ಯ ಹಣಮಂತ ತೇರದಾಳ ಮಾತನಾಡಿ, ಮಹಿಳೆಯರಿಗೆ ಉಡಿ ತುಂಬುವ ಪದ್ದತಿ ಭಾರತೀಯ ಸಂಸ್ಕೃತಿಯ ಪ್ರತೀಕ, ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಪೂಜ್ಯನೀಯ ಸ್ಥಾನ ನೀಡಲಾಗಿದೆ ಎಂದು ಹೇಳಿದರು.

ನಮ್ಮ ಗ್ರಾಮದ 12 ಜನ ಆಶಾ ಕಾರ್ಯಕರ್ತೆಯರು ಹಾಗೂ 40 ಜನ ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಸಿಬ್ಬಂದಿ, ಪೋಲಿಸ್ ಇಲಾಖೆ ಸಿಬ್ಬಂದಿ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಮತ್ತು ಪತ್ರಕರ್ತರಿಗೆ ಸನ್ಮಾನಿಸಿ ಗೌರಧನ ನೀಡುವ ಮೂಲಕ ಎಲ್ಲ ಕೊರೋನಾ ವಾರಿಯರ್ಸಗಳಿಗೆ ಅಭಿನಂದಿಸಲಾಯಿತ್ತು ಎಂದು ಹೇಳಿದರು.

ಮೂಡಲಗಿ ಆರಕ್ಷಕ ಠಾಣೆಯ ಪಿಎಸ್‌ಆಯ್ ಮಲ್ಲಿಕಾರ್ಜುನ ಸಿಂಧೂರ ಮಾತನಾಡಿ, ಒಂದು ಕಡೆ ಆಶಾ, ಅಂಗನವಾಡಿ ಕಾರ್ಯಕತೇಯರ ಮೇಲೆ ಹಲ್ಲೆ ಘಟನೆಗಳು ನಡೆಯುತ್ತಿದ್ದರೆ, ಮತ್ತೊಂದು ಕಡೆ ಇಂತಹ ಒಳ್ಳೆಯ ಕಾರ್ಯಕ್ರಮಗಳನ್ನು ಸಹ ಮಾಡಲಾಗುತ್ತಿದೆ, ಇದು ನಿಜಕ್ಕೂ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಖುಷಿ ನೀಡುವ ವಿಷಯವಾಗಿದ್ದು ಕೊರೋನಾ ವಾರಿಯರ್ಸ ಆಗಿ ದಿಟ್ಟ ಹೋರಾಟ ಮಾಡುತ್ತಿರುವ ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ಇಂತಹ ಕಾರ್ಯಕ್ರಮಗಳಿಂದ ಇನ್ನಷ್ಟು ಪ್ರೋತ್ಸಾಹ, ಸ್ಪೂರ್ತಿ ಧೈರ್ಯ ತುಂಬುವ ಕೆಲಸ ಮಾಡಿದಂತಾಗುತ್ತದೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ತಾಪಂ ಸದಸ್ಯೆ ಸವಿತಾ ಡಬ್ಬನ್ನವರ, ಶಿವಲೀಲಾ ಪಾಟೀಲ್, ಉಷಾ ಲೋಕನ್ನವರ, ಶಿವಲೀಲಾ ಚಂಡಕಿ, ಮಾನಂದಾ ಹುಬ್ಬಳ್ಳಿ ಹಾಗೂ ಹಣಮಂತ ತಾಳಿಕೋಟಿ, ಸುರೇಶ ಕತ್ತಿ, ಬಿ ಜಿ ಸಂತಿ, ಮಲ್ಲಪ್ಪ ಛಬ್ಬಿ, ಶ್ರೀಶೈಲ ಬಾಗೋಡಿ, ಕುಮಾರ ಲೋಕನ್ನವರ, ರಾಘು ಕೊಕಟನೂರ, ಚನ್ನಪ್ಪ ಅಥಣಿ, ಶಿವು ಚಂಡಕಿ, ರಮೇಶ ಪಾಟೀಲ್, ಅಡಿವೇಪ್ಪ ಪಾಲಬಾಂವಿ, ಸಂಗಪ್ಪ ಪಟ್ಟಣಶೆಟ್ಟಿ, ಕೆಂಪ್ಪಣ್ಣ ಹುಬ್ಬಳ್ಳಿ, ಲಕ್ಕಪ್ಪ ಸಪ್ತಸಾಗರ, ಲಕ್ಷ್ಮಣ ಗೌರವಗೋಳ, ಅಶೋಕ ತೇದಾಳ, ಸಂತೋಷ ಉಪಾದ್ಯ, ಬಾಳೇಶ ನೇಸೂರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.


Spread the love

About gcsteam

Check Also

ಮೀಸಲಾತಿ ಸಂಬoಧ ನಡೆಸುತ್ತಿರುವ ಹೋರಾಟಗಾರರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು : ಶಾಸಕ ಬಾಲಚಂದ್ರ ಜಾರಕಿಹೊಳಿ ಕಿವಿಮಾತು

Spread the loveಮೂಡಲಗಿ: ಈಗಾಗಲೇ ಸರ್ಕಾರದ ಮೀಸಲಾತಿ ಸಂಬoಧ ಪಂಚಮಸಾಲಿ, ಕುರುಬ, ಉಪ್ಪಾರ ಹಾಗೂ ಮಾದಿಗ ಸಮುದಾಯದವರು ಹೋರಾಟಕ್ಕೆ ಇಳಿದಿದ್ದು, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page