ಕರ್ನಾಟಕ ರಾಜ್ಯದಲ್ಲಿ ಕೋವಿಡ್-೧೯ ಸೊಂಕಿತರ ಸಂಖ್ಯೆ ೧೮೧ ಕ್ಕೆ ಏರಿಕೆ ಆಗಿದೆ ಇದರಲ್ಲಿ ೨೮ ಜನ ಗುಣಮುಖರಾಗಿದ್ದಾರೆ, ೫ ಜನ ಮರಣ ಹೊಂದಿರುವ ಬಗ್ಗೆ ಇಂದು ಆರೋಗ್ಯ ಇಲಾಖೆ ಸ್ಪಷ್ಟ ಪಡಿಸಿದೆ.
ಕೋರೊನಾ ವೈರಸ್ ಹರಡದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ೨೧ ದಿನಗಳ ಕಾಲ ದೇಶವನ್ನ ಲಾಕ್ ಡೌನ್ ಆದೇಶ ಮಾಡಿ, ದೇಶದ ಪ್ರಜೆಗಳ ಆರೋಗ್ಯ ಕಾಪಾಡಲು ಹಗಲಿರುಳು ಸರ್ಕಾರ, ವೈದ್ಯರು, ಆರಕ್ಷಕರು, ಆಶಾ ಕಾರ್ಯಕರ್ತೆಯರು, ಜನಪ್ರತಿನಿಧಿಗಳು, ಸ್ವಯಂಸೇವಕರು ಹಗಲಿರುಳು ಕೆಲಸ ಮಾಡುತ್ತಿರುವ ಹಿನ್ನೆಲೆಯಲ್ಲಿ ಮಾನ್ಯ ಮಾಜಿ ಮುಖ್ಯಮಂತ್ರಿಯಾದ ಹೆಚ್.ಡಿ ಕುಮಾರಸ್ವಾಮಿ ನಿನ್ನೆ ಖಾಸಗಿ ವಾಹಿನಿಯೊಂದರಲ್ಲಿ ಮಾತನಾಡಿದ ಅವರು.
ರಾಜ್ಯದಲ್ಲಿ ಯಾವುದೇ ಒಬ್ಬ ವ್ಯಕ್ತಿಗೆ ಕೋರೊನಾ ವೈರಸ ಇದೇಯೊ ಇಲ್ಲವೊ ಎಂಬುದನ್ನು ಟೆಸ್ಟ್ ಮಾಡಿಸಲು ಹೋದರೆ, ಅವರನ್ನ ಟೆಸ್ಟ್ ಮಾಡಬೇಕೆಂದರೆ, ಸರ್ಕಾರದ ಹೈಯರ್ ಅಥಾರಿಟಿಯಿಂದ ಪರ್ಮಿಷನ ಇದ್ರೆ ಮಾತ್ರ ಟೆಸ್ಟ ಮಾಡ್ತಿದ್ದಾರೆ. ಇಂತಹ ಸಾವಿರಾರು ಕೇಸಗಳು ನನ್ನ ಹತ್ತಿರ ಇವೆ ಅಂತ ಅವರಿಗೆ ಸ್ಪಸ್ಟ ಮಾಹಿತಿ ಇದೆ ಅಂತ ಹೇಳಿದ ಅವರು, ಇದರಿಂದಾಗಿ ರಾಜ್ಯದ ಜನತೆಗೆ, ಮಾದ್ಯಮಗಳಗೆ ಕೋರೊನಾ ಸೊಂಕಿತರ ಬಗ್ಗೆ ನಿಖರವಾದ ಮಾಹಿತಿ ದೊರೆಯುತ್ತಿಲ್ಲ ಅಂತ ಹೇಳಿದರು.
ರಾಜ್ಯ ಸರ್ಕಾರದ ಕೊರೋನಾ ವೈರಸ್ ಟೆಸ್ಟಗಳು ಪರಿಣಾಮಕಾರಿಯಾಗಿ ಹೋರಡುತ್ತಿಲ್ಲಾ, ಸರ್ಕಾರ ದೊಡ್ಡ ಮಟ್ಟದಲ್ಲಿ ವೈರಸ್ ಟೆಸ್ಟ ಮಾಡದೆ ಇರುವ ಹಿನ್ನೆಲೆಯಲ್ಲಿ ಮುಂದೆ ಏನಾಗುತ್ತೊ ಅನ್ನುವದರ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಹಾಗಾದರೆ, ಮಾನ್ಯ ಮಾಜಿ ಮುಖ್ಯಮಂತ್ರಿ ಹೇಳೋದು ನಿಜಾನಾ? ನಿಜವಾಗಿದ್ದರೆ, ಸಾಮಾನ್ಯ ಜನರ ಪರಿಸ್ಥಿತಿ ಏನು? ನಿಜಾವಾಗಿಲು ಈಗಿರುವ ಕೊರೊನಾ ಸೋಂಕಿತರ ಸಂಖ್ಯೆ ಎಷ್ಟು? ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿದೆ ಕೋವಿಡ್-೧೯, ಪ್ರತಿ ಜಿಲ್ಲೆಗಳಲ್ಲಿ ಕೋರೊನಾ ಪರಿಕ್ಷಾ ಕೇಂದ್ರ ತೆರೆಯಲು ಸರ್ಕಾರ ಯಾಕೆ ಹಿಂಡೆಟು ಹಾಕುತ್ತಿದೆ? ಎಂದು ಸಾಮಾನ್ಯ ಜನರಲ್ಲಿ ಇಂತಹ ನೂರಾರು ಪ್ರಶ್ನೆಗಳು ಹುಟ್ಟುವುದು ಸಹಜ.
ಇದಕ್ಕೆ ಮಾನ್ಯ ಮುಖ್ಯಮಂತ್ರಿಗಳು, ರಾಜ್ಯದ ಜನತೆಗೆ ಸರಿಯಾದ ಮಾಹಿತಿ ನೀಡಿ, ರಾಜ್ಯದ ಜನರಲ್ಲಿರುವ ಆತಂಕದ ವಾತಾವರಣದ ನಿವಾರಣೆಗೆ ಮುಂದಾಗಬೇಕಿದೆ.