ಭಾನುವಾರ , ಮೇ 28 2023
kn
Breaking News
????????????????????????????????????

ಶಿಕ್ಷಕರ ಸಂಘದಿಂದ ನಾಗಪ್ಪ ಶೇಖರಗೋಳ ಅವರಿಗೆ ಸತ್ಕಾರ

Spread the love

ಗೋಕಾಕ: ಶಿಕ್ಷಕರು ತಮ್ಮ ಕರ್ತವ್ಯದ ಜೊತೆಗೆ ಸಂಘದ ಪ್ರಗತಿಗೂ ಶ್ರಮಿಸಿ, ಶಿಕ್ಷಕರ ಸಂಘವನ್ನು ಮಾದರಿ ಸಂಘವನ್ನಾಗಿ ರೂಪಿಸಲು ಅರಭಾವಿ ಶಾಸಕರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ ಹೇಳಿದರು.
ಶನಿವಾರದಂದು ನಗರದ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಮೂಡಲಗಿ ವಲಯದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ನೀಡಿದ ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು, ಶಿಕ್ಷಕರು ರಾಷ್ಟ್ರದ ಶಿಲ್ಪಿಗಳಾಗಿದ್ದು, ಸಮಾಜವನ್ನು ಬದಲಿಸುವ ಶಕ್ತಿ ಶಿಕ್ಷಕರಿಗಿದೆ ಎಂದು ತಿಳಿಸಿದರು.
ನೂತನವಾಗಿ ಸಂಘಕ್ಕೆ ಆಯ್ಕೆಯಾದ ಪದಾಧಿಕಾರಿಗಳು ತಮ್ಮ ಒಗ್ಗಟ್ಟಿನ ಶಕ್ತಿಯನ್ನು ಪ್ರದರ್ಶಿಸಬೇಕು. ಈ ಮೂಲಕ ಸಂಘದ ಅಭಿವೃದ್ದಿಗೆ ನಾಂದಿ ಹಾಡಬೇಕು. ತಮ್ಮಲ್ಲಿಯ ಸಣ್ಣ-ಪುಟ್ಟ ವ್ಯತ್ಯಾಸಗಳನ್ನು ಬದಿಗಿಟ್ಟು ಶಿಕ್ಷಕರ ಸಂಘದ ಅಭ್ಯುದಯಕ್ಕೆ ದುಡಿಯಬೇಕು. ಶಿಕ್ಷಕರ ಸಮಸ್ಯೆಗಳನ್ನು ಇತ್ಯರ್ಥಪಡಿಸುವ ಜವಾಬ್ದಾರಿಯನ್ನು ನಿರ್ವಹಿಸಬೇಕು. ಸರ್ಕಾರದಿಂದ ಸಿಗಬೇಕಿರುವ ಎಲ್ಲ ಸೌಲಭ್ಯಗಳನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಮೂಲಕ ದೊರಕಿಸಿಕೊಡುವ ಆಶ್ವಾಸನೆ ನೀಡಿದರು.
ಸಂಘದ ನೂತನ ಅಧ್ಯಕ್ಷ ಎಲ್.ಎಮ್.ಬಡಕಲ್ ಅವರು ಇದೇ ಸಂದರ್ಭದಲ್ಲಿ ನಾಗಪ್ಪ ಶೇಖರಗೋಳ ಅವರನ್ನು ಸತ್ಕರಿಸಿದರು.
ಈ ಸಂದರ್ಭದಲ್ಲಿ ಆರ್.ಎಮ್.ಮಹಾಲಿಂಗಪೂರ, ಎಮ್.ವಾಯ್.ಸಣ್ಣಕ್ಕಿ, ಎ.ಪಿ.ಪರಸನ್ನವರ, ಬಿ.ಎಲ್.ನಾಯಿಕ, ವಾಯ್.ಡಿ.ಜಲ್ಲಿ, ಎಮ್.ಜಿ.ಮಾವಿನಗಿಡದ, ಸಂತೋಷ ಪಾಟೀಲ, ಶಾನವಾಜ ದಬಾಡಿ, ಎಮ್.ಎಮ್.ಕಳಸನ್ನವರ, ಎಫ್.ಡಿ.ಹಂಚಿನಾಳ ಮುಂತಾದವರು ಉಪಸ್ಥಿತರಿದ್ದರು.


Spread the love

About gcsteam

Check Also

ಹಳೆಯ ಪಿಂಚಣಿ ಯೋಜನೆ ಜಾರಿಗೆ ಪ್ರಾಮಾಣಿಕ ಪ್ರಯತ್ನ:ಬೀರಪ್ಪ ಅಂಡಗಿ

Spread the loveಕೊಪ್ಪಳ: ೧ನೇ ಏಪ್ರೀಲ್ ೨೦೦೬ ರ ನಂತರ ನೇಮಕಗೊಂಡ ರಾಜ್ಯ ಸರಕಾರಿ ನೌಕರರಿಗೆ ಜಾರಿಗೆ ಮಾಡಲಾಗಿರುವ ನೂತನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page