ಗೋಕಾಕ: 2017 ಸಾಲಿನ ಎಸ್‍ಡಿಎ ಹಾಗೂ ಎಫ್‍ಡಿಎ ಹುದ್ದೆಗಳಿಗೆ ನೇಮಕಾತಿ ಆದೇಶ ನೀಡಲು ಆರ್ಥಿಕ ಇಲಾಖೆಗೆ ನಿರ್ದೇಶಿಸುವಂತೆ ಆಗ್ರಹಿಸಿ ಅರಭಾವಿ ಶಾಸಕ ಮತ್ತು ಕಹಾಮ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರಿಗೆ ನೊಂದ ಅಭ್ಯರ್ಥಿಗಳು ಮನವಿ ಸಲ್ಲಿಸಿದರು.
ಶನಿವಾರದಂದು ನಗರದ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಸೇರಿದ ಆಕಾಂಕ್ಷಿ ಅಭ್ಯರ್ಥಿಗಳು 2017ನೇ ಸಾಲಿನ ಎಸ್‍ಡಿಎ ಹಾಗೂ ಎಫ್‍ಡಿಎ ಪರೀಕ್ಷೆಗಳಲ್ಲಿ ಆಯ್ಕೆಯಾಗಿರುವ ನಮಗೆ ಕೂಡಲೇ ಆದೇಶ ಪತ್ರವನ್ನು ನೀಡಬೇಕೆಂದು ಅವರು ತಿಳಿಸಿದ್ದಾರೆ.
ಎಲ್ಲ ಮೂಲ ದಾಖಲಾತಿ ಪರಿಶೀಲನೆ ಮುಗಿದಿದೆ. ಆರ್ಥಿಕ ಇಲಾಖೆಯು ನೇಮಕ ಪ್ರಕ್ರೀಯೆಯನ್ನು ತಡೆಹಿಡಿದಿದೆ. ಆದರೇ ಇದೇ ಅಧಿಸೂಚಣೆಯಲ್ಲಿ ಆಯ್ಕೆಯಾದ ನ್ಯಾಯಾಂಗ ಇಲಾಖೆಯ 428 ಅಭ್ಯರ್ಥಿಗಳಿಗೆ ಈಗಾಗಲೇ ನೇಮಕಾತಿ ಪತ್ರ ನೀಡಲಾಗಿದೆ. ಉಳಿದ 44 ಇಲಾಖೆಗಳ 1414 ಅಭ್ಯರ್ಥಿಗಳಿಗೆ ಆದೇಶ ಪ್ರತಿ ನೀಡಲು ಆರ್ಥಿಕ ಇಲಾಖೆಯು ಇದುವರೆಗೂ ಒಪ್ಪಿಗೆ ನೀಡಿಲ್ಲ. ಇನ್ನೂಳಿದ ಇಲಾಖೆಯ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಪ್ರತಿ ನೀಡುವಂತೆ ಆರ್ಥಿಕ ಇಲಾಖೆಗೆ ನಿರ್ದೇಶನ ನೀಡಿ ನೊಂದ ಅಭ್ಯರ್ಥಿಗಳಿಗೆ ನ್ಯಾಯ ದೊರಕಿಸಿಕೊಡುವಂತೆ ಶಾಸಕರಿಗೆ ನೀಡಿರುವ ಮನವಿ ಪತ್ರದಲ್ಲಿ ಎಸ್‍ಡಿಎ ಹಾಗೂ ಎಫ್‍ಡಿಎ ನೊಂದ ಅಭ್ಯರ್ಥಿಗಳು ಮನವಿ ಮಾಡಿಕೊಂಡಿದ್ದಾರೆ.
ಶಾಸಕರ ಪರವಾಗಿ ಮನವಿ ಸ್ವೀಕರಿಸಿದ ಆಪ್ತ ಸಹಾಯಕರಾದ ನಿಂಗಪ್ಪ ಕುರಬೇಟ ಮತ್ತು ಲಕ್ಕಪ್ಪ ಲೋಕುರಿ ಅವರು ಈ ವಿಷಯವನ್ನು ಶಾಸಕರ ಗಮನಕ್ಕೆ ತರುವುದಾಗಿ ನೋಂದ ಅಭ್ಯರ್ಥಿಗಳಿಗೆ ಭರವಸೆ ನೀಡಿದರು.
ಮನವಿ ಸಲ್ಲಿಸುವ ವೇಳೆಯಲ್ಲಿ ರಮೇಶ ಖಾನಪ್ಪನವರ, ಪ್ರಕಾಶ ದ್ಯಾಮಕ್ಕಗೋಳ, ವಿದ್ಯಾಶ್ರೀ ರೆಡ್ಡಿ, ಸಿದ್ದಾರೂಢ ಹುಕ್ಕೇರಿ, ರಾಮಸಿದ್ದಪ್ಪ ಕೊತಲಿ, ಸಂಜು ಗುಗ್ಗರಿ, ವಿಠ್ಠಲ ಗೌಡನ್ನವರ, ಮಲ್ಲಪ್ಪ ಖಿಲಾರಿ, ಸುರೇಶ ಭಾಗೋಜಿ, ಕರುಣಾನಿಧಿ ರಾಯಬಾಗಕರ, ಉಮೇಶ ಫೋಳ, ಸುನೀತಾ ಮೆಳವಂಕಿ, ಶಿವಪುತ್ರ ಮೂಡಲಗಿ, ಇಕ್ಬಾಲ್ ಮುಲ್ಲಾ ಮತ್ತಿತರರು ಉಪಸ್ಥಿತರಿದ್ದರು.
![](https://sarvavani.com/wp-content/uploads/2020/12/26-GKK-2-scaled-1.jpg)
????????????????????????????????????