ದೇಶದಲ್ಲಿ ಕೋರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಲಾಕ್ ಡೌನ್ ಘೋಷಿಸಿತ್ತು. ಇದರ ಪರಿಣಾಮ ರಾಜ್ಯದಲ್ಲಿ ಮದ್ಯ ಮಾರಾಟ ಸಂಪೂರ್ಣ ಬಂದಾಗಿತ್ತು.
ಇದನ್ನ ಅರಿತ ಮದ್ಯಪ್ರಿಯರು ಕಳ್ಳಬಟ್ಟಿ ಸರಾಯಿಗೆ ಮೊರೆ ಹೋಗಿದ್ದರು. ದುಬಾರಿ ದರ ಪಡೆದುಕೊಂಡು ಹಲವೆಡೆಗಳಲ್ಲಿ ಕಳ್ಳತನದಿಂದ ಮದ್ಯ ಮಾರಾಟಗಾವಾಗುತ್ತಿತ್ತು. ಇದನ್ನು ಮನಗಂಡು ರಾಜ್ಯ ಸರ್ಕಾರ ಕೆಲವೊಂದು ಷರತ್ತುಗಳನ್ನ ವಿದಿಸಿ ಮದ್ಯಪ್ರಿಯರಿಗೆ ಮೇ.4 ಬೆಳಿಗ್ಗೆ 9ಘಂಟೆಯಿಂದ ಮದ್ಯ ಮಾರಾಟಕ್ಕೆ ಆದೇಶ ಹೊರಡಿಸಿದೆ.
ಕೇಂದ್ರ/ರಾಜ್ಯ/ಜಿಲ್ಲಾಡಳಿತ ಘೋಷಿಸಿದ ಕಂಟೈನ್ಮೆಂಟ್ ಜೋನ್ಗಳಲ್ಲಿ ಮದ್ಯ ಮಾರಾಟ ಮಾಡುವಂತಿಲ್ಲ. ಇದನ್ನ ಹೊರತುಪಡಿಸಿ, ಉಳಿದೆಲ್ಲವು ಸ್ಥಳಗಳಲ್ಲಿನ ಮದ್ಯದ ಅಂಗಡಿಗಳನ್ನು ತೆರೆದು ವ್ಯಾಪಾರ ಮಾಡಲು, ಕೆ.ಎಸ್.ಬಿ.ಸಿ.ಎಲ್ ಡಿಪೋ ತೆರೆದು ಕಾರ್ಯನಿರ್ವಹಿಸಲು ಅನುಮತಿ ನಿಡಿದ್ದಾರೆ. ಮದ್ಯಪ್ರಿಯರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಮುಖಾಂತರ ಮದ್ಯ ಖರೀದಿಸಲು ಸೂಚಿಸಿದ್ದಾರೆ.