ಭಾನುವಾರ , ಡಿಸೆಂಬರ್ 22 2024
kn
Breaking News

Recent Posts

ಶ್ರೀ ಬಸವೇಶ್ವರ ಕೋ-ಆಪ್ ಕ್ರೆಡಿಟ್ ಸೊಸೈಟಿಯಿಂದ ಆಶಾ ಕಾರ್ಯಕರ್ತೆಯರಿಗೆ 3 ಸಾವಿರ ಸಹಾಯಧನ ವಿತರಣೆ

ಹಳ್ಳೂರ : ನಮ್ಮ ದೇಶದಲ್ಲಿ ಮಹಾಮಾರಿಯಾಗಿ ಬಂದಿರುವ ಕೊರೋನಾ ವೈರಸ್ ಹರಡದಂತೆ ತಡೆಯಲು ಹಾಗೂ ಜನರಲ್ಲಿ ಜಾಗೃತಿ ಮೂಡಿಸುವಂತ ಕೆಲಸ ಮಾಡುತ್ತಿರುವ ನಮ್ಮ ದೇಶದ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ನಾವು ಅಭಿನಂದನೆ ಸಲ್ಲಿಸುವ ಮೂಲಕ ಕೃತಜ್ಞತೆ ಸಲ್ಲಿಸಬೇಕೆಂದು ಶ್ರೀ ಬಸವೇಶ್ವರ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಯ ಉಪಾಧ್ಯಕ್ಷ ಬಸಪ್ಪ ಸಂತಿ ಹೇಳಿದರು. ಶನಿವಾರದಂದು ಸ್ಥಳೀಯ ಶ್ರೀ ಬಸವೇಶ್ವರ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಯಿಂದ ಆಶಾ ಕಾರ್ಯಕರ್ತೆಯರಿಗೆ 3 ಸಾವಿರ ಸಹಾಯಧನ ವಿತರಣೆ ಸಮಾರಂಭದಲ್ಲಿ …

Read More »

ನೀರಲ್ಲಿ ಕೊಚ್ಚಿ ಹೋದ ಏನು ಅರಿಯದ ಎಳು ವರ್ಷದ ಮುಗ್ದ ಬಾಲಕ

ಮುಗಳಖೋಡ: ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡದ ಪಟ್ಟಣದ ಲಮಾಣಿ ತಾಂಡಾ ಹತ್ತಿರ ಇರುವ ಘಟಪ್ರಭಾ ಎಡದಂಡೆ ಕಾಲುವೆಯಲ್ಲಿ ಬಸವರಾಜ ಗೌಲೆತ್ತಿನವರ ವಯಸ್ಸು 7 ವರ್ಷ ಇತ ಗೆಳೆಯಯರ ಜೊತೆಗೆ ಈಜಲು ಹೋಗಿ ಅದೆ ಕಾಲುವೆಯಲ್ಲಿ ಕೊಚ್ಚಿ ಹೋದ ಘಟನೆ ಸುಮಾರು 12 ಘಂಟೆಗೆ ನಡೆದಿದೆ. ಬಾಲಕನ ಹುಡುಕಾಟದಲ್ಲಿ ಸ್ಥಳೀಯರು ಬಾಗಿಯಾಗಿದ್ದಾರೆ. ಬಾಲಕನ ತಂದೆ ಹಾಗೂ ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ. ಸುಮಾರು 12 ಘಂಟೆಯಿಂದ ಸ್ಥಳೀಯರ ಸಹಕಾರದಿಂದ ಹುಡುಕಾಟ …

Read More »

ಪೆಂಡಾಲ ಮತ್ತು ಡೆಕೋರೇಟರ್ಸ ಸಂಘದಿಂದ ಮನವಿ, ಸರ್ಕಾರದ ವಿಶೇಷ ಪ್ಯಾಕೇಜ್‍ಗೆ ಒತ್ತಾಯ

ಮೂಡಲಗಿ: ಕೊರೊನಾ ಲಾಕ್‍ಡೌನ್ ಸಂದರ್ಭದಲ್ಲಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಶಿಲುಕಿದ ತಾಲೂಕಿನ ಪೆಂಡಾಲ ಸಪ್ಲಾಯರ್ಸ,ಲೈಟಿಂಗ ಮತ್ತು ಧ್ವನಿವರ್ದಕ ವೃತ್ತಿಪರ ಕಾರ್ಮಿಕರಿಗೆ ವಿಶೇಷ ಪ್ಯಾಕೇಜ್‍ನ್ನು ಸರ್ಕಾರವು ಘೋಷಿಸಬೇಕೆಂದು ಮೂಡಲಗಿ ತಾಲ್ಲೂಕಾ ಪೆಂಡಾಲ ಮತ್ತು ಡೆಕೊರೆಟರ್ಸ,ಲೈಟಿಂಗ,ಸೌಂಡ,ಸಪ್ಲಾಯರ್ಸ ಮಾಲಿಕರ ಸಂಘದವರು ಬುಧವಾರ ತಹಶೀಲ್ದಾರ ಡಿ.ಜಿ.ಮಹಾತ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ನೀಡಿದರು. ನಾವು ಅಸಂಘಟಿತ ವೃತ್ತಿಪರ ಕಾರ್ಮಿಕರಾಗಿದ್ದು ಕೊರೋನಾ ಲಾಕ್‍ಡೌನ್ ಸಮಯದಲ್ಲಿ ಮದುವೆ,ಧಾರ್ಮಿಕ,ರಾಜಕೀಯ,ಶೈಕ್ಷಣಿಕ ಇನ್ನಿತರ ಸಭೆ,ಸಮಾರಂಭಗಳು ರದ್ದಾಗಿ ತುಂಬ ತೊಂದರೆ ಅನುಭವಿಸುತ್ತಿದ್ದು ಜೀವನ ನಡೆಸುವುದು …

Read More »

ಜಯ ಕರ್ನಾಟಕ ಅಧ್ಯಕ್ಷ, ಮಾಜಿ ಭೂಗತ ಜಗತ್ತಿನ ದೊರೆ ಮುತ್ತಪ್ಪ ರೈ ಇನ್ನಿಲ್ಲ

ಜಯ ಕರ್ನಾಟಕ ಸಂಘಟನೆಯ ಸ್ಥಾಪಕ, ಮಾಜಿ ಭೂಗತ ದೊರೆ ಮುತ್ತಪ್ಪ ರೈ (68) ನಿಧನರಾಗಿದ್ದಾರೆ. ಕಳೆದ ಎರಡು ವರ್ಷಗಳಿಂದ ಲಿವರ್ ಹಾಗೂ ಮೆದುಳಿನ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಮುತ್ತಪ್ಪ ರೈ ಗುರುವಾರ ತಡರಾತ್ರಿ 2 ಗಂಟೆ ಹೊತ್ತಿಗೆ  ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಮುತ್ತಪ್ಪ ರೈ ನಿಧನರಾಗಿದ್ದಾರೆಂಬ ಸುದ್ದಿ ಬುಧವಾರ ರಾತ್ರಿಯೇ ಹರಡಿತ್ತು. ಆದರೆ ಆಸ್ಪತ್ರೆ ರೈ ನಿಧನವನ್ನು ಅಧಿಕೃತವಾಗಿ ಪ್ರಕಟಿಸಿರಲಿಲ್ಲ. ಪುತ್ತೂರಿನ  ಮುತ್ತಪ್ಪ ರೈ ಕಳೆದ ಏಪ್ರಿಲ್ 28ರಂದು …

Read More »

ಕೊರೊನಾ ವಾರಿಯರ‍್ಸಗೆ ಅಭಾಜಿ ಪೌಂಡೇಶನ್ ವತಿಯಿಂದ ಸನ್ಮಾನ

ಮುಗಳಖೋಡ: ರಾಯಬಾಗ ತಾಲೂಕಿನ ಸುಕ್ಷೇತ್ರ ಮುಗಳಖೋಡ ಪಟ್ಟಣದಲ್ಲಿ ಡಾ.ಸಿ.ಬಿ.ಕುಲಿಗೋಡ ಅವರ ನಿವಾಸದಲ್ಲಿ ರಾಯಬಾಗದ ಅಭಾಜಿ ಪೌಂಡೇಶನ್ ವತಿಯಿಂದ ಕೊರೊನಾ ವಾರಿರ‍್ಸಗೆ ಹಮ್ಮಿಕೊಂಡ ಸತ್ಕಾರ ಸಮಾರಂಭದ ನೇತೃತ್ವವಹಿಸಿ ಮಾತನಾಡಿದ  ಡಾ.ಸಿ.ಬಿ.ಕುಲಿಗೋಡ ಈಗಾಗಲೇ ಸಾಕಷ್ಟು ಕುಟುಂಬಗಳಿಗೆ ಕಲ್ಲಗಂಡಿ, ಆಹಾರ ಸಾಮಗ್ರಿಗಳನ್ನು ಹಂಚಿ ನಮ್ಮ ಕೈಲಾದ ಸಹಾಯವನ್ನು ಮಾಡಿದ್ದೇವೆ. ಅದರೊಂದಿಗೆ ಇಂದು ಆಶಾ ಕಾರ್ಯಕರ್ತರಿಯರಿಗೆ ಆಹಾರ ಸಾಮಗ್ರಿಗಳ ಕಿಟ್‌ನ್ನು ವಿತರಿಸುತ್ತಿದ್ದೇವೆ ಎಂದು ಹೇಳಿದರು. ಪ್ರಪಂಚವನ್ನೇ ಬೆಚ್ಚಿಳಿಸಿರುವ ಕಿಲ್ಲರ ಕೊರೊನಾ ರೋಗ ದಿನದಿಂದ ದಿನಕ್ಕೆ ದೇಶದಲ್ಲಿ …

Read More »

ಕೆ ಎಮ್ ಎಪ್ ಅಧ್ಯಕ್ಷರಾದ ಬಾಲಚಂದ್ರ ಜಾರಕಿಹೊಳಿ ಅವರಿಂದ ಲಾಕ್ ಡೌನ ಮುಗಿಯುವವರೆಗೆ ಊಟದ ವ್ಯವಸ್ಥೆ

ಮೂಡಲಗಿ : ಇತ್ತೀಚೆಗೆ ಮಹಾಮಾರಿ ಕೊರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕೇಂದ್ರ ಹಾಗೂ ರಾಜ್ಯ ಸರಕಾರ ತಗೆದುಕೊಂಡ ಕ್ರಮಗಳಿಗೆ ನಗರ ಪ್ರದೇಶ, ಗ್ರಾಮೀಣ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆರೋಗ್ಯ, ಪೋಲೀಸರು, ಕಂದಾಯ, ಪೌರಕಾರ್ಮಿಕ ಇಲಾಖೆ ಗಳೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸ್ವಯಂ ಸೇವಾ ಸಂಸ್ಥೆಗಳು ಚುನಾಯಿತ ಪ್ರತಿನಿಧಿಗಳು, ಪತ್ರಕರ್ತರು ಹಗಲಿರುಳು ತಮ್ಮ ಜೀವದ ಹಂಗು ತೊರೆದು ಸೇವೆ ಸಲ್ಲಿಸುತ್ತಿರುವುದು ಪ್ರಶಂಸಾರ್ಹವಾಗಿದೆ ಎಂದು ಅರಭಾಂವಿ …

Read More »

ಬಾಲಚಂದ್ರ ಜಾರಕಿಹೊಳಿ ಅರಬಾಂವಿ ಕ್ಷೇತ್ರದ ಅನ್ನದಾತರಾಗಿದ್ದಾರೆ: ಜಿ. ಪಂ.ಸದಸ್ಯೆ ತೇರದಾಳ

ಮೂಡಲಗಿ: ಅರಬಾಂವಿ ಕ್ಷೇತ್ರದ ಜನತೆಯ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸಿ 86ಸಾವಿರ ಅಹಾರ ಸಾಮಗ್ರಿಗಳ ಕಿಟ್ ವಿತರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಅರಬಾಂವಿ ಕ್ಷೇತ್ರದ ಅನ್ನದಾತರಾಗಿದ್ದಾರೆ ಎಂದು ಹಳ್ಳೂರ ಜಿ.ಪಂ.ಸದಸ್ಯೆ ವಾಸಂತಿ ತೇರದಾಳ ಹೇಳಿದರು. ಸೋಮವಾರ ಸಾಯಂಕಾಲ ಹಳ್ಳೂರ ಗ್ರಾಮದ ತಮ್ಮ ನಿವಾಸದಲ್ಲಿ ಜಾಣಪದ ಜಾಣ ಶಬ್ಬೀರ ಡಾಂಗೆ ರಚಿಸಿ ಹಾಡಿದ “ಮಂದಿಯ ಕಷ್ಟ ನೋಡ್ಯಾರ, ಎನ್ ಚಂದ ಸಂತಿ ಮಾಡ್ಯಾರ” ಎಂಬ ಜಾನಪದ ಹಾಡಿನ ವಿಡಿಯೊ ಸಿ.ಡಿ.ಬಿಡುಗಡೆಯ ಸರಳ ಸಮಾರಂಭದ …

Read More »

ಸೈನಿಕರನ್ನು ನಿರ್ಮಿಸುವುದರ ಜೊತೆಗೆ ಸಮಾಜಮುಖಿ ಕೆಲಸ ಮಾಡುತ್ತಿದೆ: ಕರುನಾಡು ಸೈನಿಕ ಕೇಂದ್ರ

ಮೂಡಲಗಿ: ಅದ್ಧೂರಿಯಾಗಿ ನಡೆಯಬೇಕಿದ್ದ ಈ ಸಂಸ್ಥೆಯ 2ನೇ ವರ್ಷಾಚರಣೆÉ ಮಹಾಮಾರಿ ಕೊರೋನಾ ಲಾಕ್‍ಡೌನ್‍ದಿಂದ ಸರಳವಾಗಿ ಆಚರಿಸುತ್ತಿದೆ. ದೇಶ ಸೇವೆಗೆ ಸೈನಿಕರನ್ನು ಅಣಿ ಮಾಡುತ್ತಿರುವ ಈ ಸಂಸ್ಥೆ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದೆ ಎಂದು ಕ.ಸಾ.ಪ. ತಾಲೂಕಾ ಘಟಕದ ಅಧ್ಯಕ್ಷ ಸಿದ್ರಾಮ ದ್ಯಾಗಾನಟ್ಟಿ ಹೇಳಿದರು. ಶುಕ್ರವಾರ ಸಾಯಂಕಾಲ ಕರುನಾಡು ಸೈನಿಕ ತರಬೇತಿ ಕೇಂದ್ರದಲ್ಲಿ ಹಮ್ಮಿಕೊಂಡ ಸಂಸ್ಥೆಯ 2ನೇ ವರ್ಷದ ವರ್ಷಾಚರಣೆಯ ಸರಳ ಸಮಾರಂಭದ ಅದ್ಯಕ್ಷತೆ ವಹಿಸಿ ಮಾತನಾಡಿ, ಈ ಹಿಂದೆ ನೆರೆ ಹಾವಳಿಯಲ್ಲಿ …

Read More »

ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಸರಕಾರ ಹೆಚ್ಚಿನ ಭದ್ರತೆ ವಹಿಸಲಿ: ಬೀಮಪ್ಪ ಗಡಾದ

ಮೂಡಲಗಿ: ಜಗತ್ತಿನಾದ್ಯಂತ ಹರಡುತ್ತಿರುವ ಮಹಾಮಾರಿ ಮಾರಕ ಕೊರೋನಾ ವೈರಸ್ ಸೊಂಕು ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಅಂಗನವಾಡಿ,ಆಶಾ ಕಾರ್ಯಕರ್ತೆಯರಿಗೆ,ಪೌರ ಸೇವಾ ಸಿಬ್ಬಂದಿ ಮತ್ತು ಹಿರಿಯ ಪತ್ರಕರ್ತರಿಗೆ ಕೆ.ಇ.ಬಿ.ಪ್ಲಾಟ್ ಈರಣ್ಣ ನಗರದಲ್ಲಿ ಸರಳ ಸನ್ಮಾನ ಸಮಾರಂಭ ನಡೆಯಿತು. ಗುರುವಾರದಂದು ಸಾಯಂಕಾಲ ಗಜಬರ ಗೋಕಾಕ ಮತ್ತು ಮಾರುತಿ ಹಡಪದ ಅವರು ಹಮ್ಮಿಕೊಂಡ ಸರಳ ಸನ್ಮಾನ ಕಾರ್ಯಕ್ರಮದಲ್ಲಿ ಪೌರ ಸೇವಾ ಸಿಬ್ಬಂದಿ ಹಿರಿಯ ಆರೋಗ್ಯ ನಿರೀಕ್ಷಕ ಚಿದಾನಂದ ಮುಗಳಖೋಡ ಮಾತನಾಡಿ, ಕೊರೋನಾ ಸಾಂಕ್ರಾಮಿಕ …

Read More »

ಇಲ್ಲಿನ ಹತ್ತು ಪ್ರದೇಶಗಳಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ಇಲ್ಲ!

ಬೆಳಗಾವಿ: ಮಹಾಮಾರಿ ಕೊರೋನಾ ರೋಗದ ಹಿನ್ನಲೆಯಲ್ಲಿ ನಮ್ಮ ರಾಜ್ಯದಲ್ಲಿ ಇಂದಿನಿಂದ 3.0 ಹಂತದ ಲಾಕ್ ಡೌನ್ ಮುಂದುವರೆದಿದ್ದು, ಈ ಹಂತದ ಲಾಕ್ ಡೌನ್ ನಲ್ಲಿ ಒಂದಿಷ್ಟು ಸಡಿಲಿಕೆ ಮಾಡಲಾಗಿದೆ. ಕಳೆದ ಒಂದುವರೆ ತಿಂಗಳ ಬಳಿಕ ಇಂದಿನಿಂದ ಕಂಟೇನ್ಮೆಂಟ್ ಝೋನ್ ಹೊರತುಪಡಿಸಿ ಉಳಿದೆಡೆ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ಆದರೆ ಬೆಳಗಾವಿ ಜಿಲ್ಲೆಯ 10 ಪ್ರದೇಶಗಳಲ್ಲಿ ಮಧ್ಯ ಮಾರಾಟಕ್ಕೆ ಅವಕಾಶ ನೀಡದೇ ಇರುವುದು ಮದ್ಯ ಪ್ರಿಯರಿಗೆ ಮತ್ತೆ ನಿರಾಸೆಮಾಡಿದೆ. ಇಲ್ಲಿನ 10 …

Read More »

You cannot copy content of this page