ಭಾನುವಾರ , ಡಿಸೆಂಬರ್ 22 2024
kn
Breaking News

Recent Posts

ಚಂಬೆಳಕಿನ ಕವಿ ಡಾ. ಚೆನ್ನವೀರ ಕಣವಿ ನಿಧನ-ಸಂಸದ ಈರಣ್ಣ ಕಡಾಡಿ ಸಂತಾಪ

ಮೂಡಲಗಿ: ಚಂಬೆಳಕಿನ ಕವಿ ಎಂದೇ ಹೆಸರಾಗಿದ್ದ, ಹಿರಿಯ ಸಾಹಿತಿ ನಾಡೋಜ ಡಾ. ಚೆನ್ನವೀರ ಕಣವಿ ಅವರು ನಿಧನರಾದ ಸುದ್ದಿ ತಿಳಿದು ಅತೀವ ದುಃಖವಾಗಿದೆ. ಅವರ ಕುಟುಂಬಕ್ಕೆ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ಭಗವಂತ ದಯಪಾಲಿಸಲಿ ಎಂದು ಪ್ರಾರ್ಥಿಸುವುದಾಗಿ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಸಂತಾಪ ವ್ಯಕ್ತಪಡಿಸಿದರು. ಬುಧವಾರ ಫೆ-೧೬ ರಂದು ಪತ್ರಿಕಾ ಹೇಳಿಕೆ ನೀಡಿರುವ ಸಂಸದ ಈರಣ್ಣ ಕಡಾಡಿ ಅವರು ನವೋದಯ ಮತ್ತು ನವ್ಯ ಸಾಹಿತ್ಯಕ್ಕೆ ಡಾ. ಚೆನ್ನವೀರ ಕಣವಿ …

Read More »

ನಾಡೋಜ ಚೆನ್ನವೀರ ಕಣವಿ ಅವರ ನಿಧನಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸಂತಾಪ

ಗೋಕಾಕ : ಕನ್ನಡ ಸಾರಸ್ವತ ಲೋಕದ ದಿಗ್ಗಜ ಸಾಹಿತಿ, ನಾಡೋಜ ಡಾ. ಚೆನ್ನವೀರ ಕಣವಿ ಅವರ ನಿಧನಕ್ಕೆ ಕೆಎಂಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ. ಡಾ. ಚೆನ್ನವೀರ ಕಣವಿ ಅವರ ನಿಧನದಿಂದ ಕನ್ನಡ ಸಾಹಿತ್ಯ ಲೋಕದ ಹಿರಿಯ ಕೊಂಡಿಯೊದು ಕಳಚಿದಂತಾಗಿದೆ. ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇಯಾದ ಛಾಪು ಮೂಡಿಸಿದ್ದ ಕಣವಿ ಅವರು ಹೊಸಗನ್ನಡ ಕಾವ್ಯದ ಪ್ರಮುಖ ಕವಿಯಾಗಿದ್ದರು ಎಂದು ತಿಳಿಸಿರುವ ಶಾಸಕ …

Read More »

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಶಿಫಾರಸ್ಸಿನನ್ವಯ, ಸರ್ಕಾರದಿಂದ ನಾಮನಿರ್ದೇಶನ

ಗೋಕಾಕ : ಮೂಡಲಗಿ ತಾಲೂಕಿನ ಅರಭಾವಿ, ಕಲ್ಲೋಳಿ, ನಾಗನೂರ ಪಟ್ಟಣ ಪಂಚಾಯತಿ ಮತ್ತು ಮೂಡಲಗಿ ಪುರಸಭೆಗೆ ಸರ್ಕಾರದಿಂದ ನಾಮನಿರ್ದೇಶನಗೊಂಡ ಹೊಸ ಸದಸ್ಯರುಗಳನ್ನು ಇಲ್ಲಿಯ ಎನ್‌ಎಸ್‌ಎಫ್ ಅತಿಥಿ ಗೃಹದಲ್ಲಿ ಅಭಿನಂದಿಸಲಾಯಿತು. ಮAಗಳವಾರದದು ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಶಿಫಾರಸ್ಸಿನ ಮೇರೆಗೆ ಪಟ್ಟಣ ಪಂಚಾಯತಿಗಳು ಹಾಗೂ ಮೂಡಲಗಿ ಪುರಸಭೆಗೆ ಸರ್ಕಾರದಿಂದ ನಾಮನಿರ್ದೇಶನಗೊಂಡಿದ್ದು ಅವರನ್ನು ಕ್ಷೇತ್ರದ ಮುಖಂಡರು ಸತ್ಕರಿಸಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾಸ …

Read More »

ಶ್ರೀ ಶಿವಬೋಧರಂಗ ಪಿ. ಕೆ. ಪಿ. ಎಸ್ ದಿಂದ ದ್ವಿಚಕ್ರ ವಾಹನ ವಿತರಣೆ

ಮೂಡಲಗಿ: ಪಟ್ಟಣದ ಶ್ರೀ ಶಿವಬೋಧರಂಗ ಪ್ರಾಥಮಿಕ ಸಹಕಾರಿ ಸಂಘದಿಂದ ನಾಲ್ಕು ದ್ವಿಚಕ್ರ ವಾಹನವನ್ನು ಗುರುವಾರ ವಿತರಿಸಲಾಯಿತು. ಈ ಸಮಯದಲ್ಲಿ ಸಂಘದ ಅಧ್ಯಕ್ಷ ವಿಜಯಕುಮಾರ ಸೋನವಾಲಕರ, ಉಪಾಧ್ಯಕ್ಷ ಸದಾಶಿವ ತಳವಾರ, ನಿರ್ದೇಶಕರಾದ ಬಸವರಾಜ ಕುರಬಗಟ್ಟಿ, ವಿನೋಧ ಪಾಟೀಲ, ವಿರಣ್ಣ ಸೋನವಾಲಕರ, ಸತೀಶ ಲಂಕೆಪ್ಪನವರ, ಮಾರುತಿ ಶಾಬನ್ನವರ, ಸಂಘದ ಕಾರ್ಯ ನಿರ್ವಹಕ ಅಧಿಕಾರಿ ಅಶೋಕ ಮಹಾರಡ್ಡಿ, ವಿಶಾಲ ಜಾಧವ, ಶ್ರೀಶೈಲ ನಂದಗಾವಮಠ ಇದ್ದರು. ಪಾಂಡು ಮಹಾರಡ್ಡಿ, ಅಶೋಕ ಮಹಾರಡ್ಡಿ, ಮಂಜು ಕೋರ್ತಿ , …

Read More »

ಮೂಡಲಗಿಯಲ್ಲಿ ಉಪ ನೋಂದಣಿ ಕಚೇರಿ ಆರಂಭಿಸಲು ಸ್ಥಳ ಪರಿಶೀಲಿಸಿದ ಡಿಆರ್ ಅಪರಂಜಿ ಮತ್ತು ಎಸಿ ಬಗಲಿ.

ಮೂಡಲಗಿ- ಮೂಡಲಗಿಗೆ ಹೊಸ ಉಪ ನೋಂದಣಿ ಕಛೇರಿ ಮಂಜೂರಾದ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳು ಬುಧವಾರದಂದು ಕಛೇರಿಗೆ ಅಗತ್ಯವಿರುವ ಸ್ಥಳವನ್ನು ಪರಿಶೀಲನೆ ನಡೆಸಿದರು. ಪಟ್ಟಣದ ತಹಶಿಲ್ದಾರರ ಕಚೇರಿಗೆ ಹೊಂದಿಕೊಂಡಿರುವ ಮೂರು ಕೊಠಡಿಗಳನ್ನು ಪರಿಶೀಲಿಸಿದ ಜಿಲ್ಲಾ ನೋಂದಣಿ ಅಧಿಕಾರಿ ಶಿವಕುಮಾರ ಅಪರಂಜಿ ಅವರು, ಈ ಮೂರು ಕೊಠಡಿಯಲ್ಲಿ ಹೊಸ ಉಪ ನೋಂದಣಿ ಕಚೇರಿಯನ್ನುಆರಂಭಿಸಲಾಗುವುದು. ಶೀಘ್ರವಾಗಿ ಮೂಡಲಗಿಯಲ್ಲಿ ಕಚೇರಿ ಆರಂಭ ಮಾಡಲಾಗುವುದು ಎಂದು ಹೇಳಿದರು. ಅರಭಾವಿ ಶಾಸಕ ಹಾಗೂ ಕಹಾಮ ಅಧ್ಯಕ್ಷ …

Read More »

ಜಿಲ್ಲೆಯಲ್ಲಿನ ಶಾಲೆಗಳು ಬಂದ, ಆದೇಶ ಹೊರಡಿಸಿದ ಜಿಲ್ಲಾಧಿಕಾರಿಗಳು

ಬೆಳಗಾವಿ: ಜಿಲ್ಲೆಯಲ್ಲಿ ವಸತಿ ಶಾಲೆಗಳನ್ನೊಳಗೊಂಡಂತೆ, 1 ರಿಂದ 9ನೇಯ ತರಗತಿಯವರೆಗೆ, ಇದೆ ಜನವರಿ 10ರಿಂದ 18ರ ವರೆಗೆ ಜಿಲ್ಲಾಧಿಕಾರಿಯವರು ಶಾಲೆಗಳಿಗೆ ರಜೆ ಘೋಷಿಸಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ 1-9ನೇ ತರಗತಿ ಶಾಲೆಗಳಿಗೆ ರಜೆ ಘೋಷಿಸಿದ ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಆದೇಶ ಹೊರಡಿಸಿದ್ದಾರೆ. 10ನೇ ತರಗತಿ ಮೇಲ್ಪಟ್ಟವರಿಗೆ ಎಂದಿನಂತೆ ತರಗತಿ ನಡೆಯಲಿವೆ ಎಂದು ಸೂಚನೆ ನೀಡಿದ್ದಾರೆ. ಆರೋಗ್ಯ ಇಲಾಖೆ ಅಧಿಕಾರಿಗಳು, ಚಿಕ್ಕೋಡಿ, ಬೆಳಗಾವಿ ಬಿಇಒಗಳ ಜತೆಗೆ ಸಭೆ ನಡೆಸಿದ್ದು, ಸಭೆಯಲ್ಲಿ ಶಾಲೆಗಳಿಗೆ …

Read More »

ಮೂಡಲಗಿ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ಮಾರಾಟವಾಗುತ್ತಿದೆಯಾ? ಎಲ್ಲಿದೆ ಜಿಲ್ಲಾಡಳಿತ? ಎಲ್ಲಿದೆ ಆರೋಗ್ಯ ಇಲಾಖೆ?

ಮೂಡಲಗಿ: ಜಗತ್ತಿನಾದ್ಯಂತ ಕೊರೋನಾ ಮಾಹಾಮಾರಿ 2ವರ್ಷಗಳಿಂದ ಅತೀವವಾಗಿ ಕಾಡುತ್ತಿದೆ. ಇದರಿಂದಾಗಿ ತತ್ತರಗೊಂಡ ಸರ್ಕಾರಗಳು ಎಚ್ಚೆತ್ತು, ಲಸಿಕೆ ಕಂಡು ಹಿಡಿದು ಕೊವ್ಯಾಕ್ಸಿನ್ ಮತ್ತು ಕೋವಿಶಿಲ್ಡ್ ಜನರ ಮುಂದೆ ಇಟ್ಟಿದೆ. ಸರ್ಕಾರ ಕೊರೋನಾ ಹೆಚ್ಚಳ ವೇಳೆ ಎರಡನೆ ಡೋಸ್ ಪಡೆಯುವಂತೆ ಜನತೆಗೆ ಸಾಕಷ್ಟು ಮನವಿ ಮಾಡಿಕೊಳ್ಳುತ್ತಿದೆ. ಮೊದಲು ಮತ್ತು ಎರಡನೇಯ ಡೋಸ್ ಜನಸಾಮಾನ್ಯರಿಗೆ ಬೇಗನೆ ನೀಡುವಂತೆ ಸಂಬಂದ ಪಟ್ಟ ಇಲಾಖೆಗಳು, ಸ್ಥಳಿಯ ಸರ್ಕಾರಿ ಆಸ್ಪತ್ರೆಯ ವೈದ್ಯರಿಗೆ ಒತ್ತಡ ಹಾಕುತ್ತಿರುವುದು ಸರ್ವೆ ಸಾಮಾನ್ಯವಾಗಿದೆ. ಆದರೆ …

Read More »

ಮೂಡಲಗಿ ಶ್ರೀ ಶಿವಬೋಧರಂಗ ಮಠದಲ್ಲಿ ದತ್ತಾತ್ರೇಯಬೋಧ ಮತ್ತು ಶ್ರೀಧರಬೋಧರ ಪೀಠಾರೋಹಣ ಕಾರ್ಯಕ್ರಮ

ಮೂಡಲಗಿ: ಮೂಡಲಗಿಯ ಶ್ರೀ ಶಿವಬೋಧರಂಗ ಸ್ವಾಮಿ ಸಂಸ್ಥಾನಮಠದಲ್ಲಿ ಶುಕ್ರವಾರ ದತ್ತಾತ್ರೇಯಬೋಧ ಸ್ವಾಮೀಜಿ ಹಾಗೂ ಶ್ರೀಧರಬೋಧ ಸ್ವಾಮೀಜಿ ಅವರಿಗೆ ಶ್ರೀಕ್ಷೇತ್ರ ನೃಸಿಂಹವಾಡಿಯ ವೇದಮೂರ್ತಿ ಶ್ರೀಅವಧೂತ ಬೋರಗಾಂವಕರ ಅವರ ನೇತೃತ್ವದಲ್ಲಿ ಪೀಠಾರೋಹಣ ಧೀಕ್ಷಾ ಕಾರ್ಯಕ್ರಮವು ವಿಧಿವತ್ತಾಗಿ ನೆರವೇರಿತು. ಬೆಳಿಗ್ಗೆ ಕೆಳಗಿನಮಠದಲ್ಲಿ ಸನ್ನಿಧಿಗೆ ವಿಶೇಷ ಪೂಜೆಗಳು ನೆರವೇರಿದ ನಂತರ ಮೇಲಿನಮಠದಲ್ಲಿ ಸೌರಯಾಗ ಹೋಮದೊಂದಿಗೆ ಶ್ರೀಮಠದ ಸಂಪ್ರದಾಯದಂತೆ ಮತ್ತು ವಿವಿಧ ವಿಧಿವಿಧಾನಗಳೊಂದಿಗೆ ಉಭಯ ಶ್ರೀಗಳಿಗೆ ಧೀಕ್ಷೆಯನ್ನು ಪ್ರಧಾನ ಮಾಡಿದರು. ಧೀಕ್ಷೆ ಸ್ವೀಕರಿಸಿದ ಶ್ರೀಗಳು ಮೇಲಿನ ಮಠದಿಂದ …

Read More »

ಜಾಲಪ್ಪ ನಿಧನಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸಂತಾಪ

ಬೆಳಗಾವಿ- ಹಿರಿಯ ರಾಜಕೀಯ ಮುತ್ಸದ್ದಿ, ಮಾಜಿ ಕೇಂದ್ರ ಸಚಿವ ಆರ್.ಎಲ್. ಜಾಲಪ್ಪ ಅವರ ನಿಧನಕ್ಕೆ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಶೋಕ ವ್ಯಕ್ತಪಡಿಸಿದ್ದಾರೆ. ಜಾಲಪ್ಪ ಅವರು ರಾಮಕೃಷ್ಣ ಹೆಗಡೆ ಮತ್ತು ಜೆ.ಎಚ್.ಪಟೇಲ್ ಅವರ ಸರಕಾರದಲ್ಲಿ ಸಹಕಾರ ಮತ್ತು ಗೃಹ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೇ ಹೆಚ್.ಡಿ.ದೇವೇಗೌಡ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಜವಳಿ ಖಾತೆಯ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ನೇರ ನಡೆಯ ವ್ಯಕ್ತಿ ಯಾಗಿದ್ದ ಜಾಲಪ್ಪ ಅವರ ನಿಧನದಿಂದ ರಾಜ್ಯಕ್ಕೆ ಅಪಾರ …

Read More »

ಮೂಡಲಗಿ ಪಟ್ಣದಲ್ಲಿ ಸರಣಿ ಕಳ್ಳತನ: ವಿಡಿಯೊದಲ್ಲಿ ಸೆರೆಯಾದ ಕಳ್ಳರ ಕರಾಮತ್ತು

ಮೂಡಲಗಿ: ಪಟ್ಟಣದಲ್ಲಿ ಕಳೆದ ತಿಂಗಳಿನಿಂದ ಸರಣಿ ಕಳ್ಳತನವಾಗುತ್ತಿದ್ದು ಪಟ್ಟಣದ ವಾಸಿಗಳಲ್ಲಿ ಆತಂಕ ಸೃಷ್ಟಿಯಾಗಿದೆ. ಕಳೆದ ನವೆಂಬರ್‌ 28ರ ರಾತ್ರಿ ಕಲ್ಮೇಶ್ವರ ವೃತದಲ್ಲಿನ ಒಂದು ಅಂಗಡಿಯನ್ನು ಕಳ್ಳರು ಕದಿಯಲು ಪ್ರಯತ್ನಿಸಿದ್ದು, ಅದೃಷ್ಟವಶಾತ್ ಈ ಕದಿಮರ ಕೈಗೆ ಬೆಲೆಬಾಳುವ ವಸ್ತು, ಹಣ ಸಿಕ್ಕಿಲ್ಲ. ಮತ್ತೆ ಅದೆ ನವೆಂಬರ ತಿಂಗಳಿನ 29ರ ರಾತ್ರಿ ಮಾರ್ಕೆಟ್ ರಸ್ತೆಯಲ್ಲಿನ ತಗಡಿನ ಶೆಡ್ ಅಲ್ಲಿರುವ ಸುಭಾಸ ಗಾರ್ಮೆಂಟ್ಸ್ ಅನ್ನವ ಬಡಪಾಯಿ ವ್ಯಕ್ತಿಯ ಬಟ್ಟೆ ಅಂಗಡಿಯಲ್ಲಿ ಕಳ್ಳರು ತಮ್ಮ ಕೈಚಳಕ …

Read More »

You cannot copy content of this page