ಗುರುವಾರ , ನವೆಂಬರ್ 21 2024
kn
Breaking News

ಅಂತರಾಷ್ಟ್ರೀಯ

ಜಾತಿ, ಧರ್ಮ, ಭಾಷೆಗಳು ಎಲ್ಲರೂ ಸಮನಾಗಿ ಹೊಂದಿಕೊಳ್ಳಬೇಕು: ಅನ್ನ ದಾನೇಶ್ವರ ಸ್ವಾಮಿಜಿ

ಹಳ್ಳೂರ: ಪ್ರತಿಯೊಬ್ಬ ವ್ಯಕ್ತಿಯು ಮಹಾತ್ಮರ ಆಧ್ಯಾತ್ಮದ ಚಿಂತನೆ, ಶಾಂತಿ, ಉಪದ್ದೇಶ, ಅವರ ಜೀವನ ಸಾಧನೆಯನ್ನು ಎಲ್ಲರೂ ಅಳವಡಿಸಿಕೊಂಡು ಮಹಾತ್ಮರ, ಶರಣರ, ಗುರು ಹಿರಿಯರ ಮಾರ್ಗದರ್ಶನದಂತೆ ಎಲ್ಲರೂ ಪ್ರೇರಿಪಿಸಬೇಕೆಂದು ಕಲಿಯುಗದ ಕರುಣಾಕರ, ಸುಕ್ಷೇತ್ರ ಬಂಡಿಗಣಿಯ ಶ್ರೀ ಬಸವಗೋಪಾಲ ನೀಲಮಾಣಿಕ ಮಠದ ದಾಸೋಹ ರತ್ನ ಚಕ್ರವರ್ತಿ ಶ್ರೀ ಅನ್ನ ದಾನೇಶ್ವರ ಸ್ವಾಮಿಜಿಗಳು ಹೇಳಿದರು. ಸ್ಥಳೀಯ ಶ್ರೀ ಮಾಹಾಲಕ್ಷ್ಮೀ ದೇವಸ್ಥಾನದ ಆವರಣದಲ್ಲಿ ಮಂಗಳವಾರರಂದು ನಡೆದ 14ನೇ ಮಹಾಲಕ್ಷ್ಮೀ ಪಾರಮಾರ್ಥಿಕ ಸಪ್ತಾಹ ಕಾರ್ಯಕ್ರಮದ ನೇತೃತ್ವವನ್ನು ವಹಿಸಿ …

Read More »

ಸರ್ಕಾರಿ ನೌಕರಿ ಆಮೀಷ : ಡೋಂಗಿ ಬಾಬಾ ಅಂದರ್!! ಇವ್ಹಿಎo ಸ್ವಾಮಿಯ ಕರ್ಮಕಾಂಡ ಬಯಲು, ಇಂತಹ ದೇಶದ್ರೋಹಿ ವ್ಯಕ್ತಿಗೆ ತಕ್ಕ ಶಿಕ್ಷೆಯಾಗಲಿ

ಮೂಡಲಗಿ : ಸರ್ಕಾರಿ ನೌಕರಿ ಮಾಡಿಸಿಕೊಡುತ್ತೇನೆ ಎಂದು ಹೇಳಿ ಅಮಾಯಕರಿಂದ ಕೋಟ್ಯಾಂತರ ರೂಪಾಯಿ ಟೋಪಿ ಹಾಕಿರುವ ಖತರ್ನಾಕ್ ಸ್ವಾಮಿಯನ್ನು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ. ತಾಲೂಕಿನ ಹಳ್ಳೂರ ಗ್ರಾಮದ ಅಲ್ಲಮಪ್ರಭು ಹಿರೇಮಠ ಬಂಧನಕ್ಕೀಡಾಗಿರುವ ವಂಚಕ ಸ್ವಾಮಿಯಾಗಿದ್ದು, ಈಗ ಪೊಲೀಸರ ಅತಿಥಿಯಾಗಿ ಕಂಬಿ ಎಣಿಸುತ್ತಿದ್ದಾನೆ. ಹಣಕಾಸು ವ್ಯವಹಾರ, ಮೋಸ, ವಂಚನೆ ಪ್ರಕರಣಕ್ಕೆ ಸಂಬoಧಿಸಿದoತೆ ಪೊಲೀಸರಿಂದ ತಲೆಮರೆಸಿಕೊಂಡಿದ್ದ ಈತನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸರ್ಕಾರಿ ಹಾಗೂ ಇನ್ನೀತರ ಸಂಘ-ಸoಸ್ಥೆಗಳಲ್ಲಿ ನೌಕರಿ ಕೊಡಿಸುವ ನೆಪದಲ್ಲಿ …

Read More »

ರೈತರ ನೀರಿನ ಸಮಸ್ಯೆ ನೀಗಿಸಲು ಶಾಶ್ವತ ಪರಿಹಾರ: ಶಾಸಕ ಪಿ.ರಾಜೀವ್

ಹಳ್ಳೂರ: ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ವಿಭಾಗದ ವತಿಯಿಂದ ಮರಾಕುಡಿ ಗ್ರಾಮದ ಹಳ್ಳಕ್ಕೆ ಸರಣಿ ಚೆಕ್ ಡ್ಯಾಮ್ ನಿರ್ಮಿಸುವುದು ಹಾಗೂ ಏತ ನೀರಾವರಿ ಯೋಜನೆ ಮೂಲಕ ಚೆಕ್ ಡ್ಯಾಂ ತುಂಬಿಸುವ ಕಾಮಗಾರಿಗೆ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ, ಕುಡಚಿ ಶಾಸಕ ಪಿ.ರಾಜೀವ್ ಶಂಕು ಸ್ಥಾಪನೆ ನೇರವೇರಿಸಿದರು. ಮರಾಕುಡಿ ಗ್ರಾಮದಲ್ಲಿ ಶನಿವಾರರಂದು ನಡೆದ ಬ್ರಿಜ್ ಕಮ್ ಬ್ಯಾರೇಜ್ ಹಾಗೂ ಚೆಕ್ಕ ಡ್ಯಾಮ್ ಕಾಮಗಾರಿಗಳ ಶಂಕು ಸ್ಥಾಪನಾ ಸಮಾರಂಭದ …

Read More »

ಅಂಜುಮನ್ ಕಮಿಟಿಯಿಂದ ಕಡು ಬಡವರಿಗೆ ರಮಜಾನ ಕಿಟ್ ವಿತರಣೆ

ಮೂಡಲಗಿ: ಪರಸ್ಪರರು ಸಂಭ್ರಮದಿಂದ ರಮಜಾನ ಹಬ್ಬ ಆಚರಿಸುವುದರ ಜೊತೆಗೆ ಕಡು ಬಡವರನ್ನು ಗುರುತಿಸಿ ಅವರಿಗೆ ನೆರವು ಒದಗಿಸುವ ಕಾರ್ಯವನ್ನು ಅಂಜುಮನ್ ಎ ಇಸ್ಲಾಂ ಕಮೀಟಿಯು ಪ್ರತಿ ವರ್ಷ ಮಾಡುತ್ತಿದೆ ಎಂದು ಕಮಿಟಿ ಅಧ್ಯಕ್ಷ ಮಲೀಕ ಹುಣಶ್ಯಾಳ ಹೇಳಿದರು. ರಮಜಾನ್ ಹಬ್ಬದ ಪ್ರಯುಕ್ತ 50 ಕಡು ಬಡವರಿಗೆ ರಮಜಾನ್ ಹಬ್ಬಕ್ಕಾಗಿಯೇ ತಯಾರಿಸಿದ ಅಗತ್ಯ ವಸ್ತುಗಳ ಕಿಟ್ ವಿತರಿಸಿ ಮಾತನಾಡಿದ ಅವರು, ಯಾವ ಬಡವರೂ ಹಬ್ಬದ ಖುಷಿಯಿಂದ ವಂಚಿತರಾಗಬಾರದೆಂದು ಈ ಕಾರ್ಯವನ್ನು ಮಾಡಲಾಗುತ್ತಿದೆ …

Read More »

ಹಳೆಯ ಪಿಂಚಣಿ ಯೋಜನೆ ಜಾರಿಗೊಳಿಸಿ: ಬೀರಪ್ಪ ಅಂಡಗಿ ಚಿಲವಾಡಗಿ ಒತ್ತಾಯ

. ಮುಧೋಳ: ೧ನೇ ಎಪ್ರಿಲ್ ೨೦೦೬ ರ ನೇಮಕಗೊಂಡ ರಾಜ್ಯ ಸರಕಾರಿ ನೌಕರರಿಗೆ ಜಾರಿಗೆ ಮಾಡಿರುವ ಎನ್.ಪಿ.ಎಸ್.ಯೋಜನೆಯನ್ನು ರದ್ದು ಮಾಡಿ ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವಂತೆ ನೂತನ ಪಿಂಚಣಿ ಯೋಜನೆಗೆ ಒಳಪಡುವ ಸರಕಾರಿ ನೌಕರರ ಸಂಘದ ರಾಜ್ಯ ಗೌರವಾಧ್ಯಕ್ಷರು ಹಾಗೂ ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ ಸರಕಾರವನ್ನು ಒತ್ತಾಯಿಸಿದ್ದಾರೆ. ಅವರು ಬಾಗಲಕೋಟ ಜಿಲ್ಲೆಯ ಮುಧೋಳದಲ್ಲಿ ಮಾತನಾಡಿ,೧ ನೇ ಎಪ್ರಿಲ್ ೨೦೦೬ ರ ನಂತರ ನೇಮಕಗೊಂಡ ರಾಜ್ಯ …

Read More »

ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಬೀಳ್ಕೋಡುವ ಸಮಾರಂಭ

ಮೂಡಲಗಿ: ಮೂಡಲಗಿ ಶಿಕ್ಷಣ ಸಂಸ್ಥೆಯ ಪ್ರೌಢ ಶಾಲೆಯಲ್ಲಿ ದಿನಾಂಕ 15-3-2022 ರಂದು ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಬೀಳ್ಕೋಡುವ ಸಮಾರಂಭ ಜರುಗಿತು. ಅಧ್ಯಕ್ಷರು ಎಸ್ ಆರ್ ಸೋನವಾಲ್ಕರ ಉಪಾಧ್ಯಕ್ಷರು ಎಂ ಈ ಎಸ್ ಮೂಡಲಗಿ. ಅತಿಥಿಗಳು ಡಾ. ಸಂಜಯ್ ಅಪ್ಪಯ್ಯ ಶಿಂಧಿಹಟ್ಟಿ ಅಧ್ಯಕ್ಷರು ಕ ಸಾ ಪ ಮೂಡಲಗಿ ಘಟಕ ಮಾತನಾಡಿ ಪ್ರೌಢ ವಯಸ್ಸು ಎಲ್ಲ ಸಾಧನೆಗಳಿಗೆ ಅಡಿಪಾಯ ಇದ್ದಹಾಗೆ ಸಮೂಹ ಮಾಧ್ಯಮಗಳನ್ನು ವಿವೇಕದಿಂದ ಬಳಸಬೇಕು ಈ ವಯಸ್ಸಿನಲ್ಲಿ …

Read More »

ಜಿಲ್ಲೆಯಲ್ಲಿನ ಶಾಲೆಗಳು ಬಂದ, ಆದೇಶ ಹೊರಡಿಸಿದ ಜಿಲ್ಲಾಧಿಕಾರಿಗಳು

ಬೆಳಗಾವಿ: ಜಿಲ್ಲೆಯಲ್ಲಿ ವಸತಿ ಶಾಲೆಗಳನ್ನೊಳಗೊಂಡಂತೆ, 1 ರಿಂದ 9ನೇಯ ತರಗತಿಯವರೆಗೆ, ಇದೆ ಜನವರಿ 10ರಿಂದ 18ರ ವರೆಗೆ ಜಿಲ್ಲಾಧಿಕಾರಿಯವರು ಶಾಲೆಗಳಿಗೆ ರಜೆ ಘೋಷಿಸಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ 1-9ನೇ ತರಗತಿ ಶಾಲೆಗಳಿಗೆ ರಜೆ ಘೋಷಿಸಿದ ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಆದೇಶ ಹೊರಡಿಸಿದ್ದಾರೆ. 10ನೇ ತರಗತಿ ಮೇಲ್ಪಟ್ಟವರಿಗೆ ಎಂದಿನಂತೆ ತರಗತಿ ನಡೆಯಲಿವೆ ಎಂದು ಸೂಚನೆ ನೀಡಿದ್ದಾರೆ. ಆರೋಗ್ಯ ಇಲಾಖೆ ಅಧಿಕಾರಿಗಳು, ಚಿಕ್ಕೋಡಿ, ಬೆಳಗಾವಿ ಬಿಇಒಗಳ ಜತೆಗೆ ಸಭೆ ನಡೆಸಿದ್ದು, ಸಭೆಯಲ್ಲಿ ಶಾಲೆಗಳಿಗೆ …

Read More »

ಮೂಡಲಗಿ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ಮಾರಾಟವಾಗುತ್ತಿದೆಯಾ? ಎಲ್ಲಿದೆ ಜಿಲ್ಲಾಡಳಿತ? ಎಲ್ಲಿದೆ ಆರೋಗ್ಯ ಇಲಾಖೆ?

ಮೂಡಲಗಿ: ಜಗತ್ತಿನಾದ್ಯಂತ ಕೊರೋನಾ ಮಾಹಾಮಾರಿ 2ವರ್ಷಗಳಿಂದ ಅತೀವವಾಗಿ ಕಾಡುತ್ತಿದೆ. ಇದರಿಂದಾಗಿ ತತ್ತರಗೊಂಡ ಸರ್ಕಾರಗಳು ಎಚ್ಚೆತ್ತು, ಲಸಿಕೆ ಕಂಡು ಹಿಡಿದು ಕೊವ್ಯಾಕ್ಸಿನ್ ಮತ್ತು ಕೋವಿಶಿಲ್ಡ್ ಜನರ ಮುಂದೆ ಇಟ್ಟಿದೆ. ಸರ್ಕಾರ ಕೊರೋನಾ ಹೆಚ್ಚಳ ವೇಳೆ ಎರಡನೆ ಡೋಸ್ ಪಡೆಯುವಂತೆ ಜನತೆಗೆ ಸಾಕಷ್ಟು ಮನವಿ ಮಾಡಿಕೊಳ್ಳುತ್ತಿದೆ. ಮೊದಲು ಮತ್ತು ಎರಡನೇಯ ಡೋಸ್ ಜನಸಾಮಾನ್ಯರಿಗೆ ಬೇಗನೆ ನೀಡುವಂತೆ ಸಂಬಂದ ಪಟ್ಟ ಇಲಾಖೆಗಳು, ಸ್ಥಳಿಯ ಸರ್ಕಾರಿ ಆಸ್ಪತ್ರೆಯ ವೈದ್ಯರಿಗೆ ಒತ್ತಡ ಹಾಕುತ್ತಿರುವುದು ಸರ್ವೆ ಸಾಮಾನ್ಯವಾಗಿದೆ. ಆದರೆ …

Read More »

ಮೂಡಲಗಿ ಪಟ್ಣದಲ್ಲಿ ಸರಣಿ ಕಳ್ಳತನ: ವಿಡಿಯೊದಲ್ಲಿ ಸೆರೆಯಾದ ಕಳ್ಳರ ಕರಾಮತ್ತು

ಮೂಡಲಗಿ: ಪಟ್ಟಣದಲ್ಲಿ ಕಳೆದ ತಿಂಗಳಿನಿಂದ ಸರಣಿ ಕಳ್ಳತನವಾಗುತ್ತಿದ್ದು ಪಟ್ಟಣದ ವಾಸಿಗಳಲ್ಲಿ ಆತಂಕ ಸೃಷ್ಟಿಯಾಗಿದೆ. ಕಳೆದ ನವೆಂಬರ್‌ 28ರ ರಾತ್ರಿ ಕಲ್ಮೇಶ್ವರ ವೃತದಲ್ಲಿನ ಒಂದು ಅಂಗಡಿಯನ್ನು ಕಳ್ಳರು ಕದಿಯಲು ಪ್ರಯತ್ನಿಸಿದ್ದು, ಅದೃಷ್ಟವಶಾತ್ ಈ ಕದಿಮರ ಕೈಗೆ ಬೆಲೆಬಾಳುವ ವಸ್ತು, ಹಣ ಸಿಕ್ಕಿಲ್ಲ. ಮತ್ತೆ ಅದೆ ನವೆಂಬರ ತಿಂಗಳಿನ 29ರ ರಾತ್ರಿ ಮಾರ್ಕೆಟ್ ರಸ್ತೆಯಲ್ಲಿನ ತಗಡಿನ ಶೆಡ್ ಅಲ್ಲಿರುವ ಸುಭಾಸ ಗಾರ್ಮೆಂಟ್ಸ್ ಅನ್ನವ ಬಡಪಾಯಿ ವ್ಯಕ್ತಿಯ ಬಟ್ಟೆ ಅಂಗಡಿಯಲ್ಲಿ ಕಳ್ಳರು ತಮ್ಮ ಕೈಚಳಕ …

Read More »

ಪ್ರಥಮ ಪ್ರಾಶಸ್ತ್ಯ ಮತಗಳನ್ನು ನೀಡಿ : ಲಖನ್ ಜಾರಕಿಹೊಳಿ

ಅಥಣಿ : ಪ್ರಥಮ ಪ್ರಾಶಸ್ತ್ಯ ಮತಗಳನ್ನು ನೀಡಿ ನನ್ನನ್ನು ಅತ್ಯಧಿಕ ಮತಗಳಿಂದ ಆಯ್ಕೆ ಮಾಡುವಂತೆ ವಿಧಾನ ಪರಿಷತ್ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಅವರು ಮತದಾರರಲ್ಲಿ ಮನವಿ ಮಾಡಿಕೊಂಡರು. ಇಲ್ಲಿಯ ಹೊರವಲಯದಲ್ಲಿರುವ ನೂರಾಣಿ ನಾಲ್ಬಂದ್ ಕಲ್ಯಾಣ ಮಂಟಪದಲ್ಲಿ ಗುರುವಾರದಂದು ಜರುಗಿದ ಅಥಣಿ-ಕಾಗವಾಡ ಮತಕ್ಷೇತ್ರಗಳ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳನ್ನು ಉದ್ಧೇಶಿಸಿ ಮಾತನಾಡಿದ ಅವರು, ಗ್ರಾಮ ಪಂಚಾಯತಗಳ ಬಲವರ್ಧನೆಗಾಗಿ ಯಾವುದೇ ಪಕ್ಷ ಸೇರದೇ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಬೆಂಬಲಿಸಿ ಆಶೀರ್ವಾದ ಮಾಡುವಂತೆ ಕೋರಿದರು. …

Read More »

You cannot copy content of this page