ಬೆಳಗಾವಿ: ಜಿಲ್ಲೆಯ ರಾಯಬಾಗ ತಾಲೂಕಿನ ಬ್ಯಾಕೋಡನ ಪ್ರತಿಷ್ಠಿತ ಕನಕಶ್ರೀ ಪ್ರಕಾಶನವು ನೀಡುವ 2022ನೇ ಸಾಲಿನ “ಉತ್ತಮ ಪತ್ರಿಕೋದ್ಯಮ ಸೇವೆ ಸಲ್ಲಿಸಿದ್ದಕ್ಕಾಗಿ ಕನ್ನಡ ರತ್ನ ರಾಜ್ಯಪ್ರಶಸ್ತಿ”ಗೆ ನಾಡಿನ ಸಮಾಚಾರ ದಿನಪತ್ರಿಕೆ ಸಂಪಾದಕ ಬಸವರಾಜ ಉಪ್ಪಾರಟ್ಟಿ ಅವರು ಭಾಜನರಾಗಿದ್ದಾರೆ.
ಇವರ ಸಾಹಿತ್ಯ ಕ್ಷೇತ್ರ ಹಾಗೂ ಇತರೆ ಸಂಘಟನಾ ಕ್ಷೇತ್ರಗಳ ಸಾಧನೆಗಾಗಿ ಈ ಪ್ರಶಸ್ತಿ ನೀಡುತ್ತಿದ್ದು ,ಇದೇ ಮೇ 29ರಂದು ಧಾರವಾಡದ ರಂಗಾಯಣದಲ್ಲಿ ಜರುಗುವ ಅಖಿಲ ಕರ್ನಾಟಕ ದ್ವಿತೀಯ ಕವಿ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದೆಂದು ಪ್ರತಿಷ್ಠಾನದ ಅಧ್ಯಕ್ಷ ಸಿದ್ದರಾಮ ನಿಲಜಗಿ ತಿಳಿಸಿದ್ದಾರೆ.
