ಬೆಳಗಾವಿ: ಜಿಲ್ಲೆಯ ಭೂತರಾಮಹಟ್ಟಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಎಲ್ಲ ವಿಭಾಗಗಳು ಕಾರ್ಯನಿರ್ವಹಿಸಲು ಸ್ಥಳದ ಕೊರತೆಯಾಗಿರುವ ಹಿನ್ನೆಲೆಯಲ್ಲಿ, ಇಂದು ಬೆಳಗಾವಿ ತಾಲೂಕಿನ ಬೆಂಡಿಗೇರಿ, ಹಾಲಗಿಮರಡಿ ಮತ್ತು ಹಿರೇಬಾಗೇವಾಡಿ ಗ್ರಾಮಗಳಿಗೆ ವಿವಿ ಅಧಿಕಾರಿಗಳು, ಗ್ರಾಪಂ ಅಧ್ಯಕ್ಷರು, ಊರಿನ ಪ್ರಮುಖರೊಂದಿಗೆ ಭೇಟಿ ನೀಡಿ, ಸ್ಥಳ ಪರಿಶೀಲಿಸಲಾಯಿತು.
ಈ ಸಂದರ್ಭದಲ್ಲಿ ರಾಣಿ ಚೆನ್ನಮ್ಮ ವಿವಿಯ ವೈಸ್ ಚಾನ್ಸಲರ್ ಪ್ರೊ. ರಾಮಚಂದ್ರಗೌಡ, ರೆಜಿಸ್ಟರ್ ಪ್ರೊ. ಬಸವರಾಜ ಪಿ, ಮೌಲ್ಯಮಾಪನ ಕುಲಸಚಿವರಾದ ಪ್ರೊ.ಎಸ್.ಎಂ. ಹುರಕಡ್ಲಿ, ಹಣಕಾಸು ಅಧಿಕಾರಿ ಪ್ರೊ.ಡಿ.ಎನ್. ಪಾಟೀಲ, ಅಸಿಸ್ಟೆಂಟ್ ರಜಿಸ್ಟರ್ ಆದ ಕೆ ಆರ್ ಪೂಜಾರ, ಗ್ರಾಮದ ಪ್ರಮುಖರಾದ ಶ್ರೀ ಗಟ್ಟೇಶ ಧರೇಣ್ಣವರ, ಶ್ರೀ ಆರ್. ಎನ್.ಪಾಟೀಲ, ಶ್ರೀ ವಸ್ತ್ರದ, ವಿನಯ ಹಂಚಿನಮನಿ.ಶ್ರೀ ಮಲ್ಲಗೌಡ ಪಾಟೀಲ, ಶ್ರೀ ಬಸನಗೌಡ ಪಾಟೀಲ ಹಾಗೂ ಮೂರು ಗ್ರಾಮಗಳ ಹಿರಿಯರು ಉಪಸ್ಥಿತರಿದ್ದರು.