ಬೆಳಗಾವಿ- ಬೆಳಗಾವಿಯಲ್ಲಿ ಮೂರು ಕರೋನ ಪಾಸಿಟಿವ್ ಪತ್ತೆ ಹಿನ್ನೆಲೆಯಲ್ಲಿ ಬೆಳಗಾವಿ ನಗರ ಜನತೆಯಲ್ಲಿ ಆತಂಕ ಹೆಚ್ವಿಸಿದೆ, ಬೆಳಗಾವಿಯ ವಿವಿಧ ಬಡಾವಣೆಯ ಸಂಪರ್ಕ ರಸ್ತೆಯನ್ನು ಬಂದ್ ಮಾಡುತ್ತಿರುವ ಸ್ಥಳಿಯರು. ಹೊರಗಿನಿಂದ ಬರುವವರು ಮತ್ತು ಬಡಾವಣೆಯಲ್ಲಿರುವವರು ಹೊರ ಹೋಗದಂತೆ ಬೇಲಿ ಹಾಕಿದ ದೃಶ್ಯ ಬೆಳಗಾವಿಯಲ್ಲಿ ಎಲ್ಲೆಡೆ ನೋಡಬಹುದಾಗಿದೆ.
ಬೆಳಗಾವಿ ಜಾಧವ್ ನಗರ ಬಿ ಕೆ ಕಂಗ್ರಾಳ ಗ್ರಾಮದಲ್ಲಿ ರಸ್ತೆ,ಆಂಜನೇಯ ನಗರ,ನೆಹರು ನಗರದ ಸಂಪರ್ಕ ರಸ್ತೆಗಳನ್ನು ಬಂದ್ ಮಾಡಲಾಗಿದೆ.
ರಸ್ತೆಗೆ ಅಡ್ಡಲಾಗಿ ಮುಳ್ಳಿನ ಗಿಡ, ಮತ್ತು ದೊಡ್ಡ ಗಲ್ಲು ಹಾಗೂ ಸಿಮೆಂಟ್ ಪೈಪ್ ಗಳನ್ನ ಅಡ್ಡಲಾಗಿ ನಿಂತು ರಸ್ತೆ ಬಂದ್ ಮಾಡಿದ ಜನರು ಬಡಾವಣೆಗೆ ಹೊರಗಿನಿಂದ ಯಾರೂ ಒಳಗೆ ಬಾರದಂತೆ ,ಸ್ವಯಂ ಪ್ರೇರಣೆಯಂದ ತಮ್ಮ ತಮ್ಮ ಬಡಾವಣೆಗಳನ್ನು ಬಂದೋಬಸ್ತಿ ಮಾಡಿಕೊಂಡಿದ್ದಾರೆ.
ಕೆಲವೆಡೆ ಪೊಲೀಸ್ ರಿಂದ ರಸ್ತೆ ಸಂಪರ್ಕ ಮಾಡಲು ಅವಕಾಶ ಮಾಡಿಕೊಡಲಾಗಿದೆ.ಈಗ ಬೆಳಗಾವಿಯಲ್ಲಿ ಪುಲ್ ಹೈ ಅಲರ್ಟ…..
Sarvavani Latest Kannada News