ಬೆಂಗಳೂರು:ಹೈಬ್ರೀಡ್ ನ್ಯೂಜ್ ಕನ್ನಡ ಸುದ್ದಿ ವಾಹಿನಿ ಹಾಗೂ ಕಲಾಗೂಡು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ನೀಡಲಾಗುವ ಕರುನಾಡು ಸಾಧಕರು ಪ್ರಶಸ್ತಿಯನ್ನು ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ ಅವರಿಗೆ ಎಪ್ರಿಲ್ ೨೦ ರ ಬುಧವಾರ ಬೆಂಗಳೂರು ನಗರದ ಅರಮನೆಯ ಮೈದಾನದ ಮುಂಬಾಗ ಇರುವ ವೀರಶೈವ ಭವನದಲ್ಲಿ ಪ್ರಧಾನ ಮಾಡಲಾಯಿತು.
ಈ ಸಮಯದಲ್ಲಿ ಸುಕ್ಷೇತ್ರ ಕೂಲಹಳ್ಳಿ ಶ್ರೀ ಶ್ರೀ ಪಟ್ಟದ ಚಿನ್ಮಯ ಮಹಾಸ್ವಾಮಿಗಳು,ಬಿಗ್ ಬಾಸ್ ಖ್ಯಾತಿಯ ಸೋನು ಪಾಟೀಲ,ಹೈಬ್ರೀಡ್ ನ್ಯೂಜ್ ಕನ್ನಡ ಸುದ್ದಿ ವಾಹಿನಿಯ ಸಂಸ್ಥಾಪಕರಾದ ಡಾ.ಬಿ.ಎನ್.ಹೊರಪೇಟೆ,ಮೀಸ್ ಸೌಥ ವರ್ಡ ವಿಜೇತರಾದ ಡಾ.ಶಿಲ್ಪಾ ಸುಧಾಕರ, ಚಲನಚಿತ್ರ ನಟಿ ಮಾಲತಿಶ್ರೀ ಮೈಸೂರು, ವಕೀಲರಾದ ಕೆ.ಎಸ್.ಕೊಡಗೇರಿ,ಪತ್ರಕರ್ತರಾದ ಹನುಮಂತ ಹಳ್ಳಿಕೇರಿ ಸೇರಿದಂತೆ ಅನೇಕರು ಹಾಜರಿದ್ದರು.
