ಭಾನುವಾರ , ಡಿಸೆಂಬರ್ 22 2024
kn
Breaking News

gcsteam

ಶಿಕ್ಷಕಿ ಪೂರ್ಣಿಮಾ ಯಲಿಗಾರ ಅವರಿಗೆ ‘ಗುರುಕುಲ ಸಾಹಿತ್ಯ ಕೇಸರಿ’ ಪ್ರಶಸ್ತಿ

ಮೂಡಲಗಿ: ಇಲ್ಲಿಯ ವಿದ್ಯಾನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಪೂರ್ಣಿಮಾ ಯಲಿಗಾರ ಅವರಿಗೆ ತುಮಕೂರಿನ ಗುರುಕುಲ ಕಲಾ ಪ್ರತಿಷ್ಠಾನದಿಂದ ಕೊಡಮಾಡುವ ‘ಗುರುಕುಲ ಸಾಹಿತ್ಯ ಕೇಸರಿ ಪ್ರಶಸ್ತಿ’ಯನ್ನು ಪ್ರಕಟಿಸಿದ್ದಾರೆ. ಪೂರ್ಣಿಮಾ ಯಲಿಗಾರ ಅವರು ನೂರಾರು ಕವಿತೆಗಳನ್ನು ರಚಿಸುವ ಮೂಲಕ ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡಿದ್ದು ಪ್ರಶಸ್ತಿ ಪಡೆದುಕೊಂಡಿರುವುದಕ್ಕೆ ಸಾಹಿತಿ ಪ್ರೊ. ಸಂಗಮೇಶ ಗುಜಗೊಂಡ, ಬಾಲಶೇಖರ ಬಂದಿ, ಬಿಇಒ ಅಜಿತ್ ಮನ್ನಿಕೇರಿ ಹಾಗೂ ಸಿದ್ರಾಮ್ ದ್ಯಾಗಾನಟ್ಟಿ, ಸಿರಿಗನ್ನಡ ತಾಲ್ಲೂಕಾ ಅಧ್ಯಕ್ಷೆ ಸಾವಿತ್ರಿ ಕಮಲಾಪೂರ …

Read More »

SLC ವಿಧ್ಯಾರ್ಥಿಗಳಿಗೆ ಉಚಿತವಾಗಿ ಮಾಸ್ಕ್ ಸ್ಯಾನಿಟೈಸರ್ ಊಟದ ಪ್ಯಾಕೆಟ್,ನೀರಿನ ಬಾಟಲ್,ವಿತರಿಸಿದ ಶಿಕ್ಷಣ ಪ್ರೇಮಿ ಚಿಕ್ಕ ರೇವಣ್ಣ

ರಾಮದುರ್ಗ: ಪಟ್ಟಣದ ಖ್ಯಾತ ಉದ್ಯಮಿ ಚಿಕ್ಕರೇವಣ್ಣನವರು ಕೋವಿಡ್ ಸಂದರ್ಭದಲ್ಲಿ ತಾಲೂಕಿನ ಪ್ರತಿಯೊಂದು ಹಳ್ಳಿ ಗಳಲ್ಲಿ ಆಹಾರದ ಕಿಟ್ ವಿತರಿಸಿ ಮಾನವೀಯತೆ ಮೆರೆದರು. SSLC ವಿಧ್ಯಾರ್ಥಿಗಳ ನೇರವಿಗೆ ಬಂದ ಶಿಕ್ಷಣ ಪ್ರೇಮಿ ಚಿಕ್ಕ ರೇವಣ್ಣನವರು ರಾಮದುರ್ಗ ತಾಲೂಕಿನ 17 ಪರೀಕ್ಷಾ ಕೇಂದ್ರಗಳಿಗೆ ಹಾಗೂ 3901ಎಲ್ಲಾ ವಿಧ್ಯಾರ್ಥಿಗಳಿಗೆ ಹಾಗೂ ಸಿಬ್ಬಂದಿವರ್ಗದವರಿಗೆ 6000 ಮಾಸ್ಕ್, 6000 ಸ್ಯಾನಿಟೈಸರ್,6000 ಊಟದ ಪ್ಯಾಕೆಟ್, 6000 ನೀರಿನ ಬಾಟಲ್ಗಳನ್ನು ವಿತರಣೆ ಮಾಡಲು ವ್ಯವಸ್ಥೆ ಮಾಡಿದ್ದಾರೆ,ಇಂದು ತಾಲೂಕಿನ ಎಲ್ಲಾ ಪರೀಕ್ಷಾ …

Read More »

ಕೋವಿಡ್-19 ಎಸ್.ಒ.ಪಿಯ ಪ್ರಕಾರ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ SSLC ಪ್ರಥಮ ಪರೀಕ್ಷೆ ಯಶಸ್ವಿ : ತಹಶಿಲ್ದಾರ ಡಿ.ಜೆ ಮಹಾತ

ಮೂಡಲಗಿ : ಕೋವಿಡ್-19 ಎಸ್.ಒ.ಪಿಯ ಪ್ರಕಾರ ಅಗತ್ಯ ಮುನ್ನಚ್ಚರಿಕೆ ಕ್ರಮಗಳೊಂದಿಗೆ ಪ್ರಥಮ ಪರೀಕ್ಷೆಯು ಯಶಸ್ವಿಯಾಗಿದೆ. ವಿದ್ಯಾರ್ಥಿಗಳು ಶಾಂತ ರೀತಿಯಲ್ಲಿ ಮಂದಹಾಸದೊಂದಿಗೆ ಸಾಮಾಜಿಕ ಅಂತರದಲ್ಲಿ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯುತ್ತಿರುವದು ಸಂತಸ ತಂದಿದೆ ಎಂದು ಮೂಡಲಗಿ ತಹಶೀಲ್ದಾರ ಡಿ.ಜೆ ಮಾಹತ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಸೋಮವಾರ ಜರುಗಿದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಪ್ರಥಮ ಪರೀಕ್ಷೆಯ ಹಿನ್ನೆಲೆ ವಿವಿಧ ಕೇಂದ್ರಗಳಿಗೆ ಭೇಟಿ ನೀಡಿ ಪರೀಕ್ಷಾ ಕ್ರಮಗಳ ಕುರಿತು ಮಾತನಾಡಿ, ಪರೀಕ್ಷೆಗಳು ಪ್ರತಿಯೊಬ್ಬರಿಗೂ ಪುನರಾವಲೋಕನ ಮಾಡಿಕೊಳ್ಳಲು …

Read More »

ಗ್ರಾಮದ ಪ್ರತಿಯೊಂದು ಮನೆಗಳಿಗೆ ನಳಗಳ ಮೂಲಕ ಕುಡಿಯುವ ನೀರು ಸರಬರಾಜು ಆಗಲಿದೆ: ಕೆ.ಎಮ್.ಎಪ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಹಳ್ಳೂರ: ದೇಶದ ಪ್ರತಿ ಮನೆ ಮನೆಗೆ ನಳಗಳ ಮೂಲಕ ಕುಡಿಯುವ ನೀರಿನ ಯೋಜನೆಯನ್ನು ರೂಪಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸಿದ ಶಾಸಕ, ಕೆಎಮ್‍ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು, ಕುಡಿಯುವ ನೀರಿನ ಯೋಜನೆಯನ್ನು ಎಲ್ಲರೂ ಸದ್ಬಳಕೆ ಮಾಡಿಕೊಳ್ಳುವಂತೆ ಗ್ರಾಮಸ್ಥರಲ್ಲಿ ವಿನಂತಿಸಿಕೊಂಡರು. ಗ್ರಾಮದಲ್ಲಿ ಶನಿವಾರದಂದು ಜರುಗಿದ 1.76 ಕೋಟಿ ರೂ. ವೆಚ್ಚದ ಜೆಜೆಎಂ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಹಳ್ಳೂರ ಗ್ರಾಮದ ಪ್ರತಿಯೊಂದು ಮನೆಗಳಿಗೆ ನಳಗಳ …

Read More »

ಮಕ್ಕಳು ಭಯಬಿಟ್ಟು ಧೈರ್ಯದಿಂದ ಪರೀಕ್ಷೆ ಎದುರಿಸಿ : ನಾಯ್ಕ

ಮೂಡಲಗಿ: ‘ಮೂಡಲಗಿ ಶೈಕ್ಷಣಿಕ ವಲಯದಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಾಗಿ ನಿಯೋಜನೆಗೊಂಡಿರುವ 35 ಪರೀಕ್ಷಾ ಕೇಂದ್ರಗಳು ಇಲಾಖೆಯ ಮಾರ್ಗಸೂಚಿಯಂತೆ ಪೂರ್ಣವಾಗಿ ಸಿದ್ದಗೊಂಡಿವೆ’ ಎಂದು ಬೆಳಗಾವಿಯ ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಪದನಿಮಿತ್ತ ಸಹ ನಿರ್ದೇಶಕ ರಾಜೀವ ವಿ. ನಾಯ್ಕ ಹೇಳಿದರು. ತಾಲ್ಲೂಕಿನ ಗುರ್ಲಾಪುರ ಗ್ರಾಮದಲ್ಲಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಸಿದ್ದತೆಯನ್ನು ಪರಿಶೀಲಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ಭಯಬಿಟ್ಟು ಪರೀಕ್ಷೆಗೆ ಹಾಜರಾಗುವ ರೀತಿಯಲ್ಲಿ ಕೇಂದ್ರಗಳನ್ನು …

Read More »

50 ಲಕ್ಷ ರೂ. ವೆಚ್ಚದಲ್ಲಿ ಸ್ವಂತ ಕಟ್ಟಡ ಹೊಂದುತ್ತಿರುವುದು ಪ್ರಶಂಸನೀಯ :ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ : ಶತಮಾನೋತ್ಸವ ಆಚರಿಸಿರುವ ಕಲ್ಲೋಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು ಈ ಭಾಗದಲ್ಲಿ ರೈತರಿಗೆ ಸಿಗಬೇಕಿರುವ ಎಲ್ಲ ಸವಲತ್ತುಗಳನ್ನು ನೀಡುತ್ತ ಬರುತ್ತಿದೆ. ಈ ಹಿಂದೆ 8 ಕೋಟಿ ರೂ.ಗಳಷ್ಟಿದ್ದ ಪತ್ತನ್ನು 15 ಕೋಟಿ ರೂ.ಗಳವರೆಗೆ ಹೆಚ್ಚಿಸಿ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ವಿತರಿಸಿದೆ ಎಂದು ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಶನಿವಾರದಂದು ಕಲ್ಲೋಳಿ ಪಿಕೆಪಿಎಸ್‍ಗೆ ಭೇಟಿ ನೀಡಿ ಮಾತನಾಡಿದ ಅವರು, ರೈತರ ಆರ್ಥಿಕ …

Read More »

ಜಲಜೀವನ ಮಿಷನ್ ಕಾಮಗಾರಿಗೆ 36.50 ಕೋಟಿ ರೂ. ಅನುದಾನ ಬಿಡುಗಡೆ : ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ : ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅನುದಾನದಡಿ ಅರಭಾವಿ ಮತಕ್ಷೇತ್ರಕ್ಕೆ ಜೆಜೆಎಂ ಯೋಜನೆಯಡಿ 36.50 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಮಂಗಳವಾರದಂದು ತಾಲೂಕಿನ ವಡೇರಹಟ್ಟಿ ಗ್ರಾಮದಲ್ಲಿ 1.60 ಕೋಟಿ ರೂ. ವೆಚ್ಚದ ಜೆಜೆಎಂ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಕಾಮಗಾರಿಗಳು ಈಗಾಗಲೇ ಪ್ರಗತಿಯಲ್ಲಿವೆ ಎಂದು ಹೇಳಿದರು. ಪ್ರತಿ ಮನೆ ಮನೆಗಳಿಗೆ ಕುಡಿಯುವ …

Read More »

ಎಸ್.ಎಸ್.ಎಲ್.ಸಿ ಮಕ್ಕಳಿಗೆ ಪರೀಕ್ಷಾ ತಯಾರಿಗಾಗಿ ನಮ್ಮ ನಡೆ ಮಕ್ಕಳ ಮನೆ ಕಡೆ : ಬಿಇಒ ಮನ್ನಿಕೇರಿ

ಮೂಡಲಗಿ: ಕೋವಿಡ್-19 ಸಂದರ್ಭದಲ್ಲಿ ಭೌತಿಕವಾಗಿ ತರಗತಿಗಳನ್ನು ನಡೆಸಲು ಸಾಧ್ಯವಾಗಿರುವದಿಲ್ಲ. ಅಗತ್ಯ ಸಂಪನ್ಮೂಲಗಳನ್ನು ಬಳಸಿಕೊಂಡು ಮಕ್ಕಳ ಜ್ಞಾನಾರ್ಜನೆ ಮಟ್ಟವನ್ನು ಹೆಚ್ಚಿಸಲು ಪ್ರಯತ್ನಿಸಿದೆ. ಪರೀಕ್ಷಾ ತಯಾರಿಗಾಗಿ ‘ನಮ್ಮ ನಡೆ ಮಕ್ಕಳ ಮನೆ ಕಡೆ’ ಕಾರ್ಯಕ್ರಮ ಆಯೋಜಿಸುವ ಮೂಲಕ ಮಕ್ಕಳಿಗೆ ಪ್ರೇರಣಾ ಕಾರ್ಯ ಮಾಡಲಾಗುತ್ತಿದೆ ಎಂದು ಬಿಇಒ ಅಜಿತ ಮನ್ನಿಕೇರಿ ಹೇಳಿದರು. ಮೂಡಲಗಿ ಶೈಕ್ಷಣಿಕ ವಲಯದಲ್ಲಿ ಆಯೋಜಿಸಿರುವ ‘ನಮ್ಮ ನಡೆ ಮಕ್ಕಳ ಮನೆ ಕಡೆ’ ವಿನೂತನ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಸ್.ಎಸ್.ಎಲ್.ಸಿ ಮಕ್ಕಳ ಮನೆ ಭೇಟಿ …

Read More »

ಪಾಲಕರು, ವಿದ್ಯಾರ್ಥಿಗಳು ಭಯ ಪಡದೆ ಎಸ್.ಎಸ್.ಎಲ್.ಸಿ ಪರೀಕ್ಷೆಗಳಿಗೆ ಹಾಜರಾಗಿ : ಅಜಿತ ಮನ್ನಿಕೇರಿ

ಮೂಡಲಗಿ; ಕೊರೋನ ಸಾಂಕ್ರಾಮಿಕ ರೋಗದ ಅಲೆಯ ಭೀತಿಯಲ್ಲಿ ಎಸ್.ಎಸ್.ಎಲ್.ಸಿ ಮಕ್ಕಳಿಗೆ ಪರೀಕ್ಷಾ ತಯಾರಿ ಹಾಗೂ ಸಿದ್ದತೆ ಅತ್ಯಾವಶ್ಯಕವಾಗಿದೆ. ಯಾವುದೇ ಕಾರಣಕ್ಕೂ ಭಯ ಪಡದೆ ವಿದ್ಯಾರ್ಥಿಗಳು ಮತ್ತು ಪಾಲಕರು ಪರೀಕ್ಷೆಗಳಿಗೆ ಹಾಜರಾಗಬೇಕೆಂದು ಬಿಇಒ ಅಜಿತ ಮನ್ನಿಕೇರಿ ಹೇಳಿದರು. ಅವರು ಶುಕ್ರವಾರ ಮೂಡಲಗಿಯಲ್ಲಿ ಜರುಗಿದ ಎಸ್.ಎಸ್.ಎಲ್.ಸಿ ಮಕ್ಕಳಿಗೆ ‘ಕ್ಲಸ್ಟರ ಮಟ್ಟದ’ ಫೋನ್ ಇನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕೊವೀಡ್-19 ಸಂದರ್ಭದಲ್ಲಿ ಶೈಕ್ಷಣಿಕವಾಗಿ ಭೌತಿಕವಾಗಿ ತರಗತಿಗಳನ್ನು ಆಯೋಜಿಸಲು ಸಾಧ್ಯವಾಗಲಿಲ್ಲ. ಸಮೂಹ ಮಾದ್ಯಮ ಹಾಗೂ ಸಾಮಾಜಿಕ …

Read More »

ಅಧಿಕಾರಿಗಳ ನಿರ್ಲಕ್ಷ್ಯ :ಚರಂಡಿ ವ್ಯವಸ್ಥೆ ಇಲ್ಲದೆ ನಿಂತ ಮಳೆ ನೀರು – ಸಾರ್ವಜನಿಕರ ಪರದಾಟ

ರಾಮದುರ್ಗ: ತಾಲೂಕಿನ ಹಲಗತ್ತಿ ಗ್ರಾಮ ಪಂಚಾಯಯಿತಿ ವ್ಯಾಪ್ತಿಯ ಹಲಗತ್ತಿ ಗ್ರಾಮದ ವಾರ್ಡ್ ನಂಬರ್.3 ರಲ್ಲಿ ಮಳೆಯಾದ ನೀರು ಹೋಗಲು ಸರಿಯಾದ ಮಾರ್ಗ ಇಲ್ಲದೆ ಇರುದರಿಂದ ಇಲ್ಲಿನ ನಿವಾಸಿಗಳು ನಿಂತ ನೀರಿನಲ್ಲಿಯೇ ನಡೆದಾಡುವಂತಹ ಪರಿಸ್ಥಿತಿ ಇಲ್ಲಿ ನಿರ್ಮಾಣವಾಗಿದೆ. ಅಲ್ಲದೆ ಮಳೆಯಾದ ನೀರು ಒಮ್ಮೊಮ್ಮೆ ಮನೆಯೊಳಗೆ ನುಗ್ಗುತ್ತದೆ ಎಂದು ಇಲ್ಲಿನ ನಿವಾಸಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಅಲ್ಲದೆ ಇಲ್ಲಿನ ನಿವಾಸಿಗಳು ತಮ್ಮ ಕೆಲಸ ಕಾರ್ಯಗಳಿಗೆ ಹೋಗಬೇಕಾದರೆ ಚಿಕ್ಕ ಮಕ್ಕಳು, ವೃದ್ಧರು ಹಲವಾರು ಬಾರಿ …

Read More »

You cannot copy content of this page