ಅಥಣಿ: ಏಪ್ರಿಲ್ 4 ರಂದು ಅಥಣಿ ತಾಲೂಕಾ ಪತ್ರಕರ್ತರ ಸಂಘ ಇವರ ವತಿಯಿಂದ ತಾಲೂಕು ಮಟ್ಟದ ಪತ್ರಕರ್ತರ ಕಾರ್ಯಾಗಾರ ಕಾರ್ಯವನ್ನು ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಉದ್ಘಾಟನೆ ಮಾಡಲಿದ್ದಾರೆ ಎಂದು ಅಥಣಿ ಪತ್ರಕರ್ತರ ಸಂಘದ ಅಧ್ಯಕ್ಷ ರವಿ ಎಸ್ ಕಾಂಬಳೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿ ಮುಂಬರುವ ರವಿವಾರ ಎಪ್ರಿಲ್ -4 ರಂದು ಪಟ್ಟಣದ ಸತ್ತಿ ರಸ್ತೆಯ ಐ.ಎಂ.ಎ. ಸಭಾ ಭವನದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಡಿಸಿಎಂ ಲಕ್ಷ್ಮಣ ಸವದಿ ಹಾಗೂ ಸಚಿವ ಶ್ರೀಮಂತ ಪಾಟೀಲ್, ಚಿಕ್ಕೋಡಿ ಲೋಕಸಭಾ ಸದಸ್ಯ ಅಣ್ಣಾಸಾಬ ಜೊಲ್ಲೆ, ಕಾಂಗ್ರೆಸ್ ಮುಖಂಡರಾದ ಗಜಾನನ ಮಂಗಸೂಳಿ, ಎಸ್ ಕೆ ಬೂಟಾಳಿ ಹಾಗೂ ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು ಎಂದು ರವಿ ಕಾಂಬಳೆ ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ಇದೆ ವೇಳೆ ಡಾ, ರಾಮಣ್ಣ ದೊಡ್ಡನಿಂಗಪ್ಪಗೊಳ ಮಾತನಾಡಿ, ಸಮಾಜ ಅ೦ಕು ಡೊಂಕು ತಿದ್ದುವುದು ಪತ್ರಕರ್ತರ ಕೆಲಸ ಸದ್ಯ ಮಾಧ್ಯಮ ಕ್ಷೇತ್ರದಲ್ಲಿ ಹಲವಾರು ಯುವಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರಿಂದಾಗಿ ಯುವಕರಿಗೆ ಹಾಗೂ ಇನ್ನಿತರರಿಗೆ ಹಿರಿಯರಿಂದ ಮಾರ್ಗದರ್ಶನ ಸಿಗುವ ನಿಟ್ಟಿನಲ್ಲಿ ಒಂದು ದಿನದ ಪತ್ರಕರ್ತರಿಗೆ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.
ಪತ್ರಕರ್ತನ ಜವಾಬ್ದಾರಿ, ನೈತಿಕತೆ ಮತ್ತು ಮಹತ್ವ ವಿಷಯದ ಕುರಿತು ಮಾತನಾಡಲು ಪ್ರಜಾವಾಣಿ ದಿನಪತ್ರಿಕೆಯ ಬ್ಯೂರೊ ಮುಖ್ಯಸ್ಥೆ ಶ್ರೀಮತಿ ರಶ್ಮೀ ಎಸ್, ವರದಿಗಾರಿಕೆಗೆ ಇಂದಿಲ ಸವಾಲುಗಳು ವಿಷಯದ ಕುರಿತು ಮಾತನಾಡಲು ಉದಯವಾಣಿ ದಿನಪತ್ರಿಕೆಯ ಹುಬ್ಬಳ್ಳಿಯ ಉಪಮುಖ್ಯ ವರದಿಗಾರ ಅಮರೇಗೌಡ ಗೋನವಾರ ಹಾಗೂ ಮಾಧ್ಯಮ ಮತ್ತು ಸಮಾಜ ವಿಷಯದ ಕುರಿತು ಮಾತನಾಡಲು ವಿಶ್ವವಾಣಿ ದಿನಪತ್ರಿಕೆ ಬೆಳಗಾವಿ ಜಿಲ್ಲಾ ವರದಿಗಾರ ವಿನಾಯಕ ಮಠಪತಿ ಅವರು ಆಗಮಿಸಲಿದ್ದಾರೆ ಎಂದರು.
ಕಾರ್ಯಾಗಾರ ಕಾರ್ಯಕ್ರಮವನ್ನು ಪಕ್ಕದ ತಾಲೂಕಿನ ಜಮಖಂಡಿ, ರಬಕವಿ-ಬನಹಟ್ಟಿ, ಕುಡಚಿ, ಕಾಗವಾಡ, ಹಾಗೂ ಅಥಣಿ ತಾಲೂಕಿನ ಹಿರಿಯ ಕಿರಿಯ ವರದಿಗಾರರು ಕಾರ್ಯಕ್ರಮಕ್ಕೆ ಬರುವಂತೆ ಆಹ್ವಾನಿಸಿದರು. ಹಾಗೂ ಸಮಾಜದಲ್ಲಿ ಸಾಧನೆ ಮಾಡಿದ ಅನೇಕ ಸಾಧಕರಿಗೆ ಗಣ್ಯರಿಗೆ ಹಾಗೂ ಹಿರಿಯ ಪತ್ರಕರ್ತರಿಗೂ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.