ಅಥಣಿ:ಮುರಗುಂಡಿ ಗ್ರಾಮದಿಂದ ಖಿಳೇಗಾವ ಗ್ರಾಮದ ವರೆಗೆ ಲೋಕೋಪಯೋಗಿ ಇಲಾಖೆಯ ವತಿಯಿಂದ ಮಂಜೂರಾದ ರಸ್ತೆಯ ಡಾಂಬರೀಕರಣ ಸೇರಿದಂತೆ ಸಂಪೂರ್ಣ ಕಾಮಗಾರಿಯು ಕಳಪೆ ಮಟ್ಟದ್ದಾಗುತ್ತಿದೆ ಎಂದು ಅಥಣಿ ತಾಲ್ಲೂಕಿನ ಸಂಬರಗಿ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಮಹಾದೇವ ತಾನಗೆ ಆರೋಪಿಸಿದ್ದಾರೆ.
ಸುಮಾರು 17ಕೋಟಿ ವೆಚ್ಚದ ರಸ್ತೆ ಕಾಮಗಾರಿಯು ಮುರಗುಂಡಿ ಗ್ರಾಮದಿಂದ ಸಂಬರಗಿ ಗ್ರಾಮದ ಮುಖಾಂತರ ಹಾಯ್ದು ಹೋಗುತ್ತಿದೆ ಆದರೆ ಜಂಬಗಿ ಗ್ರಾಮದಿಂದ ಸಂಬರಗಿಯವರೆಗೆ ನಡೆಯುತ್ತಿರುವ 4ಕಿಲೋ ಮೀಟರ್ ಕಾಮಗಾರಿಯನ್ನು ಅಧ್ಯಕ್ಷರಾದ ಮಹಾದೇವ ತಾನಗೆ ಪರಿಶೀಲಿಸಿ ಅತ್ಯಂತ ಕಳಪೆ ಗುಣಮಟ್ಟದ ಕಾಮಗಾರಿಯ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿ ಮಾತನಾಡಿದ ಅವರು.
ಸರ್ಕಾರ ಕಾಮಗಾರಿಗಾಗಿ ಕೋಟ್ಯಾಂತರ ರೂಪಾಯಿಗಳನ್ನು ವಿನಿಯೋಗಿಸುತ್ತಿದೆ ಆದರೆ ಅಥಣಿ ತಾಲೂಕಿನ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಗುತ್ತಿಗೆದಾರರ ಕೈ ಗೊಂಬೆಯಾಗಿ ವರ್ತಿಸಿ ಕಾಮಗಾರಿಯನ್ನೆ ಹಳ್ಳ ಹಿಡಿಸುವ ಆತಂಕ ಉಂಟಾಗುತ್ತಿದೆ ಎಂದ ಅವರು ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ಪಡೆಯಲು ಸಂಪರ್ಕಿಸಿದರೆ ಉಡಾಫೆ ಉತ್ತರ ನೀಡಿ ಕೈ ತೊಳೆದುಕೊಳ್ಳುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಿಗದಿಪಡಿಸಿದಂತೆ ಸಮರ್ಪಕವಾದ ಖಡೀಕರಣ ಹಾಗೂ ಡಾಂಬರೀಕರಣ ಮಾಡದೆ ಮುಂಚೆ ಇದ್ದ ರಸ್ತೆಗೆ ನೆಪಥ್ಯಕ್ಕೆ ಮಾತ್ರ ಖಡೀಕರಣ ಮಾಡಿ ಕಾಮಗಾರಿಗೆ ಎಳ್ಳು-ನೀರು ಬಿಡುವ ಸಿದ್ದತೆಯಲ್ಲಿದ್ದಾರೆ ಎಂದು ಕಾಮಗಾರಿಯ ಹುಳುಕನ್ನು ಬಹಿರಂಗಗೊಳಿಸಿದ್ದಲ್ಲದೆ ಅತ್ಯಂತ ಕನಿಷ್ಠ ಗುಣಮಟ್ಟದ ಕಾಮಗಾರಿ ಮಾಡಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಸೇರಿ ಹಣ ಕೊಳ್ಳೇ ಹೊಡೆಯುವ ಹುನ್ನಾರ ಮಾಡುವ ಅನುಮಾನ ವ್ಯಕ್ತವಾಗುತ್ತಿದೆ ಎಂದರು.
ಅಲ್ಲದೆ ಇದೇ ಯೋಜನೆಯ ಕಾಮಗಾರಿಯನ್ನು ಸಂಬರಗಿ ಗ್ರಾಮದಿಂದ ಶಿರೂರ ವರೆಗೆ ೩ಕಿಮೀ ರಸ್ತೆ ಕಾಮಗಾರಿಯನ್ನು ಮಹಾರಾಷ್ಟ್ರದ ಸಹ್ಯಾದ್ರಿ ಕಂಪನಿಯು ಅತ್ಯಂತ ಉತ್ತಮ ಗುಣಮಟ್ಟದಲ್ಲಿ ನಡೆಸುತ್ತಿದೆ ಆದರೆ ಈ ಕಾಮಗಾರಿಯಲ್ಲೂ ಮೂಗು ತೋರಿಸಿ ಪ್ರಭಾವಿಗಳು ಸಹ್ಯಾದ್ರಿ ಕಂಪನಿಯ ಗುತ್ತಿಗೆಯನ್ನೇ ಕಸಿದುಕೊಂಡಿದ್ದು ಇದು ಅತ್ಯಂತ ಹೇಯ ಕೃತ್ಯ ಎಂದು ಹರಿಹಾಯ್ದರು. ಕೋಟ್ಯಾಂತರ ಹಣದ ಕಾಮಗಾರಿಯ ಸ್ವರೂಪವನ್ನು ಬೇಕಾ ಬಿಟ್ಟಿಯಾಗಿ ಮನಬಂದಂತೆ ಕಳಪೆ ಮಟ್ಟಕ್ಕೆ ಕೊಂಡೊಯ್ಯುತ್ತಿರುವ ಸಂಬಂಧಪಟ್ಟ ಗುತ್ತಿಗೆದಾರರು ಹಾಗೂ ಅಧಿಕಾರಿಗಳು ತಕ್ಷಣ ಎಚ್ಚೆತ್ತುಕೊಂಡು ಕಾಮಗಾರಿಯನ್ನು ಉತ್ಕ್ರಷ್ಟ ಮಟ್ಟದಲ್ಲಿ ಮಾಡಬೇಕು ಇಲ್ಲವಾದಲ್ಲಿ ಗ್ರಾಮಸ್ಥರೆಲ್ಲರೂ ಸೇರಿ ಉಗ್ರಹೋರಾಟಮಾಡಲಾಗುವುದೆಂದು ಎಚ್ಚರಿಸಿದರು.
ಅಲ್ಲದೆ ಹೇಳುವವರು ಕೇಳುವವರು ಯಾರೂ ಇಲ್ಲ ಎಂದು ಈ ರೀತಿಯ ಉದ್ದಟತನದ ವರ್ತನೆ ಸರಿಯಲ್ಲ ಸರ್ಕಾರ ಇದರಲ್ಲಿ ಭಾಗಿಯಾದ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಒತ್ತಾಯಿಸಿದರು.