ಶನಿವಾರ , ಡಿಸೆಂಬರ್ 21 2024
kn
Breaking News

ತುಮಕೂರು ಮತ್ತು ಮಂಡ್ಯ ಜಿಲ್ಲೆಯಲ್ಲಿ ಎರಡು ಮೆಗಾ ಫುಡ್ ಪಾರ್ಕ್ಗಳನ್ನು ಅನುಮೋದಿಸಲಾಗಿದೆ : ಸಂಸದ ಈರಣ್ಣ ಕಡಾಡಿ

Spread the love

ಮೂಡಲಗಿ: ದೇಶದಲ್ಲಿ ಆಹಾರ ಸಂಸ್ಕರಣೆ ವಲಯವನ್ನು ಅಭಿವೃದ್ಧಿಪಡಿಸಲು ಕೇಂದ್ರ ಸರಕಾರ ರಾಜ್ಯದ ತುಮಕೂರು ಮತ್ತು ಮಂಡ್ಯ ಜಿಲ್ಲೆಯಲ್ಲಿ ಎರಡು ಮೆಗಾ ಫುಡ್ ಪಾರ್ಕ್ಗಳನ್ನು ಅನುಮೋದಿಸಲಾಗಿದೆ ಎಂದು ಕೇಂದ್ರ ಆಹಾರ ಸಂಸ್ಕರಣಾ, ಕೈಗಾರಿಕೆಗಳ ಸಚಿವ ಪಶುಪತಿ ಕುಮಾರ್ ಪರಸ್ ಅವರು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.
ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಮೆಗಾ ಫುಡ್ ಪಾರ್ಕ್ ಯೋಜನೆಯ ಕುರಿತು ಸಂಸದ ಈರಣ್ಣ ಕಡಾಡಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಒಟ್ಟು ೪೧ ಮೆಗಾ ಫುಡ್ ಪಾರ್ಕ್ಗಳನ್ನು ಅನುಮೋದಿಸಲಾಗಿದೆ. ಕರ್ನಾಟಕದ ತುಮಕೂರು ಇಂಟಿಗ್ರೇಟೆಡ್ ಪುಡ್ ಪಾರ್ಕ ಪ್ರೆವೆಟ್ ಲಿ. ಸಂಸ್ಥೆಗೆ ೫೦ ಕೋಟಿ ರೂ ಮಂಜೂರುರಾಗಿದ್ದು, ೪೮.೭೨ ಕೋಟಿ ರೂ ಅನುಧಾನ ಬಿಡಗಡೆಯಾಗಿದೆ ಹಾಗೂ ಮಂಡ್ಯ ಫೇವರಿಚ್ ಇನ್ಫ್ರಾ ಮೆಗಾ ಫುಡ್ ಪಾರ್ಕ್ ಲಿ. ಕಂಪನಿಗೆ ೫೦ ಕೋಟಿ ರೂ ಮಂಜೂರುರಾಗಿದ್ದು, ೪೮.೭೨ ಕೋಟಿ ರೂ ಅನುದಾನ ಬಿಡುಗಡೆಯಾಗಿದೆ ಎಂದು ಸಚಿವರು ಉತ್ತರಿಸಿದ್ದಾರೆಂದು ಸಂಸದರು ಮಾಹಿತಿ ಹಂಚಿಕೊoಡರು.


Spread the love

About gcsteam

Check Also

ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಆಗ್ರಹಿಸಿ ಮೂಡಲಗಿಯಲ್ಲಿ ಪ್ರತಿಭಟನೆ

Spread the loveಮೂಡಲಗಿ: ಅರಭಾವಿ ಕ್ಷೇತ್ರದ ಶಾಸಕರು ಹಾಗೂ ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಉಪ್ಪಾರ ಸಮಾಜದ ಮೀಸಲಾತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page