ಭಾನುವಾರ , ಡಿಸೆಂಬರ್ 22 2024
kn
Breaking News

ಕಿನ್ನಾಳ ಕಲೆಯ ಜೊತೆಗೆ ಕಲಾವಿದರೂ ಬೆಳೆಯಬೇಕು – ಪಿ.ಜಿ.ಆರ್. ಸಿಂಧ್ಯಾ

Spread the love

.
ಕೊಪ್ಪಳ : ಕಿನ್ನಾಳ ಕಲೆ ಎಂಬುದು ವಿಜಯನಗರ ಸಾಮ್ರಾಜ್ಯದ ಕಾಲದಿಂದ ಇಂದಿನವರೆಗೂ ಕೊಂಚವೂ ಬದಲಾಗದೇ ತನ್ನ ಮೂಲ ಸ್ವರೂಪವನ್ನೇ ಉಳಿಸಿಕೊಂಡು ಬಂದಿರುವುದು ಹೆಮ್ಮೆಯ ವಿಷಯವಾಗಿದೆ. ಇದೊಂದು ಅಪರೂಪದ ಕಲೆಯಾಗಿದ್ದು ಜಗತ್ಪಪ್ರಸಿದ್ಧವಾದುದಾಗಿದೆ.ವಿಜಯನಗರ ಸಾಮ್ರಾಜ್ಯ ಅಳಿದಮೇಲೆ ಅಲ್ಲಿಂದ ಪಲಾಯನ ಮಾಡಿದ ಹಲವರಲ್ಲಿ ಕೆಲ ಕಲಾವಿದರು ಕಿನ್ನಾಳಿಗೆ ವಲಸೆ ಬಂದರು. ಹಾಗೆ ಬಂದವರಲ್ಲಿ ಸಂಜೀವಪ್ಪರೆAಬುವರು ಒಬ್ಬರು. ಇಲ್ಲಿಯ ದೇಸಾಯಿಯವರ ಆಶ್ರಯ ದೊರೆತು ಇಲ್ಲಿಯೇ ನೆಲೆ ನಿಂತರು. ಹೀಗೆ ಕಿನ್ನಾಳಿಗೆ ಬಂದ ಈ ಕಲಾವಿದರು ಅಂದಿನಿoದ ವಂಶಪಾರoಪರ್ಯವಾಗಿ ಈ ಕಲೆಯನ್ನು ಹಾಗೆಯೇ ಉಳಿಸಿಕೊಂಡು ಬಂದಿದ್ದಾರೆ ಎಂದು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ನ ರಾಜ್ಯ ಮುಖ್ಯ ಆಯುಕ್ತರು ಮತ್ತು ಮಾಜಿ ಸಚಿವರಾದ ಪಿ.ಜಿ.ಆರ್. ಸಿಂಧ್ಯಾ ಹೇಳಿದರು.
ಅವರು ಕೊಪ್ಪಳದ ಪದಕಿ ಲೇಔಟಿನ ಕುಂಚಕುಟೀರ ನಿವಾಸದಲ್ಲಿ ಶ್ರೀ ನಿಮಿಷಾಂಬ ಆರ್ಟ್ಗ್ಯಾಲರಿಯನ್ನು ಉದ್ಘಾಟಿಸಿ ಮಾತನಾಡಿದರು.
ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ, ಶ್ರೀನಿವಾಸ ಚಿತ್ರಗಾರ ಅವರು ಕ್ರಿಯಾಶೀಲ ಶಿಕ್ಷಕರು ಮತ್ತು ಮಕ್ಕಳ ಸಾಹಿತಿಯಾಗಿ ಶಿಕ್ಷಣ ಕ್ಷೇತ್ರಕ್ಕೆ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅವರು ನಂಪಾಪು, ನಮ್ಮಮ್ಮ, ಕಲಿತಮಗು-ಮನೆತುಂಬ ನಗು, ಹಿಂಗಾಗ್ಬಹುದಾ ಮುಂದೊoದಿವ್ಸ, ಭಲೇ ಭಾಸ್ಕರ, ಕರುನಾಡ ಸಿರಿ, ನೂರೆಂಟರ ಗಂಟು, ಹಿಂಗಾಗಿತ್ತು ನಮ್ಟೂರು, ಒಲವಿನ ಓಲೈಕೆಗಳು, ಹೀಗೆಂದ ಎಸ್ವೀಚಿ, ಅಕ್ಷರಕ್ಕೊಂದು ಚಿಣ್ಣರ ಹಾಡು, ಹಸನ್ಮುಖಿ, ಬಲೆಬೀಸಿದ ಭಾಸ್ಕರ, ನೂರೊಂದು ಆಯ್ದ ಕವನಗಳು ಹೀಗೆ ಮುಂತಾದ ಕೃತಿಗಳನ್ನು ಹೊರತಂದು ಕನ್ನಡಮ್ಮನ ಸೇವೆಗೈದಿದ್ದಾರೆ. ಇಂದು ಮಾಜಿ ಸಚಿವರಾದ ಪಿ.ಜಿ.ಆರ್. ಸಿಂಧ್ಯಾ ಅವರು ಶ್ರೀನಿವಾಸ ಚಿತ್ರಗಾರ ಅವರ ಶ್ರೀ ನಿಮಿಷಾಂಬ ಆರ್ಟ್ ಗ್ಯಾಲರಿಯನ್ನು ಉದ್ಘಾಟಿಸಿ ಅವರ ಪ್ರತಿಭೆಗೆ ಪ್ರೋತ್ಸಾಹವನ್ನು ನೀಡಿರುವುದು ನಮಗೆ ಸಂತಸವನ್ನುoಟು ಮಾಡಿದೆ ಎಂದರು.
ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ಕೊಪ್ಪಳ ಜಿಲ್ಲಾ ಅಧ್ಯಕ್ಷರಾದ ಶ್ರೀನಿವಾಸ ಚಿತ್ರಗಾರರವರು ಮಾತನಾಡುತ್ತಾ,ಕಿನ್ನಾಳ ಕಲೆಯು ಇಂದಿನ ಕಂಪ್ಯೂಟರ್ ಯುಗದಲ್ಲಿಯೂ ಕೂಡಾ ತನ್ನದೇ ಆದ ಛಾಪನ್ನು ಉಳಿಸಿಕೊಂಡು ಬಂದಿರುವುದು ಅದರ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಅಲ್ಲದೇ ಆ ಕಲೆಯ ಮೇಲೆ ಕಲಾವಿದರು ಇಟ್ಟಿರುವ ಪ್ರೀತಿ ಅಭಿಮಾನವನ್ನು ತೋರಿಸುತ್ತದೆ. ಈ ಕಲಾವಿದರು ಮಾಡಿರುವ ಕಲಾಕೃತಿಗಳು ದೇಶ ವಿದೇಶಗಳಲ್ಲಿ ಕೀರ್ತಿಯನ್ನು ಸೂಸಿದರೂ ಕಲಾವಿದರು ಮಾತ್ರ ಇಲ್ಲಿಯೇ ಹಿಂದುಳಿದಿದ್ದಾರೆ ಎಂದರು.
ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ನ ರಾಜ್ಯ ಸಂಘಟನಾ ಆಯುಕ್ತರಾದ ಮಲ್ಲೇಶ್ವರಿ ಜೂಜಾರೆ, ಕೊಪ್ಪಳ ಜಿಲ್ಲಾ ಆಂಮುಖ್ಯ ಆಯುಕ್ತರಾದ ಸಿದ್ಧರಾಮಸ್ವಾಮಿಗಳು, ಕೊಪ್ಪಳ ಜಿಲ್ಲಾ ಆಯುಕ್ತರಾದ ಮಲ್ಲಿಕಾರ್ಜುನ ಚೌಕಿಮಠ, ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾದ ಜಿ.ಎಸ್.ಗೋನಾಳ, ಕರ್ನಾಟಕ ಗಮಕ ಕಲಾ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಡಾ. ಫಕೀರಪ್ಪ ವಜ್ರಬಂಡಿ, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ನ ಮಾರುತಿ ಆರೇರ್, ಮಲ್ಲಪ್ಪ ಗುಡದಣ್ಣನವರ್, ಶಿಕ್ಷಕರಾದ ಸಂಗಪ್ಪ ಚಕ್ರಸಾಲಿ, ಈರಣ್ಣ ಬಡಿಗೇರ, ಅಶೋಕ ಕಂಚಗಾರ,ಅoದಪ್ಪ ಬೋಳರಡ್ಡಿ, ವಿದ್ಯಾವತಿ ಚಿತ್ರಗಾರ, ಶಶಿಕಲಾ ಮೋರಗೇರಿ, ವಿಜಯಲಕ್ಷ್ಮಿ ಬಸನಗೌಡರ,ಶಾರದಾ ಶ್ರಾವಣಸಿಂಗ್, ಪತ್ರಕರ್ತರಾದ ಶಿವಕುಮಾರ ಹಿರೇಮಠ, ಸಿದ್ಧು ಹಿರೇಮಠ ಮುಂತಾದವರು ವೇದಿಕೆ ಮೇಲೆ ಉಪಸ್ಥಿತರಿದ್ದರು.
ಭಾಸ್ಕರರಾವ್ ಚಿತ್ರಗಾರ ನಿರೂಪಿಸಿದರು. ಮೇಘರಾಜರಡ್ಡಿ ಗೋನಾಳ ಸ್ವಾಗತಿಸಿದರು. ಬಸವರಾಜ ರಡ್ಡಿ ಗೋನಾಳ ವಂದಿಸಿದರು.


Spread the love

About gcsteam

Check Also

ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಆಗ್ರಹಿಸಿ ಮೂಡಲಗಿಯಲ್ಲಿ ಪ್ರತಿಭಟನೆ

Spread the loveಮೂಡಲಗಿ: ಅರಭಾವಿ ಕ್ಷೇತ್ರದ ಶಾಸಕರು ಹಾಗೂ ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಉಪ್ಪಾರ ಸಮಾಜದ ಮೀಸಲಾತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page