ಶನಿವಾರ , ಡಿಸೆಂಬರ್ 21 2024
kn
Breaking News

ಕಾಯಕ, ಕರ್ತವ್ಯ ಮತ್ತು ಕೆಲಸದಲ್ಲಿ ಮನುಷ್ಯ ನಿಷ್ಠೆಯಿಂದ ಕಾರ್ಯ ನಿರ್ವಹಿಸಿದರೆ ಸುಖಮಯ ಜೀವನ ನಡೆಸಲು ಸಾಧ್ಯ : ಶ್ರೀ ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ

Spread the love

ಮೂಡಲಗಿ: ಕಾಯಕ, ಕರ್ತವ್ಯ ಮತ್ತು ಕೆಲಸದಲ್ಲಿ ಮನುಷ್ಯ ನಿಷ್ಠೆಯಿಂದ ಕಾರ್ಯ ನಿರ್ವಹಿಸಿದರೆ ಸುಖಮಯ ಜೀವನ ನಡೆಸಲು ಸಾಧ್ಯ, ಝಂಡೆಕುರಬರ ಸಮಾಜದವರು ಧರ್ಮ ಮತ್ತು ಒಳ್ಳೇಯ ಕಾರ್ಯ ಮಾಡುತ್ತಿರುವದರಿಂದ ಯಾರಿಗೂ ಕೊರೋನಾ ಬಂದಿಲ್ಲ, ಎಲ್ಲರೂ ವೆಂಕಟೇಶ್ವರರ ನಾಮಸ್ಮರಣೆಯಿಂದ ಸುಖಮಯ ಜೀವನ ಸಾಗಿಸುತ್ತಿರುವುದು ಸಂತೋಷದ ಸಂಗತಿ ಎಂದು ಮುಕ್ತಿ ಮಠದ ಶ್ರೀ ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.
ಪಟ್ಟಣದ ಶ್ರೀ ವೆಂಕಟೇಶ್ವರ ನಗರದಲ್ಲಿ ವೆಂಕಟೇಶ್ವರ ದೇವಸ್ಥಾನದ ಜಾತ್ರಾಮಹೋತ್ಸವ ಕಾರ್ಯಕ್ರಮದ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ ಅವರು, ಇಂದು ಗರಡಿ ಮತ್ತು ತಾಲಿಮು ಮನೆಗಳು ಮಾಯವಾಗಿ ದಾಬಾಗಳು ಹುಟ್ಟಿಕೊಂಡಿದರಿoದ ಸಂಸ್ಕಾರದಿoದ ದೂರ ಸಾಗುತ್ತಿದೆವೆ, ಭಾರತ ದೇಶ ಸನಾತ ಧರ್ಮ ನಮ್ಮ ಧರ್ಮ ಪಾಪ ಪುಣ್ಯ ನ್ಯಾಯ, ಸತ್ಯ ಕಲಿಸುತ್ತದೆ. ಒಳ್ಳೇಯ ಮಾರ್ಗದಲ್ಲಿ ನಡೆದರೆ ಮನುಷ್ಯತ್ವಕ್ಕು ಬಹಳ ಬೆಲೆ ಇದೆ ಆದರಿಂದ ಒಳ್ಳೆಯ ನಡೆ ನುಡಿಯಿಂದ ನಡೆಯಬೇಕು. ಇಂದು ಸಂಸ್ಕಾರಗಳು ಮರೆಯಾಗುತ್ತಿವದಕ್ಕೆ ಜಾಗೃತಕೋಳ್ಳಬೇಕಾಗಿದೆ, ಮಹಿಳೆಯರು ಸಂಸ್ಕಾರವoತರಾಗಿ ಜೀವನ ಸಾಗಿಸಬೇಕು ಎಂದರು.
ಶರಣರು, ಮಹಾತ್ಮರು ದೇಶಕ್ಕೆ ಕಾಯಕವನ್ನು ತಂದು ಕೊಟ್ಟಿದಾರೆ, ಕಾಯಕ ಮಾಡಿದ ದುಡ್ಡಿನಲ್ಲಿ ಮತ್ತೋಬರಿಗೆ ಸಹಾಯ ಸಹಕಾರ ಮಾಡುವದರಿಂದ ಕಾಯಕ ಮಾತ್ರ ಶಾಸ್ವತವಾಗಿರುತ್ತದೆ ಎಂದರು.
ಮೂಡಲಗಿ ಸಿದ್ಧ ಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ದತ್ತಾತ್ರೇಯಬೋಧ ಸ್ವಾಮೀಜಿ ಮಾತನಾಡಿ, ಭಕ್ತಿಯಿಂದ ಉದ್ಯೋಗ, ಕರ್ಮವನ್ನು ಮಾಡಿದರೆ ಭಗವಂತ ಆಶಿರ್ವಾದ ಮಾಡುತ್ತಾನೆ, ಕೆಲಸದಲ್ಲಿ ತೋಡಗಿದರೆ ಒಳ್ಳೆಯ ಆರೋಗ್ಯವಂತರಾಗಿ ಇರಲ್ಲು ಸಾಧ್ಯ ಮತ್ತು ಸಮಾಜದಲ್ಲಿ ಒಳ್ಳೆಯ ಹೆಸರುಗಳಿಸಬಹುದು ಎಂದರು.
ಸಮಾರಂಭವನ್ನು ಉದ್ಘಾಟಿಸಿದ ಗೋಕಾಕ ಲಕ್ಷಿö್ಮÃ ಶಿಕ್ಷಣ ಸಂಸ್ಥೆಯ ನಿರ್ದೇಶಕ ಸರ್ವೋತ್ತಮ ಜಾರಕಿಹೊಳಿ ಸಂಘಟಕರಿoದ ಸತ್ಕಾರ ಸ್ವೀಕರಿಸಿ ಮಾತನಾಡಿ, ಯುವಕರು ದುಶ್ಚಟದಿಂದ ಇದ್ದು ಭಕ್ತಿಯಶ್ಚಟ ಮಾಡಿ, ಭಕ್ತಿ ಹಾಗೂ ದೇವರ ಕಾರ್ಯದಲ್ಲಿ ಎಷ್ಟು ತಮ್ಮನ್ನು ತಾವು ತೊಡಗಿಸಿಕೊಳ್ಳುವದರಿಂದ ದುಶ್ಚಟದಿಂದ ದೂರ ಇರಲ್ಲು ಸಾಧ್ಯವಾಗುತ್ತದೆ, ಭಕ್ತಿ ಮತ್ತು ಸಾಮಾಜಿಕ ಕಾರ್ಯ ಮಾಡಬೇಕು ತಾವು ಸದಾ ಕಾಲ ತಮ್ಮೊಂದಿಗೆ ಇರುವದಾಗಿ ಹೇಳಿದರು.
ಖಾನಟ್ಟಿ ಶಿವಲಿಂಗೇಶ್ವರ ಮಠದ ಶ್ರೀ ಶಿವಾನಂದ ಶ್ರೀಗಳು ಮತ್ತು ಮೂಡಲಗಿ ಪಿಎಸ್‌ಐ ಹಾಲಪ್ಪ ಬಾಲದಂಡಿ ಮಾತನಾಡಿದರು.
ಸಮಾರಂಭದ ವೇದಿಕೆಯಲ್ಲಿದ ಶ್ರೀಗಳನ್ನು ಮತ್ತು ಕಹಾಮಾ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ, ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ, ಜಾತ್ರಾಮಹೋತ್ಸವದ ಅನ್ನ ದಾನಿ ಹಾಗೂ ಪುರಸಭೆ ಸದಸ್ಯ ಸಂತೋಷ ಸೋನವಾಲಕರ, ವೆಂಕಟೇಶ ಸೋನವಾಲ್ಕರ, ಸುಪ್ರೀತ ಸೋನವಾಲ್ಕರ, ಪಿಎಸ್‌ಐ ಎಚ್.ವಾಯ್.ಬಾಲದಂಡಿ, ಮಲ್ಲವ್ವ ಝಂಡೇಕುರಬರ, ಮರೆಪ್ಪ ಮರೆಪ್ಪಗೋಳ, ರಮೇಶ ಸಣ್ಣಕ್ಕಿ, ಶಾಬು ಸಣ್ಣಕ್ಕಿ, ವೈಭವ ಶೆಟ್ಟಿ, ರಾಮು ಪೂಜೇರಿ, ಗುಂಡು ಹರೇಕೃಷ್ಣ, ಬಸವರಾಜ ಕಿಚ್ಚಡಿ, ಬಾಳಪ್ಪ ಝಂಡೇಕುರಬರ ಅವರನ್ನು ಸಂಘಟಕರು ಸತ್ಕರಿಸಿ ಗೌರವಿಸಿದರು.
ಸಮಾರಂಭದಲ್ಲಿ ರಾಮು ಝಂಡೇಕುರಬರ, ಬಸು ಝಂqಡೇಕುರಬರ, ದಾದು ಝಂಡೇಕುರಬರ, ಸುಭಾಸ ಝಂಡೇಕುರಬರ, ಲಕ್ಷö್ಮಣ ಝಂಡೇಕುರಬರ, ರಾಜು ಝಂಡೆಕುರಬರ, ವೆಂಕಟೇಶ ಝಂಡೆಕುರಬರ ಮತ್ತಿತರು ಇದ್ದರು. ಜಾತ್ರಾಮಹೋತ್ಸವದ ನಿಮಿತ್ಯ ಶ್ರೀ ವೆಂಕಟೇಶ್ವರ ಮೂರ್ತಿಗೆ ಅಭಿಷೇಕ ಮತ್ತು ಪೂಜೆ ಜರುಗಿತು. ಶ್ರೀಗಳನ್ನು ಮತ್ತು ಅತಿಥಿಗಳನ್ನು ಪಟ್ಟಣದ ಮುಖ್ಯ ರಸ್ತೆಯಿಂದ ದೇವಸ್ಥಾನದವರಿಗೆ ಮಹಿಳೆಯ ಆರತಿ, ಕುಂಭಮೇಳ ಹಾಗೂ ವಾದ್ಯಮೇಳದೊಂದಿಗೆ ಬರಮಾಡಿಕೊಂಡರು. ಸಿದ್ಧಣ್ಣ ದುರದುಂಡಿ ಸ್ವಾಗತಿಸಿ ನಿರೂಪಿಸಿ ವಂದಿಸಿದರು.


Spread the love

About gcsteam

Check Also

ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಆಗ್ರಹಿಸಿ ಮೂಡಲಗಿಯಲ್ಲಿ ಪ್ರತಿಭಟನೆ

Spread the loveಮೂಡಲಗಿ: ಅರಭಾವಿ ಕ್ಷೇತ್ರದ ಶಾಸಕರು ಹಾಗೂ ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಉಪ್ಪಾರ ಸಮಾಜದ ಮೀಸಲಾತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page