ಮೂಡಲಗಿ : ‘ಪರಿಸರರವನ್ನು ಎಷ್ಟು ಸ್ವಚ್ಚವಾಗಿ ಇಟ್ಟು ಕೊಳ್ಳುತ್ತವೇ ಅಷ್ಟು ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಕಸ ಕಡ್ಡಿ ಚರಂಡಿ ನೀರು, ನಮ್ಮ ಮುತ್ತಲಿನ ವಾತಾರವರಣ ಮಲೀನವಾದಷ್ಟು ನಾವು ರೋಗದ ಗುಡಾಗುತ್ತವೆ ಎಂದು ಮುಸಗುಪ್ಪಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಂಪನ್ಮೂಲ ವ್ಯಕ್ತಿ ಆರೋಗ್ಯ ನಿರೀಕ್ಷಣಾಧಿಕಾರಿ ರಾಮಚಂದ್ರ ಸಣ್ಣಕ್ಕಿ ಹೇಳಿದರು,
ತಾಲೂಕಿನ ಮುಸಗುಪ್ಪಿ ಪ್ರಾಥಮಿಕ ಆರೋಗ್ಯ ಕೇಂದ್ರದಿoದ ಇಂದು ಗುರುವಾರ ಆಯೋಜಿಸಿದ ಮಲೇರಿಯಾ ವಿರೋದಿ ಮಾಸಾಚರಣೆ ನಿಮಿತ್ಯ ದರ್ಮಟ್ಟಿ ಗ್ರಾಮದಲ್ಲಿ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು,
ವಿಧ್ಯಾರ್ಥಿಗಳು ಸಾಮಾಜಿಕ ಪರಿಸರದ ಕಾಳಜಿ ವಹಿಸಿ ಮನೆಯ ಸುತ್ತಮುತ್ತ ಪರಿಸರವನ್ನು ಸ್ವಚ್ಚ ಹಾಗೂ ಸುಂದರವಾಗಿ ಇಟ್ಟುಕೊಳ್ಳಲು ಪಾಲಕರಿಗೆ ಹಾಗೂ ತಮ್ಮ ಮನೆಯ ಹತ್ತಿರ ಇರುವ ಸಾರ್ವಜನಿಕರಿಗೆ ತಿಳುವಳಿಕೆ ನೀಡಬೇಕು ಎಂದರು.
ಧರ್ಮಟ್ಟಿ ವಿಧ್ಯಾಲಯದ ಸಂಘ ಕಾಲೇಜು ಪ್ರಾಚಾರ್ಯ ಎಸ್ ಎಸ್ ಚಿಪ್ಪಲಕಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎನ್ ಕುಂಬಾರ, ಟಿ ಹನಕುಪ್ಪಿ, ಆಶಾ ಅಂಗನವಾಡಿ ಕಾರ್ಯಕರ್ತರೆಯರು ಇದ್ದರು,
ಆರೋಗ್ಯ ನಿರೀಕ್ಷಣಾಧಿಕಾರಿ ಡಿ ಕೆ ಪತ್ತಾರ ಸ್ವಾಗತಿಸಿದರು, ಸಿದ್ದಾರ್ಥ ಹೊಸಮನಿ ವಂದಿಸಿದರು.
Sarvavani Latest Kannada News