ಮೂಡಲಗಿ : ಮೇ ೧೬ರಂದು ಕಲಿಕಾ ಚೇತರಿಕೆಗೋಸ್ಕರ ಶೈಕ್ಷಣಿಕ ವರ್ಷ ಆರಂಭದಲ್ಲಿ ವಿದ್ಯಾರ್ಥಿಗಳನ್ನು ವಿನೂತನವಾಗಿ ಸ್ವಾಗತಿಸುವ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಮೂಡಲಗಿ ವಲಯದ ಎಲ್ಲ ಶಾಲೆಗಳು, ಶಿಕ್ಷಕರು ಸಿದ್ಧಗೊಂಡಿದ್ದಾರೆ. ತುಕ್ಕಾನಟ್ಟಿ ಶಾಲಾ ಶಿಕ್ಷಕರು ಪಾಲಕರಿಗೆ ಮಮತೆಯ ಕರೆಯೋಲೆಯೊಂದಿಗೆ ಅಂಚೆ ಪತ್ರ ಬರೆಯುವ ಮೂಲಕ ತಮ್ಮ ಮಕ್ಕಳ ದಾಖಲಾತಿ ಮಾಡುವಂತೆ ಮನವಿ ಮಾಡಿಕೊಂಡಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಬಿಜಿಒ ಅಜೀತ ಮನ್ನಿಕೇರಿ ಹೇಳಿದರು.
ಪಟ್ಟಣದ ಬಿಇಒ ಕಾರ್ಯಲಯದಲ್ಲಿ ತಾಲೂಕಿನ ತುಕ್ಕಾನಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಪಾಲಕರಿಗೆ ಶಾಲಾ ಪ್ರಾರಂಭೋತ್ಸವದ ನಿಮಿತ್ಯವಾಗಿ ಮಮತೆಯ ಕರೆಯೋಲೆ ಹಾಗೂ ಅಂಚೆ ಪತ್ರಗಳನ್ನು ಬಿಡುಗೆಗೊಳಿಸಿ ಮಾತನಾಡಿದ ಅವರು, ಸೋಮವಾರದಂದು ಶಾಲೆಗಳನ್ನು ತಳಿರು ತೋರಣಗಳಿಂದ ಅಲಂಕರಿಸಿ, ಮಕ್ಕಳಿಗೆ ಸಿಹಿ ನೀಡಿ ಮುಂದಿನ ತರಗತಿಗೆ ಸ್ವಾಗತಿಸಲು ಶಿಕ್ಷಕರು ಸಜ್ಜಾಗಿದ್ದಾರೆ. ಮೇ ೧೬ರಂದು ಮೂಡಲಗಿ ವಲಯದ ೨೩೬ ಪ್ರಾಥಮಿ ಶಾಲೆಗಳಲ್ಲಿ ಅಕ್ಷರ ಬಂಡೆ ಹಾಗೂ ದಾಖಲಾತಿ ಆಂದೋಲನ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ ಎಂದರು.
ನಮ್ಮ ನಡೆ ಅಂಗನವಾಡಿ ಕಡೆ ಎಂಬ ಯೋಜನೆಯಡಿ ಸರ್ಕಾರಿ ಶಾಲೆಯ ಶಿಕ್ಷಕರು ತಮ್ಮ ಸಮೀಪದ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ, ಒಂದನೇ ತರಗತಿಗೆ ಅರ್ಹ ಮಕ್ಕಳ ಪಟ್ಟಿ ಪಡೆದು ಮಕ್ಕಳ ಪಾಲಕರ ಮನೆ ಭೇಟಿ ಮಾಡಿ ಒಂದನೇ ತರಗತಿಗೆ ದಾಖಲಾತಿ ಮಾಡಿಕೊಳ್ಳಲು ಈಗಾಗಲೇ ಎಲ್ಲ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸೂಚಿಸಲಾಗಿದ್ದು, ವಲಯದ ಪ್ರಾಥಮೀಕ ಶಾಲಾ ಶಿಕ್ಷಕರು ಗ್ರಾಮೀಣ ಭಾಗದ ವೇಷದಾರಿ ಮೂಲಕ ಎತ್ತಿನ ಬಂಡಿದೆ ತಳಿರು ತೋರಣಗಳಿಂದ ಅಲಂಕರಿಸಿ, ಮಕ್ಕಳ ಮನೆಗಳಿಗೆ ತೆರಳಿ ಮಕ್ಕಳನ್ನು ಬಂಡಿಯಲ್ಲಿ ಶಾಲೆಗಳತ್ತ ಬರಮಾಡಿಕೊಳ್ಳಲಾಗವುದು ಎಂದು ತಿಳಿಸಿದರು.
ತುಕ್ಕಾನಟ್ಟಿಯ ಪ್ರಮುಖ ಶಿಕ್ಷಕ ಎ ವಿ ಗಿರೆಣ್ಣವರ ಮಾತನಾಡಿ, ಈಗಾಗಲೇ ನಮ್ಮ ಶಾಲೆಯಲ್ಲಿ ೬೦ ವಿದ್ಯಾರ್ಥಿಗಳು ಒಂದನೇ ತರಗತಿಗೆ ದಾಖಲಾತಿಯಾಗಿದ್ದು, ನಮ್ಮ ಶಾಲೆಯ ಶಿಕ್ಷಕರು ಶಾಲಾ ರಜೆ ಎನ್ನದೆ ಮಕ್ಕಳ ಮನೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ದಾಖಲಾತಿ ಮಾಡಿಕೊಳ್ಳಲಾಗಿದೆ. ಮೇ ೧೬ರಂದು ಇಡೀ ಶಾಲೆಯನ್ನು ಮದುವೆ ಮನೆಯಂತೆ ಅಲಂಕರಿಸಿ ಮಕ್ಕಳಿಗೆ ಹಾಗೂ ಪಾಲಕರಿಗೆ ವಿಷೇಶ ಭೂಜನದ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಬಿಇಒ ಕಚೇರಿಯ ಪಂತ್ರಾಂಕಿತ ವ್ಯವಸ್ಥಾಪಕ ಪಾಂಡುರಂಗ ಒಂಟಿ,ವಡೇರಹಟ್ಟಿ ಸಿಆರ್‌ಪಿ ಆನಂದ ಹಮ್ಮನ್ನವರ, ಪರಿಸರ ಪ್ರೇಮಿ ಈರಪ್ಪ ಢವಳೇಶ್ವರ ಇದ್ದರು.
Check Also
ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಆಗ್ರಹಿಸಿ ಮೂಡಲಗಿಯಲ್ಲಿ ಪ್ರತಿಭಟನೆ
Spread the loveಮೂಡಲಗಿ: ಅರಭಾವಿ ಕ್ಷೇತ್ರದ ಶಾಸಕರು ಹಾಗೂ ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಉಪ್ಪಾರ ಸಮಾಜದ ಮೀಸಲಾತಿ …