ಮೂಡಲಗಿ : ಇಲ್ಲಿಯ ಶ್ರೀ ಬಸವೇಶ್ವರ ಕೋ.ಆಪ್ ಕ್ರೆಡಿಟ್
ಸೊಸೈಟಿಯು 2022ರ ಮಾರ್ಚ ಅಂತ್ಯಕ್ಕೆ ರೂ.4.13.83.527
ರೂ
ಲಾಭವನ್ನು ಗಳಿಸಿ ಪ್ರಗತಿಯಲ್ಲಿ ಸಾಗಿದೆ ಎಂದು ಸೊಸೈಟಿಯ
ಅಧ್ಯಕ್ಷ ಬಸವರಾಜ ತೇಲಿ ತಿಳಿಸಿದರು.
ಶುಕ್ರವಾರ ಸೊಸೈಟಿಯ ಪ್ರಗತಿ ಕುರಿತು ಕರೆದಿದ್ದ ಪತ್ರಿಕಾ
ಗೋಷ್ಠಿಯಲ್ಲಿ ಮಾತನಾಡಿದರು.
ಸೊಸೈಟಿಯು ಸದ್ಯ ರೂ. 5.07 ಕೋಟಿ ಶೇರು ಬಂಡವಾಳ, ರೂ.
13.90 ಕೋಟಿ ನಿಧಿಗಳು, ರೂ. 154.22 ರೇವುಗಳು, ರೂ.
49.55 ಕೋಟಿ ವಿವಿಧ ಬ್ಯಾಂಕ್‌ಗಳಲ್ಲಿ ಗುಂತಾವಣೆಗಳು. ರೂ.
181.83 ಕೋಟಿ ದುಡಿಯುವ ಬಂಡವಾಳವನ್ನು ಹೊಂದಿದ್ದು,
2022ರ ಮಾರ್ಚ ಅಂತ್ಯಕ್ಕೆ ರೂ.4.13.83.527 ರೂ ಲಾಭ
ಗಳಿಸಿದೆ ಎಂದರು.
1
ಸಂಘದ ಉಪಾಧ್ಯಕ್ಷಗಿರೀಶ ಡವಳೇಶ್ವರ ಮಾತನಾಡಿ.ಸದ್ಯ
ವಾಹನ ಸಾಲ.ಎಚ್ ಪಿ ಲೋನ ಮತ್ತು ಸಿ ಸಿ ಲೋನಗಳಿಗೆ
ಪ್ರಸ್ತತ ಸಾಲಿನಿಂದ ಶೇ 1 ಬಡ್ಡಿದರ ಕಡಿಮೆ ಮಾಡಲಾಗಿದೆ
ಪ್ರಧಾನ ಕಛೇರಿ ಹಾಗೂ 15 ಶಾಖೆಗಳು ಪ್ರಗತಿಯಲ್ಲಿದ್ದು ಮತ್ತೆ
ಐದು ಶಾಖೆಗಳು ಆರಂಬಿಸುವ ಉದ್ದೇಶ ಹೊಂದಿದ್ದೇವೆ.25ನೇ
ವರ್ಷದ ಬೆಳ್ಳಿ ಹಬ್ಬ ಎರಡು ವರ್ಷದ ಹಿಂದೆ ಮಾಡಬೇಕಾಗಿತ್ತು
ಕರೋನಾ ಮಹಾ ಮಾರಿಯ ಸಮಯದಲ್ಲಿ ಸಾಧ್ಯವಾಗಲಿಲ್ಲ
ಸಧ್ಯದಲ್ಲಿ ಬೆಳ್ಳಿ ಹಬ್ಬವನ್ನು ಸರ್ಕಾರದ ಮಾರ್ಗಸೂಚಿ ಅನ್ವಯ
ಅದ್ದೂರಿಯಾಗಿ ಮಾಡಬೇಕು ಎಂದು ಇಚ್ಚೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸೊಸೈಟಿಯ ಆಡಳಿತ ಮಂಡಳಿಯ
ಸದಸ್ಯರಾದ ಚನ್ನಬಸು ಭೀ.ಬಡ್ಡಿ.ಶ್ರೀಕಾಂತಶಿ ಹೀರೆಮಠ.
ರವೀಂದ್ರ
ಈ ಬಾಗೋಜಿ.ಶ್ರೀಶೈಲ ಯ. ಮದಗಣ್ಣವರ, ಮಲ್ಲಿಕಾರ್ಜುನ
ಭೀ.ಡವಳೇಶ್ವರ ಹಾಗೂ ಪ್ರಧಾನ ವ್ಯವಸ್ಥಾಪಕ ಬಸವರಾಜ ಸೋ ಬಡಿಗೇರ ಇದ್ದರು
Sarvavani Latest Kannada News