ಘಟಪ್ರಭಾ: ಕೇಂದ್ರ ಸರ್ಕಾರ ನೂತನ ಕೃಷಿ ಕಾಯ್ದೆ ಜಾರಿಗೆ ತಂದಿದ್ದು ರೈತರು ಭಯ ಪಡುವ ಅಗತ್ಯವಿಲ್ಲ, ಕಾಯ್ದೆಯಿಂದ ರೈತರಿಗೆ ಅನುಕೂಲವಾಗಲಿದೆ ಎಂದು ರಾಜ್ಯಸಭಾ ಸದಸ್ಯ ಹಾಗೂ ರೈತ ಮೋರ್ಚಾ ಅಧ್ಯಕ್ಷರಾದ ಈರಣ್ಣ ಕಡಾಡಿ ಕೇಂದ್ರ ಸರ್ಕಾರದ ಕ್ರಮವನ್ನ ಶ್ಲಾಘೀಸಿದ್ದಾರೆ.
ಅರಭಾವಿ ಪಟ್ಟಣದಲ್ಲಿ ಶನಿವಾರ ಡಿ. 26 ರಂದು ಹನುಮಂತ ದೇವರ ದರ್ಶನ ಪಡೆದು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸದಸ್ಯರು ನೀಡಿರುವ ಸತ್ಕಾರ ಸ್ವೀಕರಿಸಿ ಮಾತನಾಡಿ ಅವರು ರೈತರು ಆರ್ಥಿಕವಾಗಿ ಸದೃಢವಾಗುವ ದೃಷ್ಠಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರು ಕೃಷಿಗೆ ಹೆಚ್ಚು ಮಹತ್ವ ನೀಡುತ್ತಿದ್ದಾರೆ. ವಿರೋಧ ಪಕ್ಷಗಳು ಕೃಷಿ ಮಸೂದೆಗಳನ್ನು ವಿರೋಧಿಸುತ್ತಿದ್ದಾರೆ. ರೈತರು ಗೊಂದಲಕ್ಕೆ ಬೀಳಬಾರದೆಂದು ಕಿವಿಮಾತು ಹೇಳಿದರು.
ಜನಪರ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರಕಾರವು ಕೃಷಿಯಲ್ಲಿ ಉತ್ಪಾದನಾ ವೆಚ್ಚ ಕಡಿಮೆ ಮಾಡಿದೆ. ಮಣ್ಣಿನ ಆರೋಗ್ಯ ಕಾರ್ಡ್, ಕೋಟ್ಯಂತರ ರೈತರಿಗೆ ಫಸಲ್ ಬಿಮಾ ಯೋಜನೆ ಮೂಲಕ ನೆರವು, ಯೂರಿಯಾಗೆ ಬೇವು ಲೇಪನನಂಥ ಮಹತ್ವದ ಯೋಜನೆಗಳನ್ನು ಜಾರಿಗೊಳಿಸಿರುವುದು ಇದಕ್ಕೆ ಉದಾಹರಣೆ ಎಂದರು.
ಜಿಲ್ಲಾ ಬಿಜೆಪಿ ಓಬಿಸಿ ಮೋರ್ಚಾ ಅಧ್ಯಕ್ಷ ಬಸವರಾಜ ಮಾಳೇದ, ಜಿ.ಪಂ ಮಾಜಿ ಸದಸ್ಯ ಶಂಕರ ಬಿಲಕುಂದಿ, ತಾ.ಪಂ ಮಾಜಿ ಸದಸ್ಯ ಸುನೀಲ ಜಮಖಂಡಿ, ಮುತ್ತೆಪ್ಪ ಝಲ್ಲಿ, ದುಂಡಪ್ಪ ನಿಂಗಣ್ಣವರ, ಅಡಿವೆಪ್ಪಾ ಬಿಲಕುಂದಿ, ಭೀಮಶಿ ಬಂಗಾರಿ, ಮಂಜುನಾಥ ಝಲ್ಲಿ, ಅಶೋಕ ಚಿಕ್ಕೋಡಿ, ಮಲ್ಲಪ್ಪ ಇಂಗಳಿ, ನಾರಾಯಣ ಜಡಕಿನ, ಭೀಮಪ್ಪ ತಳವಾರ, ಕೆಂಚಪ್ಪ ಮಂಟೂರ, ನಿಂಗಪ್ಪ ಗುಜನಟ್ಟಿ, ಅಲ್ಲಪ್ಪ ಗಣೇಶವಾಡಿ, ಬಸವರಾಜ ಬಂಗಾರಿ, ಹುಚ್ಚಪ್ಪ ಹಳ್ಳೂರ ಸೇರಿದಂತೆ ಬಿಜೆಪಿ ಕಾರ್ಯಕರ್ತರು ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಉಪಸ್ಥಿತರಿದ್ದರು.
Check Also
ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಆಗ್ರಹಿಸಿ ಮೂಡಲಗಿಯಲ್ಲಿ ಪ್ರತಿಭಟನೆ
Spread the loveಮೂಡಲಗಿ: ಅರಭಾವಿ ಕ್ಷೇತ್ರದ ಶಾಸಕರು ಹಾಗೂ ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಉಪ್ಪಾರ ಸಮಾಜದ ಮೀಸಲಾತಿ …