ಗುರುವಾರ , ನವೆಂಬರ್ 21 2024
kn
Breaking News

ಪತ್ರಕರ್ತ, ದಾನಿ ಯಮನಪ್ಪ ಸುಲ್ತಾನಪುಾರ ವಿಧಿವಶ

Spread the love

ಮೂಡಲಗಿ : ಮೂಡಲಗಿಯ ಹಿರಿಯ ಪತ್ರಕರ್ತ -ದಾನಿ ಯಮನಪ್ಪ ಸುಲ್ತಾನಪೂರ (೬೨) ವಿಧಿವಶರಾಗಿದ್ದಾರೆ. ಪತ್ರಕರ್ತ ಅಷ್ಟೇ ಅಲ್ಲದೆ ಸಾಹಿತ್ಯ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿ ಅನೇಕ ಯುವ ಪತ್ರಕರ್ತರನ್ನು ಬೆಳೆಸಿದ್ದ ಯಮನಪ್ಪ ಯಲ್ಲಪ್ಪ ಸುಲ್ತಾನಪುರ ಅನಾರೋಗ್ಯದಿಂದ ಅನೇಕ ದಿನಗಳಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಇತ್ತೀಚೆಗಷ್ಟೇ ಅವರಿಗೆ ಸರಕಾರ ನೀಡುವ ಪತ್ರಕರ್ತರ ಪಿಂಚಣಿ ಕೂಡ ಮಂಜೂರಾಗಿತ್ತು.

ಅವರ ಪರಿಚಯ 

‘ ತನ್ನಂತೆ ಪರರು ‘ ಎಂಬಂತೆ  ಯಮನಪ್ಪ ಸುಲ್ತಾನಪೂರ ಅವರು ಕೂಡ ಓರ್ವರಾಗಿದ್ದರು. ಸುಲ್ತಾನಪೂರರು ಸಾಮಾನ್ಯ ಕುಟುಂಬದ ತಂದೆ ಯಲ್ಲಪ್ಪ ತಾಯಿ ರುಕ್ಕವ್ವರ ಪುಣ್ಯಗರ್ಭಗಿಂದ ದಿ. 22-7 1956 ರಂದು ಜನ್ಮತಾಳಿದರು . 1972-73ರ ಸಾಲಿನಲ್ಲಿ ಯ.ಯ.ಸು. ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತೀರ್ಣ ಹೊಂದಿದ್ದರು. ಯ.ಯ.ಸು. ತಮ್ಮ ಪ್ರೌಢ ವಿದ್ಯಾಭ್ಯಾಸದ ಹಂತದಲ್ಲಿಯೇ ಅವರು ಪತ್ರಿಕೆಗಳೊಂದಿಗೆ ಸಂಬಂಧವನ್ನಿರಿಸಿಕೊಂಡಿದ್ದರು. ಹೀಗಾಗಿ ಪತ್ರಿಕೆಗಳಲ್ಲಿದ್ದ ಪ್ರಶೋತ್ತರ ವಿಭಾಗದಲ್ಲಿ ರಾಜಕೀಯ, ಸಾಮಾಜಿಕವಾಗಿ ಪತ್ರಗಳ ಮುಖಾಂತರ ಪ್ರಶ್ನೆ ಕೇಳಿ, ಪತ್ರಿಕೆಗಳಿಂದ ಮುದ್ರಣದ ಮೂಲಕ ಉತ್ತರಗಳನ್ನು ಪಡೆಯುತ್ತಿದ್ದರು. ಸಾಮಾಜಿಕ, ರಾಜಕೀಯ ಕುರಿತು ದೂರ-ದುಮ್ಮಾನ ಅಂಚೆ ಪೆಟ್ಟಿಗೆ ಮುಂತಾದ ಅಂಕಣಗಳಲ್ಲಿ ಪತ್ರಿಕೆಗಳಲ್ಲಿ ಯ.ಯ.ಸು. ಬರೆಯುತ್ತಿದ್ದರು.

ಪತ್ರಿಕೆಗಳೊಂದಿಗಿನ ಒಡನಾಟವು ಯ.ಯ.ಸು. ಅವರಲ್ಲಿ ಹೆಚ್ಚುತ್ತಲೇ ಬಂದಿತು. ಪತ್ರಕರ್ತರ ನೋವು-ನಲಿವು, ಕಷ್ಟ-ನಷ್ಟಗಳನ್ನು ಯ.ಯ.ಸು. ಅರಿತುಕೊಂಡರು. ಜೀವನ ನಿರ್ವಹಣೆಗಾಗಿ. ವರ್ಷಗಳವರೆಗೆ ಕಿರಾಣಿ ಅಂಗಡಿ ನಡೆಸಿದರು. 1986 ರಿಂದ 2003 ರ ವರೆಗೆ ಸ್ಟಾಂಪ್‌ವೆಂಡರ್‌ರಾಗಿಯೂ, 2005 ರಿಂದ ಇಂದಿನವರೆಗೆ ಬಾಂಡರೈಟರ್‌ರಾಗಿ ವೃತ್ತಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ‘ ಮೂಡಲವಾರ್ತೆ , ಯಮವಾರ್ತೆ , ಯಮಕಿಂಕರ,ಉಪವೀರ ಸಾಮ್ರಾಜ್ಯ, ಯಮಪಾಶ ಮುಂತಾದ ಪತ್ರಿಕೆಗಳ ಸಂಸ್ಥಾಪಕ-ಸಂಪಾದಕರಾಗಿ ಯ.ಯ.ಸುಲ್ತಾನಪೂರರು ಪತ್ರಿಕಾ ಕ್ಷೇತ್ರಕ್ಕೆ ಸೇವೆ ಸಲ್ಲಿಸಿದರು. ಸಹಪಾಠಿ ಸಹೋದರರಿಗೂ ತಾವು ಪಡೆದುಕೊಂಡಿದ್ದ ಪತ್ರಿಕೆಗಳನ್ನು ನೀಡುವ ಮುಖಾಂತರ ಪತ್ರಿಕಾ  ಕ್ಷೇತ್ರದ ಸೇವೆಗೆ ಹುರಿದುಂಬಿಸಿದರು.

1983 ರಿಂದ ಇಂದಿನವರೆಗೂ ಯ.ಯ ಸುಲ್ತಾನಪೂರರು ನಾಡಿನ ಹಲವಾರು ಪತ್ರಿಕೆಗಳ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ.

ಕವಿ ಹೃದಯದ ಯ.ಯ.ಸು. ಓರ್ವ ಪ್ರಾಮಾಣಿಕ ವ್ಯಕ್ತಿಗಳಾಗಿದ್ದಾರೆ. ಅವರು ಯುವ ಪತ್ರಕರ್ತರಿಗೆ ಮಾರ್ಗದರ್ಶಕರಾಗಿದ್ದಾರೆ. ಪತ್ರಕರ್ತರ ನೋವು ನಲಿವು,ಕಷ್ಟ – ನಷ್ಟಗಳನ್ನು ಅರಿತಿರುವ ಯ.ಯ. ಸುಲ್ತಾನಪೂರ ಅವರು ಪತ್ರಕರ್ತ, ಕಲಾವಿದ, ಸಾಹಿತಿ – ಕವಿಗಳ ನಿರಂತರ ಕನ್ನಡದ ಸೇವೆಗಾಗಿ, ಅವರು ನಿರಂತರ ಸಂಘಟಿಸಿ ನಾಡಿನ ಅಭಿವೃದ್ಧಿಗಾಗಿ ಶ್ರಮಿಸಲು ಚಿಂತನೆಗೈದವರು. ಹೀಗಾಗಿ ಅವರು ‘ಕರ್ನಾಟಕ ಜನಸೇವಾ ಪತ್ರಕರ್ತರ ಸಂಘ ‘ ಮೂಡಲಗಿ ಅವರಿಗೆ ಲಕ್ಷಾಂತರ ರೂಪಾಯಿ ಬೆಲೆಬಾಳುವ ತಮ್ಮ ಒಂದು ನಿವೇಶನವನ್ನು ಕಟ್ಟಡಕ್ಕಾಗಿ ಇತ್ತೀಚಿಗೆ ದಾಸೋಹದ ದಾನವನ್ನಾಗಿ ಅರ್ಪಿಸಿದ್ದಾರೆ. ವೃತ್ತಿನಿರತ ಪತ್ರಕರ್ತರಾದ ಯ.ಯ.ಸು ಅವರು ಪತ್ರಕರ್ತರ, ನಾಡು-ನುಡಿಗಳ, ಚಿಂತಕ-ರಕ್ಷಕ, ಸಂರಕ್ಷರಾಗಿದ್ದರು ಎಂಬುದಕ್ಕೆ ಅವರ ಈ ನಿವೇಶನ ದಾನವೇ ಸಾಕ್ಷಿಕರಿಸಿದೆ. ಅವರ ಕೌಟುಂಬಿಕ ಜೀವನವು ಸೌ.ಬಾಳವ್ವರೊಂದಿಗೆ ಪ್ರಾರಂಭಗೊಂಡಿತು. ಆರು ಜನ ಸುಪುತ್ರಿಯರನ್ನು ಪಡೆದುಕೊಂಡಿರುವ ಯ.ಯ.ಸು. ಕುಟುಂಬವು ಇಬ್ಬರು ಸುಪುತ್ರಿಯರನ್ನು ಪದವೀಧರರನ್ನಾಗಿಸಿದೆ. ಇನ್ನೂಳಿದವರು ಶಿಕ್ಷಣ ಹೊಂದಿದ್ದಾರೆ. ಸಂತೃಪ್ತಿ ಕುಟುಂಬವು ಇವರದು. ಈ ಆರು ಜನ ಸುಪುತ್ರಿಯರಲ್ಲಿ ಓರ್ವ ಸುಪುತ್ರಿಯ ಜನ್ಮ ಪ್ರಮಾಣ ಪತ್ರದ ಒಂದು ಘಟನೆಯೂ ಯ.ಯ.ಸುಲ್ತಾನಪೂರ ಅವರನ್ನು ದಿಟ್ಟ ಹೋರಾಟಗಾರರನ್ನಾಗಿ ರೂಪಿಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಲೇಬೇಕಾಗಿರುತ್ತದೆ. ಜನಸಾಮಾನ್ಯರ ಅನುಕೂಲತೆಗಾಗಿ ಸದಾಕಾಲವು ಯ.ಯ.ಸು. ಅವರು ಶ್ರಮಿಸುತ್ತಲೇ ಬಂದಿರುವುದಕ್ಕೆ 1998 ರಿಂದ ಇಂದಿನವರೆಗೂ ಎಸ್.ಟಿ.ಡಿ. ಭೂತ ಕಾಯ್ದುಕೊಂಡು ಬಂದಿರುತ್ತಾರೆ .

ಮೂಡಲಗಿಯಲ್ಲಿ ಪ್ರಪ್ರಥಮವಾಗಿ ಲ್ಯಾಂಡಲೈನ್ ಮುಖಾಂತರ ಕಾನ್ಸರನ್ಸ್ ಕಾಲ್ ಸಂಪರ್ಕವನ್ನು ಪೂರೈಸಿಕೊಟ್ಟವರು. ಮೂಡಲಗಿ ತಾಲೂಕಾ ಹೋರಾಟ ಸಮಿತಿಯ ಪ್ರಚಾರ ಕಾರ್ಯದರ್ಶಿಗಳಾಗಿ ಅನುಪಮ ಸೇವೆಯನ್ನು ಯ.ಯ.ಸು. ಸಲ್ಲಿಸಿದ್ದಾರೆ. ಅಲ್ಲದೇ ತಮ್ಮ ಸಂಪಾದಕತ್ವದ ಮೂಡಲ ವಾರ್ತೆ ಪತ್ರಿಕೆಯನ್ನು ಪ್ರಥಮವಾಗಿ ಮೂಡಲಗಿಯಿಂದಲೇ ಪ್ರಕಟಿಸಿದ್ದಾರೆ. ಕೋರಿಯರ ಸರ್ವಿಸ್ ಕೂಡ ಇವರೇ ಮೂಡಲಗಿಯಲ್ಲಿ ಪ್ರಥಮವಾಗಿ ಪ್ರಾರಂಭಿಸಿ ಜನಸಾಮಾನ್ಯರ ಪ್ರೀತಿ-ವಿಶ್ವಾಸಗಳಿಗೆ ಯ.ಯ. ಸುಲ್ತಾನಪೂರ ಪಾತ್ರರಾಗಿದ್ದಾರೆ . ಇವರ ಸೇವೆ ಕೊಡುಗೆಗೆ ಈಗಾಗಲೇ ಇತ್ತೀಚಿಗೆ ಸ್ನೇಹ ಜೀವಿಗಳಾಗಿದ್ದರು. ಮೃತರು ಪತ್ನಿ, 5 ಜನ ಹೆಣ್ಣುಮಕ್ಕಳನ್ನು ಅಗಲಿದ್ದಾರೆ.

ಅವರ ನಿಧನಕ್ಕೆ “ಸರ್ವವಾಣಿ” ಕಂಬನಿ ಮಿಡಿಯುತ್ತದೆ. ಮೂಡಲಗಿ ತಾಲೂಕಾ ವಾರ ಪತ್ರಿಕಾ ಸಂಘದ ಅಧ್ಯಕ್ಷ ಮಾರುತಿ ಸವಳೇಕರ ಸಂತಾಪ ಸೂಚಿಸಿದ್ದಾರೆ.


Spread the love

About gcsteam

Check Also

ತಮ್ಮ ಸ್ವಂತ ವೆಚ್ಚದಲ್ಲಿ ಅರಭಾವಿ ಕ್ಷೇತ್ರದಲ್ಲಿ ಜಾನುವಾರುಗಳ ಚರ್ಮ ಗಂಟು ರೋಗದ ಕಿಟ್‌ಗಳನ್ನು ವಿತರಿಸಿದ ಬಾಲಚಂದ್ರ ಜಾರಕಿಹೊಳಿ

Spread the loveಗೋಕಾಕ : ಜಾನುವಾರುಗಳಿಗೆ ಚರ್ಮ ಗಂಟು ರೋಗ ಹರಡುತ್ತಿದ್ದು, ಹಳ್ಳಿಗಳಿಗೆ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಜಾನುವಾರುಗಳನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page