ಬೆಳಗಾವಿ: ಜಿಲ್ಲೆಯಲ್ಲಿ ಕೊವಿಡ್-19 ಪ್ರಕರಣವು ಕಡಿಮೆ ಆಗುತ್ತಿವೆ ಎಂದು ಜಿಲ್ಲೆಯ ಜನ ನಿಟ್ಟುಸಿರುವ ಬಿಡುವಷ್ಟರಲ್ಲಿ, ಆತಂಕ ಸೃಷ್ಟಿಸುವ ರೀತಿಯಲ್ಲಿ ಇಂದು ಆರೋಗ್ಯ ಇಲಾಖೆ 12 ಘಂಟೆಗೆ ಹೆಲ್ತ್ ಬುಲೇಟಿನ್ ಬಿಡುಗಡೆ ಮಾಡಿದ್ದು, ಅದರಲ್ಲಿ ಜಿಲ್ಲೆಯಲ್ಲಿ ಹದಿನಾಲ್ಕು ಜನರಿಗೆ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ. ಜಿಲ್ಲೆಯಲ್ಲಿನ ಕೊರೋನಾ ಸೊಂಕಿತರ ಸಂಖ್ಯೆ 69ಕ್ಕೆರಿದೆ.
ಸೋಂಕಿತರ ವರದಿ ಜಿಲ್ಲೆಯ ಹುಕ್ಕೆರಿ ತಾಲೂಕಿನ ಸಂಕೇಶ್ವರದ 9 ವರ್ಷದ ಬಾಲಕ ಸೇರಿ 75 ವರ್ಷದ ವೃದ್ದೆಯಲ್ಲೂ ಸೋಂಕು ದೃಡಪಟ್ಟಿದೆ. ವಿಪರ್ಯಾಸವೆಂದರೆ, ಸಂಕೇಸ್ವರದ ಮೂವರು ದೆಹಲಿಯ ಜಮಾತಗೆ ಹೋದವರಲ್ಲ. ಜಮಾತ್ ಗೆ ಹೊದವರ ಸಂಪರ್ಕಕ್ಕು ಬಂದಿಲ್ಲ. ಲೆಕ್ಕಕ್ಕೆ ನಿಲುಕದ ಕೋರೊನಾ ಸೋಂಕು ಏನು ಅರಿಯದ ಮಕ್ಕಳಲ್ಲಿ ಪತ್ತೆಯಾಗಿದ್ದು, ತಾಲೂಕಿನ ಜನ ಭಯಬಿತರಾಗಿದ್ದಾರೆ.
ಹಿರೇಬಾಗೆವಾಡಿಯಲ್ಲಿ 5 ಜನ ಮಹಿಳೆಯರಿಗೆ, 5 ಜನ ಪುರುಷರಿಗೆ ಸೇರಿ 16 ವರ್ಷದ ಬಾಲಕಿ ಹಾಗೂ 18 ವರ್ಷದ ಯುವಕನಿಗೆ ಸೋಂಕು ತಗುಲಿದೆ. ಹಿರೇಬಾಗೆವಾಡಿಯ ಸೋಂಕಿತರ ಸಂಖ್ಯೆ 35 ಕ್ಕೆ ಏರಿದೆ.
Sarvavani Latest Kannada News