ಭಾನುವಾರ , ಡಿಸೆಂಬರ್ 22 2024
kn
Breaking News

Yearly Archives: 2022

ನಿಧನ ವಾರ್ತೆ ಬಸಬಣ್ಣೆವ್ವ ಮಾರುತಿ ದುರದುಂಡಿ

ಮೂಡಲಗಿ: ಸಮೀಪದ ಕಂಕಣವಾಡಿ ಗ್ರಾಮದ ನಿವಾಸಿಯಾದ ಬಸವಣ್ಣೆವ್ವ ಮಾರುತಿ ದುರುದುಂಡಿ (೭೫) ನಿಧನರಾದರು. ಅವರು ಇಬ್ಬರು ಪುತ್ರರು, ಓರ್ವ ಪುತ್ರಿ, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Read More »

ಎಲ್ಲರೊಂದಿಗೆ ಬೆರೆಯುವ ಅಜಾತಶತ್ರು ಉಮೇಶ ಕತ್ತಿ

ಮೂಡಲಗಿ: ಸಚಿವ ಉಮೇಶ ಕತ್ತಿ ಅವರ ನಿಧನಕ್ಕೆ ಕರ್ನಾಟಕ ರಾಜ್ಯ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಮೂಡಲಗಿ ಘಟಕದಿಂದ ಶ್ರದ್ಧಾಂಜಲಿಯನ್ನು ಅರ್ಪಿಸಿದರು. ಈ ಸಂದರ್ಭದಲ್ಲಿ ನುಡಿ ನಮನ ಸಲ್ಲಿಸಿದ ಬಾಲಶೇಖರ ಬಂದಿ ಹಾಗೂ ಎ.ಜಿ. ಶರಣಾರ್ಥಿ ಮಾತನಾಡಿ ‘ಉಮೇಶ ಕತ್ತಿ ಅವರು ಅಪ್ರತಿಮ ರಾಜಕಾರಣಿಯಾಗಿದ್ದರು. ಜನಪರ ಕಾರ್ಯಗಳನ್ನು ಮಾಡುವ ಮೂಲಕ ನಾಡಿನ ಹೃದಯದಲ್ಲಿ ಶಾಶ್ವತವಾಗಿ ಉಳಿದುಕೊಂಡಿದ್ದಾರೆ’ ಎಂದರು. ‘ಎಲ್ಲರೊoದಿಗೆ ಬೆರೆಯುವ ಅಜಾತಶತ್ರುವಾಗಿದ್ದ ಅವರ ನಿಧನದಿಂದ ಸಮಾಜಕ್ಕೆ ಹಾಗೂ ನಾಡಿಗೆ ತುಂಬಲಾರದಷ್ಟು ಆಘಾತವಾಗಿದೆ’ …

Read More »

ನಿಧನ ವಾರ್ತೆ ಫಾತೀಮಾ ಸಾಹೇಬ ಪೀರಜಾದೆ

ಮೂಡಲಗಿ: ಇಲ್ಲಿನ ಪೀರಜಾದೆ ಗಲ್ಲಿಯ ನಿವಾಸಿ ಫಾತೀಮಾ ಸಾಹೇಬ ಪೀರಜಾದೆ (೮೫) ಬುಧವಾರ ನಿಧನರಾದರು. ಅವರು ನಾಲ್ವರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Read More »

ವಿತರಕರ ಪಾದ ಪೂಜೆ ಸಲ್ಲಿಸಿ ಪತ್ರಿಕಾ ವಿತರಕರ ದಿನಾಚರಣೆ ಆಚರಣೆ

ಮೂಡಲಗಿ: ಪತ್ರಿಕಾ ವಿತರಕರ ಪಾದ ಪೂಜೆಯನ್ನು ಮಾಡುವ ಮೂಲಕ ಮೂಡಲಗಿಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮೂಡಲಗಿ ತಾಲೂಕಾ ಘಟಕ ಹಾಗೂ ಮಾಧ್ಯಮ ವಿವಿಧ ಸಂoಘಟನೆಯವರು ಭಾನುವಾರ ಪತ್ರಿಕಾ ವಿತರಕರ ದಿನಾಚರಣೆಯನ್ನು ಇಡೀ ರಾಜ್ಯದಲ್ಲಿ ಮೊದಲ ಭಾರಿಗೆ ವಿಶೇಷ ಮಾದರಿಯಾಗಿ ಆಚರಿಸಿದರು. ರವಿವಾರದಂದು ಪಟ್ಟಣದ ಪ್ರೆಸ್ ಕ್ಲಬ್ ಕಾರ್ಯಾಲಯದಲ್ಲಿ ಆಯೋಜಿಸಲಾದ ಪತ್ರಿಕಾ ವಿತರಕರ ದಿನಾಚಾರಣೆಯ ಕಾರ್ಯಕ್ರಮದ ಅಂಗವಾಗಿ ಸಂಘದ ಅಧ್ಯಕ್ಷ ಕೃಷ್ಣಾ ಗಿರೆಣ್ಣವರ ಹಾಗೂ ಪತ್ರಿಕೆ ವಿತರಕ ಸಂಘದ ಅಧ್ಯಕ್ಷ …

Read More »

ಜನಸೇವೆ ಜನಾರ್ದನ ಸೇವೆ : ಮಲೀಕ ಹುಣಶ್ಯಾಳ

ಮೂಡಲಗಿ: ಜನ ಸೇವೆ ಜನಾರ್ಧನ ಸೇವೆ ಎಂದು ತಿಳಿದು ನಮ್ಮ ಅಂಜುಮನ್ ಕಮಿಟಿಯು ಜನಪರ ಸೇವೆಯಲ್ಲಿ ತೊಡಗಿ ಕಷ್ಟದಲ್ಲಿರುವ ಅನೇಕ ಬಡ ಕುಟುಂಗಳಿಗೆ ಮಾನವೀಯತೆ ದೃಷ್ಟಿಯಿಂದ ನೆರವು ನೀಡಿ ಅಳಿಲು ಸೇವೆ ಮಾಡುತ್ತಿದೆ ಎಂದು ಅಂಜುಮನ್ ಎ ಇಸ್ಲಾಂ ಕಮಿಟಿಯ ಅಧ್ಯಕ್ಷ ಮಲೀಕ ಹುಣಶ್ಯಾಳ ಹೇಳಿದರು. ಅವರು ಅಂಜುಮನ್ ಕಮಿಟಿಯ ಕಚೇರಿಯಲ್ಲಿ ಕಮಿಟಿ ವತಿಯಿಂದ ಹಮ್ಮಿಕೊಂಡ ಸರ್ಕಾರದ ವಿವಿಧ ಸೌಲಭ್ಯಗಳ ಮಾಶಾಸನ, ಜಾತಿ ಆದಾಯ ಆದೇಶ ಪ್ರತಿಗಳ ವಿತರಣಾ ಕಾರ್ಯಕ್ರಮದಲ್ಲಿ …

Read More »

ಒಳ್ಳೆಯ ಕಾರ್ಯ ಮಾಡುತ್ತಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಎಲ್ಲರೂ ಗೌರವಿಸೋಣ : ಹನಮಂತ ಗುಡ್ಲಮನಿ

ಮೂಡಲಗಿ : ಕಳೆದೊಂದು ವಾರದಿಂದ ಸಾರ್ವಜನಿಕರಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ, ಮೂಡಲಗಿ ಪಟ್ಟಣದ ರಸ್ತೆ ಸುಧಾರಣಾ ಕಾಮಗಾರಿಗೆ ಸೋಮವಾರದಂದು ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ ಅವರು ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ಪಟ್ಟಣದ ಅಂಬೇಡ್ಕರ ವೃತ್ತದಿಂದ ಟಿಪ್ಪು ಸುಲ್ತಾನ ವೃತ್ತದವರೆಗಿನ ೧ ಕಿ.ಮೀ ರಸ್ತೆ ಸುಧಾರಣಾ ಕಾಮಗಾರಿ ಮಾಡುವುದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಿದ್ದು, ಕೊನೆಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು …

Read More »

ಸನ್ನಡತೆಗಳನ್ನು ಅನುಸರಿಸಿದರೆ ನೆಮ್ಮದಿಯ ಜೀವನ ಪ್ರಾಪ್ತವಾಗುವುದು: ಶಿವಾನಂದ ಮರಾಠೆ

ಮೂಡಲಗಿ: ಸ್ವಾಮೀಜಿಗಳು ತಮ್ಮ ಪ್ರವಚನದ ಮೂಲಕ ಜನತೆಗೆ ಮುಕ್ತಿ ಮಾರ್ಗ ತೋರುವ ಸನ್ಮಾರ್ಗ, ಸನ್ನಡತೆಗಳನ್ನು ಅನುಸರಿಸಿದರೆ ನೆಮ್ಮದಿಯ ಜೀವನ ಪ್ರಾಪ್ತವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ತಾಲೂಕಾ ಘಟಕದ ಉಪಾಧ್ಯಕ್ಷ ಶಿವಾನಂದ ಮರಾಠೆ ಹೇಳಿದರು. ಸಮೀಪದ ಗುರ್ಲಾಪೂರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಟ್ರಸ್ಟ್ ಸಂಘಟಕರು ಹಮ್ಮಿಕೊಂಡ ಇಟ್ನಾಳದ ಶ್ರೀ ಶಿದ್ದೇಶ್ವರ ಸ್ವಾಮಿಗಳು ನೀಡುತ್ತಿರುವ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ವೇಳೆಯಲ್ಲಿ ನೂತನವಾಗಿ ಆಯ್ಕೆಯಾದ …

Read More »

ನಿಧನ ವಾರ್ತೆ ಭೂತಪ್ಪ ಪಾಂಡಪ್ಪ ಭೂತನ್ನವರ

ಮೂಡಲಗಿ: ಸಮೀಪದ ಕೌಜಲಗಿ ಮೀರಾಳ ತೋಟದ ನಿವಾಸಿ ಭೂತಪ್ಪ ಪಾಂಡಪ್ಪ ಭೂತನ್ನವರ (46) ನಿಧನರಾಗಿದ್ದಾರೆ. ಮೃತರು ಮೂಡಲಗಿ ಶೈಕ್ಷಣಿಕ ತಾಲೂಕಿನ ಬೀಲಕುಂದಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸವದತ್ತಿ ತೋಟದಲ್ಲಿ ಸಹಶಿಕ್ಷಕರಾಗಿದ್ದರು. ತಂದೆ, ತಾಯಿ, ಹೆಂಡತಿ, ತಮ್ಮ, ತಂಗಿ, ಇಬ್ಬರು ಗಂಡು ಮಕ್ಕಳು ಹಾಗೂ ಅಪಾರ ಬಂಧು ಬಳಗ ಅಗಲಿದ್ದಾರೆ.

Read More »

ವೆಂಕಟಾಪೂರ ಗ್ರಾಮದಲ್ಲಿ ಪವಾಡ ಪುರುಷ ಬಾಳುಮಾಮಾ ಜಾತ್ರಾ ಮಹೋತ್ಸವ

ಮೂಡಲಗಿ: ಸಮೀಪದ ವೆಂಕಟಾಪೂರ ಗ್ರಾಮದಲ್ಲಿ ಪವಾಡ ಪುರುಷ ಬೆಡಿದ ಭಕ್ತರಿಗೆ ಬೇಡಿದ ವರ ನೀಡುವ ವರದಾತ ಬಾಳು ಮಾಮಾ ರವರ ಶ್ರಾವಣ ಮಾಸದ ನಿಮಿತ್ಯ ಪ್ರತಿವರ್ಷದಂತೆ ಈ ವರ್ಷ ಕೂಡ ಅಧೂರಿಯಾಗಿ ಜಾತ್ರಾ ಮಹೋತ್ಸವ ಜರುಗಿತು. ಬಾಳುಮಾಮ ದೇವಸ್ಥಾನ ದಿಂದ ಬಾಳುಮಾಮ ಕುದುರೆ ಗೆ ಗುರುಶಿದ್ದ ಪೂಜಾರಿ ,ಕೆಂಚಪ್ಪ ಪೂಜಾರಿ, ಕಳೆಪ್ಪ ಪೂಜಾರಿ ನಾಗಪ್ಪ ಪೂಜಾರಿ ಸೆರಿಕೋಂಡು ಪೂಜೆ ಸಲ್ಲಿಸುವ ಮೂಲಕ ಭವ್ಯ ಮೆರವಣಿಗೆಗೆ ಚಾಲನೆ ನೀಡಿದರು. ವೆಂಕಟಾಪೂರ ಗ್ರಾಮದ …

Read More »

ಸರ್ಕಾರಿ ನೌಕರಿ ಆಮೀಷ : ಡೋಂಗಿ ಬಾಬಾ ಅಂದರ್!! ಇವ್ಹಿಎo ಸ್ವಾಮಿಯ ಕರ್ಮಕಾಂಡ ಬಯಲು, ಇಂತಹ ದೇಶದ್ರೋಹಿ ವ್ಯಕ್ತಿಗೆ ತಕ್ಕ ಶಿಕ್ಷೆಯಾಗಲಿ

ಮೂಡಲಗಿ : ಸರ್ಕಾರಿ ನೌಕರಿ ಮಾಡಿಸಿಕೊಡುತ್ತೇನೆ ಎಂದು ಹೇಳಿ ಅಮಾಯಕರಿಂದ ಕೋಟ್ಯಾಂತರ ರೂಪಾಯಿ ಟೋಪಿ ಹಾಕಿರುವ ಖತರ್ನಾಕ್ ಸ್ವಾಮಿಯನ್ನು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ. ತಾಲೂಕಿನ ಹಳ್ಳೂರ ಗ್ರಾಮದ ಅಲ್ಲಮಪ್ರಭು ಹಿರೇಮಠ ಬಂಧನಕ್ಕೀಡಾಗಿರುವ ವಂಚಕ ಸ್ವಾಮಿಯಾಗಿದ್ದು, ಈಗ ಪೊಲೀಸರ ಅತಿಥಿಯಾಗಿ ಕಂಬಿ ಎಣಿಸುತ್ತಿದ್ದಾನೆ. ಹಣಕಾಸು ವ್ಯವಹಾರ, ಮೋಸ, ವಂಚನೆ ಪ್ರಕರಣಕ್ಕೆ ಸಂಬoಧಿಸಿದoತೆ ಪೊಲೀಸರಿಂದ ತಲೆಮರೆಸಿಕೊಂಡಿದ್ದ ಈತನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸರ್ಕಾರಿ ಹಾಗೂ ಇನ್ನೀತರ ಸಂಘ-ಸoಸ್ಥೆಗಳಲ್ಲಿ ನೌಕರಿ ಕೊಡಿಸುವ ನೆಪದಲ್ಲಿ …

Read More »

You cannot copy content of this page