ಭಾನುವಾರ , ನವೆಂಬರ್ 24 2024
kn
Breaking News

Monthly Archives: ಜನವರಿ 2022

ಅರಭಾವಿ ಕ್ಷೇತ್ರದ ರಸ್ತೆಗಳು ಹಾಗೂ ದೇವಸ್ಥಾನಗಳ ಅಭಿವೃದ್ಧಿಗೆ ೫೨ ಕೋಟಿ ರೂ. ಅನುದಾನ ಬಿಡುಗಡೆ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಗೋಕಾಕ : ಅರಭಾವಿ ಮತಕ್ಷೇತ್ರದ ರಸ್ತೆಗಳ ಅಭಿವೃದ್ಧಿಗಾಗಿ ೫೦ ಕೋಟಿ ರೂ. ಹಾಗೂ ದೇವಸ್ಥಾನಗಳ ಜೀರ್ಣೋದ್ಧಾರಕ್ಕಾಗಿ ೨ ಕೋಟಿ ರೂ.ಗಳು ಸೇರಿ ಒಟ್ಟು ೫೨ ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ. ಕ್ಷೇತ್ರದಲ್ಲಿರುವ ರಸ್ತೆಗಳ ಸುಧಾರಣೆಗಾಗಿ ಲೋಕೋಪಯೋಗಿ ಇಲಾಖೆಯ ಒಟ್ಟು ೩೪.೫೩ ಕಿ.ಮೀ ರಸ್ತೆಗಳ ಸುಧಾರಣೆಗಾಗಿ ೩೨ ಕೋಟಿ ರೂ. ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯ ೩೫.೩೦ …

Read More »

ಜಿಲ್ಲಾ ಪಂಚಾಯತ್ ಸಿಇಒ ಅವರಿಗೆ ರಾಜ್ಯ ಪ್ರಶಸ್ತಿ: ಕಲರವ ಶಿಕ್ಷಕರ ಸೇವಾ ಬಳಗದ ವತಿಯಿಂದ ಸನ್ಮಾನ

. ಕೊಪ್ಪಳ: ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಾಹಕರು ಅಧಿಕಾರಿಗಳು ಹಾಗೂ ಕಲರವ ಶಿಕ್ಷಕರ ಸೇವಾ ಬಳಗದ ಸದಸ್ಯರಾದ ಪೌಜೀಯಾ ತರುನ್ನಮ್ ಅವರಿಗೆ ರಾಜ್ಯ ಮಟ್ಟದ ಅತ್ಯುತ್ತಮ ಸೇವಾ ಪ್ರಶಸ್ತಿ ಲಭಿಸಿರಿವುದಕ್ಕೆ ಕಲರವ ಶಿಕ್ಷಕರ ಸೇವಾ ಬಳಗದ ವತಿಯಿಂದ ಅವರ ಕಚೇರಿಯಲ್ಲಿ ಅಭಿನಂದಿಸಿದರು. ಜಿಲ್ಲಾ ಪಂಚಾಯತ್ ಸಿಇಒ ಅವರು ಮತದಾರರ ಜಾಗೃತಿಯಲ್ಲಿ ಅತ್ಯುತ್ತಮ ಕಾರ್ಯ ನಿರ್ವಹಿಸಿ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದ್ದರ ಪ್ರಯುಕ್ತ ರಾಜ್ಯ ಮಟ್ಟದ ಸ್ವೀಪ್ ಸಮಿತಿಯು ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೇ,ರಾಜ್ಯ …

Read More »

ಮೂಡಲಗಿಯಲ್ಲಿ ಸಬ್ ರಜಿಸ್ಟರ್ ಕಛೇರಿ ಆರಂಭಕ್ಕೆ ಹಣಕಾಸು ಇಲಾಖೆಯಿಂದ ಅನುಮೋದನೆ : ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿಕೆ

ಮೂಡಲಗಿ : ಮೂಡಲಗಿ ತಾಲೂಕಿನ ಸಾರ್ವಜನಿಕರ ಬಹು ನಿರೀಕ್ಷೆಯ ಉಪ ನೋಂದಣಾಧಿಕಾರಿಗಳ ಕಛೇರಿ ಆರಂಭಕ್ಕೆ ಹಣಕಾಸು ಇಲಾಖೆಯಿಂದ ಅನುಮೋದನೆ ದೊರೆತಿದೆ ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಮೂಡಲಗಿಯಲ್ಲಿ ಹೊಸದಾಗಿ ಉಪನೋಂದಣಾಧಿಕಾರಿಗಳ ಕಛೇರಿಯನ್ನು ಫೆಬ್ರುವರಿ ತಿಂಗಳೊಳಗೆ ಆರಂಭಿಸಲಾಗುವುದು ಎಂದು ಅವರು ಹೇಳಿದರು. ಸತತವಾಗಿ ಎರಡು ವರ್ಷಗಳಿಂದ ಕೋವಿಡ್ ಹಿನ್ನೆಲೆಯಲ್ಲಿ ಕಛೇರಿ ಆರಂಭಕ್ಕೆ ಹಣಕಾಸು ಇಲಾಖೆಯು ನಮ್ಮ ಪ್ರಸ್ತಾವಣೆಯನ್ನು ವಿಳಂಬ ಮಾಡಿತ್ತು. ಆದರೂ ಹಲವು ಬಾರಿ ಮುಖ್ಯಮಂತ್ರಿಗಳನ್ನು …

Read More »

ಕಾರಜೋಳಗೆ ಜಿಲ್ಲಾ ಉಸ್ತುವಾರಿ : ಶಾಸಕ ಬಾಲಚಂದ್ರ ಜಾರಕಿಹೊಳಿ ಹರ್ಷ

ಗೋಕಾಕ : ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರನ್ನು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಮುಂದುವರೆಸಿರುವುದಕ್ಕೆ ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ಗೋವಿಂದ ಕಾರಜೋಳ ಅವರು ಉಸ್ತುವಾರಿ ಸಚಿವರಾಗಿ ಜಿಲ್ಲೆಯಲ್ಲಿ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಮುಂಬರುವ ತಾಪಂ, ಜಿಪಂ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಲು ಎಲ್ಲರೂ ಶ್ರಮಿಸಬೇಕು. ಜಿಲ್ಲೆಯನ್ನು ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ಅಭಿವೃದ್ಧಿ ಕಾರ್ಯಗಳು ನೆರವೇರಲಿಕ್ಕೆ ಕಾರಜೋಳ ಅವರು …

Read More »

ರಾಜ್ಯಾಧ್ಯಕ್ಷರ ಮೇಲೆ ತಳ್ಳಾಟ- ನೂಕಾಟ ಮಾಡಿದವರು ಕ್ಷಮೆಯಾಚನೆ

ಕೊಪ್ಪಳ: ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರು ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕರಾದ ಬೀರಪ್ಪ ಅಂಡಗಿ ಅವರ ಮೇಲೆ ತಳ್ಳಾಟ ಹಾಗೂ ನೂಕಾಟ ಮಾಡಿವರು ನಡೆದ ಘಟನೆಯ ಕುರಿತಾಗಿ ಕ್ಷಮೆಯಾಚನೆ ಮಾಡಿದ್ದಾರೆ. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳ ಸಭೆಗೆ ತೆರಳಿದ ಬೀರಪ್ಪ ಅಂಡಗಿ ಅವರ ಮೇಲೆ ಸಂಘದ ಪದಾಧಿಕಾರಿಗಳಲ್ಲದವರು ಅವರನ್ನು ತಳ್ಳಾಟ ಹಾಗೂ ನೂಕಾಟ ಮಾಡುವುದರ ಮೂಲಕ ಹಲ್ಲೆಗೆ ಮುಂದಾಗಿದ್ದರು.ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಭೆಗೆ ಆಹ್ವಾನ …

Read More »

ಬಿಜೆಪಿ ಅಧಿಕೃತ ಸಭೆಯಲ್ಲ. ಈ ಸಭೆಗೆ ಹೆಚ್ಚಿನ ಮಹತ್ವ ಬೇಡ : ಶಾಸಕ ಬಾಲಚಂದ್ರ ಜಾರಕಿಹೊಳಿ

ಬೆಳಗಾವಿ : ಬೆಳಗಾವಿಯಲ್ಲಿ ಶನಿವಾರ ಜಿಲ್ಲೆಯ ಕೆಲವು ಬಿಜೆಪಿ ಮುಖಂಡರು ಸಭೆ ಸೇರಿರುವ ಕುರಿತು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಈ ಸಭೆಯಲ್ಲಿ ಯಾರನ್ನೂ ಹೊರಗಿಟ್ಟು ಸಭೆ ನಡೆಸಿದ್ದಾರೆ ಎಂಬುದನ್ನು ಕೂಡ ಮಾಧ್ಯಮಗಳ ಮೂಲಕ ತಿಳಿದುಕೊಂಡಿದ್ದಾಗಿ ಅರಭಾವಿ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದ್ದಾರೆ. ಈ ಬಗ್ಗೆ ಭಾನುವಾರದಂದು ಹೇಳಿಕೆ ನೀಡಿರುವ ಅವರು, ಉದ್ಧೇಶಪೂರ್ವಕವಾಗಿ ಯಾರನ್ನೂ ಹೊರಗಿಟ್ಟು ಸಭೆಯನ್ನು ನಡೆಸುವ ಅವಶ್ಯಕತೆ ಇರಲಿಲ್ಲ. ಅಲ್ಲದೇ ಇದು ಬಿಜೆಪಿಯ ಅಧಿಕೃತ …

Read More »

ರಾಜ್ಯಾಧ್ಯಕ್ಷರ ಮೇಲೆ ಹಲ್ಲೆಗೆ ಯತ್ನ:ಖಂಡನೆ,ಕ್ಷಮೆಯಾಚನೆಗೆ ಆಗ್ರಹ

ಕೊಪ್ಪಳ: ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಅವರ ಮೇಲೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳಲ್ಲದವರು ತಳ್ಳಾಟ ಹಾಗೂ ನೂಕಾಟ ಮಾಡುವ ಮೂಲಕ ಹಲ್ಲೆಗೆ ಯತ್ನ ನಡೆಸಿದವರ ಕ್ರಮವನ್ನು ವಿಕಲಚೇತನ ನೌಕರರ ಸಂಘದ ತಾಲೂಕ ಘಟಕದ ಅಧ್ಯಕ್ಷರಾದ ಅಂದಪ್ಪ ಇದ್ಲಿ ಅವರು ಖಂಡಿಸುವುದಲ್ಲದೇ ಕೂಡಲೇ ಹಲ್ಲೆಗೆ ಯತ್ನ ನಡೆಸಿದವರು ಕ್ಷಮೆಯಾಚನೆ ಮಾಡಬೇಕು ಇಲ್ಲದಿದ್ದರೆ ಜ.೨೯ ರ ಶನಿವಾರ ಸಂಘದ ವತಿಯಿಂದ ಪ್ರತಿಭಟನೆಯನ್ನು ನಡೆಸಲಾಗುತ್ತದೆ ಎಂದು ಹೇಳಿದರು. ಅವರು …

Read More »

  ರೈತರು ಹೈನುಗಾರಿಕೆಗೆ ಹೆಚ್ಚಿನ ಒತ್ತು ನೀಡಬೇಕು:ಕೆ.ಎಂ.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ: ರೈತರು ಕೃಷಿಯೊಂದಿಗೆ ಹೈನುಗಾರಿಕೆಗೆ ಹೆಚ್ಚಿನ ಒತ್ತು ನೀಡಿದರೆ ಆರ್ಥಿಕಾಭಿವೃದ್ಧಿ ಹೊಂದಲು ಸಾಧ್ಯವಾಗುವುದು ಎಂದು ಕೆ.ಎಂ.ಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಶುಕ್ರವಾರದಂದು ಪಟ್ಟಣದ ತಮ್ಮ ಕಾರ್ಯಾಲಯದ ಆವರಣದಲ್ಲಿ ಕೆ.ಎಂ.ಎಫ್ ದಿಂದ ನಡೆದ ಸರಳ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ 8.50 ಲಕ್ಷ ರೂ ಮೊತ್ತದ ಚೆಕ್ಕಗಳನ್ನು ವಿತರಿಸಿ ಅವರು ಮಾತನಾಡಿದರು. ರೈತರ ಆರ್ಥಿಕಾಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸಾಕಷ್ಟು ರೈತ ಪರ ಯೋಜನೆಗಳನ್ನು ಅನುಷ್ಠಾನಗೊಳಿಸಿವೆ. ಅವುಗಳ ಸೌಲಭ್ಯಗಳನ್ನು …

Read More »

ಬೆಳಗಾವಿಯಲ್ಲಿ ನಂದಿನಿ ಫುಡ್ ಪಾರ್ಕ್ ಕಾರ್ಯ ಪ್ರಗತಿಯಲ್ಲಿ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಬೆಂಗಳೂರು : ನಂದಿನಿ ಉತ್ಪನ್ನಗಳ ಮಾರಾಟವನ್ನು ದೇಶಾದ್ಯಂತ ವಿಸ್ತರಿಸಲು ಬೆಳಗಾವಿಯಲ್ಲಿ ನಂದಿನಿ ಮೇಗಾ ಫುಡ್ ಪಾರ್ಕನ್ನು ಆರಂಭಿಸುವ ಕಾರ್ಯ ಪ್ರಗತಿಯಲ್ಲಿದ್ದು, ಪನ್ನೀರ್ ಹಾಗೂ ಚೀಜ್ ಆಧಾರಿದ ಉತ್ಪನ್ನಗಳು ಮತ್ತು ಇತರೇ ನಂದಿನಿ ಸಿಹಿ ಉತ್ಪನ್ನಗಳನ್ನು ಈ ಘಟಕದ ಮೂಲಕ ಉತ್ಪಾದಿಸಿ ಮಾರುಕಟ್ಟೆ ಜಾಲವನ್ನು ವಿಸ್ತರಿಸಲಾಗುವುದು ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಗುರುವಾರ ಸಂಜೆ ನಗರದ ಖಾಸಗಿ ಹೊಟೇಲ್‌ನಲ್ಲಿ ಜರುಗಿದ ಕೆಎಂಎಫ್ ೨೦೨೦-೨೧ನೇ ಸಾಲಿನ …

Read More »

ಜಿಲ್ಲೆಯಲ್ಲಿನ ಶಾಲೆಗಳು ಬಂದ, ಆದೇಶ ಹೊರಡಿಸಿದ ಜಿಲ್ಲಾಧಿಕಾರಿಗಳು

ಬೆಳಗಾವಿ: ಜಿಲ್ಲೆಯಲ್ಲಿ ವಸತಿ ಶಾಲೆಗಳನ್ನೊಳಗೊಂಡಂತೆ, 1 ರಿಂದ 9ನೇಯ ತರಗತಿಯವರೆಗೆ, ಇದೆ ಜನವರಿ 10ರಿಂದ 18ರ ವರೆಗೆ ಜಿಲ್ಲಾಧಿಕಾರಿಯವರು ಶಾಲೆಗಳಿಗೆ ರಜೆ ಘೋಷಿಸಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ 1-9ನೇ ತರಗತಿ ಶಾಲೆಗಳಿಗೆ ರಜೆ ಘೋಷಿಸಿದ ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಆದೇಶ ಹೊರಡಿಸಿದ್ದಾರೆ. 10ನೇ ತರಗತಿ ಮೇಲ್ಪಟ್ಟವರಿಗೆ ಎಂದಿನಂತೆ ತರಗತಿ ನಡೆಯಲಿವೆ ಎಂದು ಸೂಚನೆ ನೀಡಿದ್ದಾರೆ. ಆರೋಗ್ಯ ಇಲಾಖೆ ಅಧಿಕಾರಿಗಳು, ಚಿಕ್ಕೋಡಿ, ಬೆಳಗಾವಿ ಬಿಇಒಗಳ ಜತೆಗೆ ಸಭೆ ನಡೆಸಿದ್ದು, ಸಭೆಯಲ್ಲಿ ಶಾಲೆಗಳಿಗೆ …

Read More »

You cannot copy content of this page