ಮೂಡಲಗಿ : ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅನುದಾನದಡಿ ಅರಭಾವಿ ಮತಕ್ಷೇತ್ರಕ್ಕೆ ಜೆಜೆಎಂ ಯೋಜನೆಯಡಿ 36.50 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಮಂಗಳವಾರದಂದು ತಾಲೂಕಿನ ವಡೇರಹಟ್ಟಿ ಗ್ರಾಮದಲ್ಲಿ 1.60 ಕೋಟಿ ರೂ. ವೆಚ್ಚದ ಜೆಜೆಎಂ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಕಾಮಗಾರಿಗಳು ಈಗಾಗಲೇ ಪ್ರಗತಿಯಲ್ಲಿವೆ ಎಂದು ಹೇಳಿದರು. ಪ್ರತಿ ಮನೆ ಮನೆಗಳಿಗೆ ಕುಡಿಯುವ …
Read More »Monthly Archives: ಜುಲೈ 2021
ಎಸ್.ಎಸ್.ಎಲ್.ಸಿ ಮಕ್ಕಳಿಗೆ ಪರೀಕ್ಷಾ ತಯಾರಿಗಾಗಿ ನಮ್ಮ ನಡೆ ಮಕ್ಕಳ ಮನೆ ಕಡೆ : ಬಿಇಒ ಮನ್ನಿಕೇರಿ
ಮೂಡಲಗಿ: ಕೋವಿಡ್-19 ಸಂದರ್ಭದಲ್ಲಿ ಭೌತಿಕವಾಗಿ ತರಗತಿಗಳನ್ನು ನಡೆಸಲು ಸಾಧ್ಯವಾಗಿರುವದಿಲ್ಲ. ಅಗತ್ಯ ಸಂಪನ್ಮೂಲಗಳನ್ನು ಬಳಸಿಕೊಂಡು ಮಕ್ಕಳ ಜ್ಞಾನಾರ್ಜನೆ ಮಟ್ಟವನ್ನು ಹೆಚ್ಚಿಸಲು ಪ್ರಯತ್ನಿಸಿದೆ. ಪರೀಕ್ಷಾ ತಯಾರಿಗಾಗಿ ‘ನಮ್ಮ ನಡೆ ಮಕ್ಕಳ ಮನೆ ಕಡೆ’ ಕಾರ್ಯಕ್ರಮ ಆಯೋಜಿಸುವ ಮೂಲಕ ಮಕ್ಕಳಿಗೆ ಪ್ರೇರಣಾ ಕಾರ್ಯ ಮಾಡಲಾಗುತ್ತಿದೆ ಎಂದು ಬಿಇಒ ಅಜಿತ ಮನ್ನಿಕೇರಿ ಹೇಳಿದರು. ಮೂಡಲಗಿ ಶೈಕ್ಷಣಿಕ ವಲಯದಲ್ಲಿ ಆಯೋಜಿಸಿರುವ ‘ನಮ್ಮ ನಡೆ ಮಕ್ಕಳ ಮನೆ ಕಡೆ’ ವಿನೂತನ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಸ್.ಎಸ್.ಎಲ್.ಸಿ ಮಕ್ಕಳ ಮನೆ ಭೇಟಿ …
Read More »ಪಾಲಕರು, ವಿದ್ಯಾರ್ಥಿಗಳು ಭಯ ಪಡದೆ ಎಸ್.ಎಸ್.ಎಲ್.ಸಿ ಪರೀಕ್ಷೆಗಳಿಗೆ ಹಾಜರಾಗಿ : ಅಜಿತ ಮನ್ನಿಕೇರಿ
ಮೂಡಲಗಿ; ಕೊರೋನ ಸಾಂಕ್ರಾಮಿಕ ರೋಗದ ಅಲೆಯ ಭೀತಿಯಲ್ಲಿ ಎಸ್.ಎಸ್.ಎಲ್.ಸಿ ಮಕ್ಕಳಿಗೆ ಪರೀಕ್ಷಾ ತಯಾರಿ ಹಾಗೂ ಸಿದ್ದತೆ ಅತ್ಯಾವಶ್ಯಕವಾಗಿದೆ. ಯಾವುದೇ ಕಾರಣಕ್ಕೂ ಭಯ ಪಡದೆ ವಿದ್ಯಾರ್ಥಿಗಳು ಮತ್ತು ಪಾಲಕರು ಪರೀಕ್ಷೆಗಳಿಗೆ ಹಾಜರಾಗಬೇಕೆಂದು ಬಿಇಒ ಅಜಿತ ಮನ್ನಿಕೇರಿ ಹೇಳಿದರು. ಅವರು ಶುಕ್ರವಾರ ಮೂಡಲಗಿಯಲ್ಲಿ ಜರುಗಿದ ಎಸ್.ಎಸ್.ಎಲ್.ಸಿ ಮಕ್ಕಳಿಗೆ ‘ಕ್ಲಸ್ಟರ ಮಟ್ಟದ’ ಫೋನ್ ಇನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕೊವೀಡ್-19 ಸಂದರ್ಭದಲ್ಲಿ ಶೈಕ್ಷಣಿಕವಾಗಿ ಭೌತಿಕವಾಗಿ ತರಗತಿಗಳನ್ನು ಆಯೋಜಿಸಲು ಸಾಧ್ಯವಾಗಲಿಲ್ಲ. ಸಮೂಹ ಮಾದ್ಯಮ ಹಾಗೂ ಸಾಮಾಜಿಕ …
Read More »ಅಧಿಕಾರಿಗಳ ನಿರ್ಲಕ್ಷ್ಯ :ಚರಂಡಿ ವ್ಯವಸ್ಥೆ ಇಲ್ಲದೆ ನಿಂತ ಮಳೆ ನೀರು – ಸಾರ್ವಜನಿಕರ ಪರದಾಟ
ರಾಮದುರ್ಗ: ತಾಲೂಕಿನ ಹಲಗತ್ತಿ ಗ್ರಾಮ ಪಂಚಾಯಯಿತಿ ವ್ಯಾಪ್ತಿಯ ಹಲಗತ್ತಿ ಗ್ರಾಮದ ವಾರ್ಡ್ ನಂಬರ್.3 ರಲ್ಲಿ ಮಳೆಯಾದ ನೀರು ಹೋಗಲು ಸರಿಯಾದ ಮಾರ್ಗ ಇಲ್ಲದೆ ಇರುದರಿಂದ ಇಲ್ಲಿನ ನಿವಾಸಿಗಳು ನಿಂತ ನೀರಿನಲ್ಲಿಯೇ ನಡೆದಾಡುವಂತಹ ಪರಿಸ್ಥಿತಿ ಇಲ್ಲಿ ನಿರ್ಮಾಣವಾಗಿದೆ. ಅಲ್ಲದೆ ಮಳೆಯಾದ ನೀರು ಒಮ್ಮೊಮ್ಮೆ ಮನೆಯೊಳಗೆ ನುಗ್ಗುತ್ತದೆ ಎಂದು ಇಲ್ಲಿನ ನಿವಾಸಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಅಲ್ಲದೆ ಇಲ್ಲಿನ ನಿವಾಸಿಗಳು ತಮ್ಮ ಕೆಲಸ ಕಾರ್ಯಗಳಿಗೆ ಹೋಗಬೇಕಾದರೆ ಚಿಕ್ಕ ಮಕ್ಕಳು, ವೃದ್ಧರು ಹಲವಾರು ಬಾರಿ …
Read More »ದೂರದರ್ಶನ ಚಂದನವಾಹಿನಿ ಮೂಲಕ ವಿಡಿಯೋ ಪಾಠಗಳ ಪ್ರಸಾರ ಶ್ಲಾಘನೀಯ : ಕುಮಾರ ಮರ್ದಿ
ಮೂಡಲಗಿ: ಕೋವಿಡ್ ಸಂದರ್ಭದಲ್ಲಿ ಮಕ್ಕಳ ಶೈಕ್ಷಣಿಕ ವ್ಯವಸ್ಥೆ ಅವ್ಯವಸ್ಥಿತವಾಗುತ್ತಿರುವ ಸಂದರ್ಭದಲ್ಲಿ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳಿಗಾಗಿ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿರುವ ಜೊತೆಗೆ ದೂರದರ್ಶನ ಚಂದನವಾಹಿನಿ ಮೂಲಕ ವಿಡಿಯೋ ಪಾಠಗಳನ್ನು ಪ್ರಸಾರ ಮಾಡುತ್ತಿರುವದು ಶ್ಲಾಘನೀಯವಾದದು ಎಂದು ತುಕ್ಕಾನಟ್ಟಿ ಗ್ರಾಮ ಪಂಚಾಯತ ಅಧ್ಯಕ್ಷ ಕುಮಾರ ಮರ್ದಿ ಹೇಳಿದರು. ಅವರು ಮಂಗಳವಾರ ತಾಲೂಕಿನ ತುಕ್ಕಾನಟ್ಟಿಯ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯವರು ವಿದ್ಯಾಥಿಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಕೆ ದೂರದರ್ಶನ ಚಂದನವಾಹಿನಿ ಮೂಲಕ ಪ್ರಸಾರ ಮಾಡುತ್ತಿರುವ ವಿಡಿಯೋ …
Read More »ದೇಶಿಯ ಆಟಗಳನ್ನು ಪ್ರೋತ್ಸಾಹಿಸಲು ಶಾಸಕ ಬಾಲಚಂದ್ರ ಜಾರಕಿಹೊಳಿ ಕರೆ
ಗೋಕಾಕ : ದೈಹಿಕ ಮತ್ತು ಸದೃಢವಾಗಿ ಉಳಿಯಲು ವ್ಯಾಯಾಮ ಮುಖ್ಯವಾಗಿದ್ದು, ಪ್ರಾಚೀನ ಕಾಲದ ವೈಭವ ಮತ್ತೇ ಮರುಕಳಿಸಲು ಕುಸ್ತಿಯಂತಹ ಆಟಗಳನ್ನು ಪ್ರೋತ್ಸಾಹಿಸಿ ಬೆಳೆಸಬೇಕಾದ ಅಗತ್ಯವಿದೆ ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಮಂಗಳವಾರದಂದು ತಾಲೂಕಿನ ಹಡಗಿನಾಳ ಗ್ರಾಮದಲ್ಲಿ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಹಿಂದಿನ ರಾಜ ಮಹಾರಾಜರ ಕಾಲದಲ್ಲಿ ಕುಸ್ತಿಗೆ ಭಾರೀ ಮಹತ್ವವಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಜಾತ್ರೆಗಳಲ್ಲಿ ಮಾತ್ರ ನಾವು …
Read More »ಹಾಕಿಸಿ, ಲಸಿಕೆ ಅಭಿಯಾನ ಯಶಸ್ವಿಗೊಳಿಸಿ ಸಂಭಾವ್ಯ ಮೂರನೇ ಅಲೆ ಸಮರ್ಥವಾಗಿ ಎದುರಿಸಲು ಅಧಿಕಾರಿಗಳಿಗೆ ಸೂಚಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ
ಮೂಡಲಗಿ : ಗೋಕಾಕ ಹಾಗೂ ಮೂಡಲಗಿ ತಾಲೂಕಿನ 18 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ಹಾಕಿಸಿ ಈ ಅಭಿಯಾನವನ್ನು ಯಶಸ್ವಿಗೊಳಿಸುವಂತೆ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಸೋಮವಾರದಂದು ಇಲ್ಲಿನ ತಹಶೀಲ್ದಾರ ಕಛೇರಿಯಲ್ಲಿ ಮೂಡಲಗಿ ಹಾಗೂ ಗೋಕಾಕ ತಾಲೂಕಾ ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಲಸಿಕೆ ಅಭಿಯಾನವನ್ನು ಈಗಾಗಲೇ ನಡೆಸಲಾಗುತ್ತಿದ್ದು, ಆರೋಗ್ಯ ಇಲಾಖೆಯ ಜೊತೆಗೆ ಎಲ್ಲ ಇಲಾಖೆಗಳು ಕೈಜೋಡಿಸಿ …
Read More »ತಾಯಿ-ತಂದೆಯವರ ಸ್ಮರಣಾರ್ಥ ಅರಭಾವಿ ಮಠದಲ್ಲಿ ನಿರ್ಮಿಸಿರುವ ಸಮುದಾಯ ಭವನ ಶೀಘ್ರದಲ್ಲಿಯೇ ಲೋಕರ್ಪಣೆ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ
ಘಟಪ್ರಭಾ : ಭಕ್ತ ಸಮೂಹ ಮತ್ತು ಸಾರ್ವಜನಿಕರ ಶುಭ ಕಾರ್ಯಗಳಿಗಾಗಿ ಅನುಕೂಲ ಕಲ್ಪಿಸಿಕೊಡಲು ಅರಭಾವಿ ಮಠದ ಆವರಣದಲ್ಲಿ 1.20 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಸಮುದಾಯ ಭವನವನ್ನು ಇಷ್ಟರಲ್ಲಿಯೇ ಲೋಕಾರ್ಪಣೆ ಮಾಡಲಾಗುವುದು ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದರು. ಶನಿವಾರ ಸಂಜೆ ಇಲ್ಲಿಗೆ ಸಮೀಪದ ಅರಭಾವಿ ದುರದುಂಡೀಶ್ವರ ಮಠಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಭಕ್ತರ ಅನುಕೂಲಕ್ಕೋಸ್ಕರ ಮಠದಲ್ಲಿ ಸಮುದಾಯ ಭವನ ನಿರ್ಮಿಸಲಾಗಿದೆ …
Read More »ತಳಕಟ್ನಾಳ ಬಳಿ ಕಲ್ಮಡ್ಡಿ ಏತ ನೀರಾವರಿ ಕಾಮಗಾರಿ ವೀಕ್ಷಣೆ ಮೂರು ತಿಂಗಳೊಳಗೆ ಕಲ್ಮಡ್ಡಿ ಏತ ನೀರಾವರಿ ಕಾಮಗಾರಿ ಪೂರ್ಣ : ಶಾಸಕ ಬಾಲಚಂದ್ರ ಜಾರಕಿಹೊಳಿ
ಗೋಕಾಕ : ಬರುವ ಸೆಪ್ಟೆಂಬರ್ ತಿಂಗಳೊಳಗೆ ಕೌಜಲಗಿ ಮತ್ತು ಸುತ್ತಲಿನ ಹಳ್ಳಿಗಳ ಜಮೀನುಗಳಿಗೆ ಕಲ್ಮಡ್ಡಿ ಏತ ನೀರಾವರಿ ಸೌಲಭ್ಯ ದೊರೆಯಲಿದೆ ಎಂದು ಶಾಸಕ ಮತ್ತು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಶುಕ್ರವಾರ ಸಂಜೆ ತಾಲೂಕಿನ ತಳಕಟ್ನಾಳ ಗ್ರಾಮದ ಹತ್ತಿರ ಘಟಪ್ರಭಾ ನದಿಗೆ ಜಾಕವೆಲ್ ನಿರ್ಮಾಣ ಕಾಮಗಾರಿಯನ್ನು ವೀಕ್ಷಿಸಿ ಮಾತನಾಡಿದ ಅವರು, ರೈತರ ಬಹುದಿನಗಳ ಕನಸು ಇನ್ನು ಮೂರು ತಿಂಗಳೊಳಗೆ ನನಸಾಗಲಿದೆ ಎಂದು ಅವರು ಹೇಳಿದರು. ಸಣ್ಣ ನೀರಾವರಿ ಇಲಾಖೆಯಿಂದ …
Read More »ಸ್ವಾರ್ಥ ರಹಿತವಾಗಿ ಕೆಲಸ ಕಾರ್ಯಗಳನ್ನು ಸೇವಾ ಮನೋಭಾವನೆಯಿಂದ ಮಾಡಬೇಕು : ಬಿಇಒ ಅಜಿತ ಮನ್ನಿಕೇರಿ
ಮೂಡಲಗಿ: ಸ್ವಾರ್ಥ ರಹಿತವಾಗಿ ಸಾರ್ವಜನಿಕ ಜೀವನದಲ್ಲಿದ್ದಾಗ ತಮ್ಮಿಂದಾಗುವ ಕೆಲಸ ಕಾರ್ಯಗಳನ್ನು ಸೇವಾ ಮನೊಭಾವನೆಯಿಂದ ಮಾಡಬೇಕು. ವೃತ್ತಿ ಬದುಕಿನಲ್ಲಿ ವರ್ಗಾವಣೆ, ಪದೋನ್ನತಿ ಸಾಮಾನ್ಯವಾಗಿದ್ದು ಜನರ ನೌಕರ ಬಳಗದ ಹಿತವನ್ನಿಟ್ಟುಕೊಂಡು ಸೇವೆ ಮಾಡದಾಗ ಮಾತ್ರ ಸ್ವಾರ್ಥಕ ಬದುಕಿಗೆ ಅರ್ಥ ಬರುತ್ತದೆ ಎಂದು ಮೂಡಲಗಿ ಬಿಇಒ ಅಜಿತ ಮನ್ನಿಕೇರಿ ಹೇಳಿದರು. ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಜರುಗಿದ ನೂತನವಾಗಿ ಪದೋನ್ನತಿ ಹೊಂದಿ ತಾಲೂಕಾ ದೈಹಿಕ ಶಿಕ್ಷಣ ಪರಿವೀಕ್ಷಕರಾಗಿ ಆಗಮಿಸಿದ ಎ.ಎ ಜುನೇದಿ ಪಟೇಲ ಅವರ …
Read More »