ಬೆಂಗಳೂರು. ೦೧.ಮಾರ್ಚ. ಕೊವಿಡ್-೧೯ ಸಾಂಕ್ರಾಮಿಕವನ್ನು ಜಾಗತಿಕ ಪಿಡುಗು ಎಂದು ವಿಶ್ವ ಆರೋಗ್ಯ ಸಂಸ್ಥೆಯು ಘೋಷಿಸಿದ ಹಿನ್ನೆಲೆ, ಭಾರತ ಸೇರಿದಂತೆ, ೨೦೨ ದೇಶ/ಪ್ರದೇಶಗಳನ್ನು ಕೋವಿಡ್-೧೯ ಭಾದಿಸಿರುವ ಕಾರಣ ಅಂತರಾಷ್ಟ್ರೀಯ ಕಾಳಜಿಯ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ (PHEIC) ಎಂದು ಸಹ ವಿಶ್ವ ಆರೋಗ್ಯ ಸಂಸ್ಥೆಯು ಕರೆದಿರುವ ಕಾರಣದ ಹಿನ್ನೆಲೆಯಲ್ಲಿ ರೋಗ ತಡೆಗಟ್ಟವ ನಿಟ್ಟಿನಲ್ಲಿ ಸರ್ವೇಕ್ಷಣೆ ಮತ್ತು ಸಮೂಹ ನಿಯಂತ್ರಣ ಕಾರ್ಯತಂತ್ರಗಳನ್ನು ಕರ್ನಾಟಕ ರಾಜ್ಯ ಸರಕಾರ ಬಲಪಡಿಸಿದೆ.
ಕೋವಿಡ್-೧೯ ಪ್ರಕರಣಗಳು ಕಂಡುಬಂದ ರಾಜ್ಯದ ೯ ಜಿಲ್ಲೆಗಳಲ್ಲಿ ಸಾಮಾಜಿಕ ನಿರ್ಬಂಧಗಳನ್ನು (Lock Down) ಜಾರಿಗೊಳಿಸಿದ ಕಾರಣಗಳಿಂದಾಗಿ ಅನೇಕ ವಲಸೆ ಕಾರ್ಮಿಕರು / ದಿನಗೂಲಿ ನೌಕರರು ತಮ್ಮ ತಮ್ಮ ಸ್ವ-ಗ್ರಾಮಗಳಿಗೆ ತೆರಳಲು ಸಾದ್ಯವಾಗದೆ ಸರ್ಕಾರವು ಕಲ್ಪಿಸಿರುವ ತಾತ್ಕಾಲಿಕ ಶಿಬಿರಗಳಲ್ಲಿ ಉಳಿದುಕೊಂಡಿರುತ್ತಾರೆ. ಇಂತಹ ಶಿಬಿರಗಳಲ್ಲಿ ಸೋಂಕಿತ ವ್ಯಕ್ತಿಗಳಿದ್ದರೆ ಸ್ವತಃ ನರಳುವುದಲ್ಲದೆ ಪ್ರಥಮ ಮತ್ತು ದ್ವಿತೀಯ ಸಂಪರ್ಕಿತ ವ್ಯಕ್ತಿಗಳಿಗೂ ಕೂಡ ಕೋವಿಡ್-೧೯ ಸೋಂಕು ಹರಡುವ ಸಾಧ್ಯತೆ ಇರುವುದರಿಂದ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರು ಕೋವಿಡ್-೧೯ ನಿಯಂತ್ರನವಾಗಬೇಕಾದರೆ ಕ್ಲುಪ್ತವಾಗಿ ಎಲ್ಲಾ ಶಿಬಿರಾರ್ಥಿಗಳ ಆರೋಗ್ಯ ತಪಾಸಣೆಯನ್ನು ಪ್ರತಿದಿನ ಕೈಗೊಂಡು ಸೋಂಕಿತ / ಶಂಕಿತ ವ್ಯಕ್ತಿಗಳನ್ನು ಬೇರ್ಪಡಿಸಿ ಸೂಕ್ತ ವೈದ್ಯಕೀಯ ಚಿಕಿತ್ಸೆಗಾಗಿ / ಸಾಂಸ್ಥಿಕ ನಿರ್ಬಂಧನೆಗೆ ಸೇರಿಸಬೇಕಾಗಿರುವ ಕಾರಣ ಗುಣಮಟ್ಟದ ಅನುಷ್ಠಾನ ಕಾರ್ಯಾಚರಣೆ (SOPs) ಮೂಲಕ ಶಿಬಿರಗಳಲ್ಲಿರುವ ಕಾರ್ಮಿಕ ಕುಟುಂಬಗಳ ಆರೋಗ್ಯ ತಪಾಸಣೆ, ಚಿಕಿತ್ಸೆ, ರೆಫರಲ್ ಕಾರ್ಯವನ್ನು ಹಾಗೂ ಇದೇ ಸಂದರ್ಭದಲ್ಲಿ ಶಿಬಿರಗಳಲ್ಲಿರುವ ವೃದ್ದರು, ಗರ್ಭಿಣಿ, ಬಾಣಂತಿ ಮತ್ತು ಮಕ್ಕಳ ಸಾಮಾನ್ಯ ಆರೋಗ್ಯ ತಪಾಸಣೆಯನ್ನು ಹೆಚ್ಚಿನ ನಿಗಾದೊಂದಿಗೆ ಮಾಡಿ ಅಗತ್ಯವಿರುವ ಚಿಕಿತ್ಸೆಯನ್ನು ಕೈಗೊಳ್ಳಲು ಸುಚಿಸಿದ್ದಾರೆ.