ರಾಮದುರ್ಗ: ಜನವಿರೋಧಿ ಕೇಂದ್ರ ಹಾಗೂ ರಾಜ್ಯ ಸರಕಾರದ ಮೇಲಿರುವ ಸಿಟ್ಟನ್ನು ಹೊರ ಹಾಕಲು ಜನತೆಗೆ ಈ ಉಪಚುನಾವಣೆ ಅತ್ಯಂತ ಮಹತ್ವದ್ದಾಗಿದ್ದು,
ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ನೀಡುವ ಮೂಲಕ ಉಭಯ ಸರಕಾರಗಳಿಗೆ ಎಚ್ಚರಿಕೆ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತದಾರರಿಗೆ ಕರೆ ನೀಡಿದರು . ಪಟ್ಟಣದ ತೇರ ಬಜಾರದಲ್ಲಿ ಬೆಳಗಾವಿಯ ಲೋಕಸಭೆ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ಪರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ರಾಜ್ಯ ಮುಖ್ಯಮಂತ್ರಿಯಾಗಿರುವ ಯುಡಿಯೂರಪ್ಪ ಆಪರೇಶನ್ ಕಮಲ ಮಾಡಲು ಒಬ್ಬ ಶಾಸಕನಿಗೆ 40 ಕೋಟಿಯಂತೆ 17 ಜನ ಶಾಸಕರಿಗೆ 600 ಕೋಟಿ ಎಲ್ಲಿಂದ ತಂದರು . ಇವರು ಭ್ರಷ್ಟಾಚಾರ ಮಾಡಲಿಕ್ಕೆ ಅಧಿಕಾರ ಪಡೆದುಕೊಂಡಿದ್ದಾರೆ ಎನಃ ಜನ ಕಲ್ಯಾಣಕ್ಕಾಗಿ ಅಲ್ಲಾ ಎಂದು ಆರೋಪಿಸಿದರು . ದ್ವಿಗುಣಗೊಳಿಸುವದಾಗಿ ಹೇಳುವ ಮೋದಿಯವರು ಇಂದು ರಸಗೊಬ್ಬರ ಬೆಲೆಯನ್ನು ಸಿಕ್ಕಾಪಟ್ಟೆ ಏರಿಸಿ ಕ್ವಿಂಟಾಲ್ ಡಿಎಪಿ 1400 ರೂ . , ಪೋಟ್ಯಾಶ್ 1250 ರೂ.ಗೆ ಏರಿಸಿ ರೈತರು ಆದಾಯ
ಕೊಂಡುಕೊಳ್ಳಲು ಆಗದ ಪರಿಸ್ಥಿತಿಗೆ ತಂದಿದ್ದಾರೆ .
ಇಂತಹ ಸ್ಥಿತಿಯಲ್ಲಿ ರೈತರು ಬದುಕಲು ಸಾಧ್ಯವೇ ಎಂದು ಪ್ರಶ್ನಿಸಿದರು . ರಾಜ್ಯದಲ್ಲಿಂದು ಅಭಿವೃದ್ಧಿ ಕಾರ್ಯಗಳೇ ನಿಂತುಹೋಗಿವೆ . ಮನೆ ಕಟ್ಟಲು ಅನುದಾನ ಕೊಡಿ ಎಂದರೆ, ನೀರಾವರಿಗೆ ಕೊಡಿ ಎಂದರೆ ಕೊರೋನಾ , ರಸ್ತೆಗೆ ಅನುದಾನ ಕೊಡಿ ಎಂದರೆ ಕೊರೊನಾ ಕಥೆ ಹೇಳಿ ರಾಜ್ಯದ ಖಜಾನೆಯನ್ನೇ ಖಾಲಿ ಮಾಡಿದ್ದಾರೆ ಎಂದರು,
ಕಾಂಗ್ರೆಸ್ ಸೇರಿದ ಮುಖಂಡರು : ತಾ.ಪಂ ಮಾಜಿ ಅಧ್ಯಕ್ಷೆ ಮಂಜುಳಾ ದೇವರಡ್ಡಿ ಸದಸ್ಯ ಶಿವಪ್ಪ ಮೇಟಿ , ಮುಖಂಡ ಸಿ.ಬಿ. ಪಾಟೀಲ , ಸಾಲಾಪೂರ ಪಿಕೆಪಿಎಸ್ ಅಧ್ಯಕ್ಷ ಗಿರೀಶ ಹಂಪಿಹೊಳಿ , ಇತರರು ಕಾಂಗ್ರೆಸ್ ಸೇರ್ಪಡೆಯಾದರು.
ಮಾಜಿ ಕೇಂದ್ರ ಸಚಿವ ಕೆ.ಎಚ್ . ಮುನಿಯಪ್ಪ ಮಾಜಿ ಸಚಿವರಾದ ಎಂ.ಬಿ. ಪಾಟೀಲ , ಅಲ್ಲೊಡ ಹನಮಂತಪ್ಪ ಅಭ್ಯರ್ಥಿ ಸತೀಶ ಜಾರಕಿಹೊಳಿ , ಮಾಜಿ ಶಾಸಕ ಅಶೋಕ ಪಟ್ಟಣ ಸೇರಿದಂತೆ ಮುಂತಾದವರು ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಪ್ರಕಾಶ ರಾಠೋಡ , ಮಾಜಿ ಶಾಸಕರಾದ ಬಿ.ಆರ್.ಯಾವಗಲ್ಲ ವಿಜಯಾನಂದ ಕಾಶಪ್ಪನವರ, ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಕಾರ್ಯಕರ್ತರಿಗೆ ಮುಖಂಡರ ಉಪಸ್ಥಿತರಿದ್ದರು .
ವರದಿ : ಶ್ರೀಕಾಂತ್ ಪೂಜಾರ್ ರಾಮದುರ್ಗ