ರಾಮದುರ್ಗ: ಬೆಳಗಾವಿ ಜಿಲ್ಲೆಯ ಲೋಕಸಭಾ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಶ್ರೀಮತಿ ಮಂಗಳಾ ಸುರೇಶ್ ಅಂಗಡಿ ಅವರ ರಾಮದುರ್ಗ ವಿಧಾನಸಭಾ ಕ್ಷೇತ್ರ ಪ್ರಚಾರಾರ್ಥ ಸಭೆಯನ್ನು ರಾಮದುರ್ಗ ತಾಲೂಕಿನ ಸಾಲಹಳ್ಳಿ ಗ್ರಾಮದ ಬಬಲಾದಿ ಮಠದ ಆವರಣದಲ್ಲಿ ಪ್ರಚಾರ ಸಭೆ ಜರುಗಿತು. ಈ ಸಭೆಯ ಉದ್ಘಾಟನೆಯನ್ನು ಸನ್ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪರವರು ಮತ್ತು ಸಂಸದಿಯ ವ್ಯವಹಾರ ಸಚಿವರುರಾದ ಪ್ರಲ್ಹಾದ ಜೋಶಿ ಮತ್ತು ವೇದಿಕೆಯ ಮೇಲೆ ಹಾಜರಿದ್ದ ಗಣ್ಯರಿಂದ ಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಲಾಯಿತು.
ಸನ್ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪರವರು ಮಾತನಾಡಿ ನಮ್ಮ ಪಕ್ಷದಿಂದ ಈಗ ಒಂದು ಒಳ್ಳೆಯ ಸಂದರ್ಭ ಇರುವ ಕಾರಣ ಶ್ರೀ ಸುರೇಶ್ ಅಂಗಡಿ ಅವರ ಧರ್ಮ ಪತ್ನಿಯಾದ ಮಂಗಳಾ ಸುರೇಶ್ ಅಂಗಡಿಯವರಿಗೆ ತಾವು ನಿಲ್ಲಬೇಕು ಎಂದು ಒತ್ತಾಯಮಾಡಿ ನಿಲ್ಲಿಸಿದ್ದೇವೆ.ನನಗೆ ವಿಶ್ವಾಸವಿದೆ ರಾಮದುರ್ಗದಿಂದ 50,000 ಮತವನ್ನು ನೀಡಿ ಮತ್ತು ಸುಮಾರು ಎರಡುವರೆ ಲಕ್ಷ 3 ಲಕ್ಷದವರೆಗೆ ಬಿಜೆಪಿಗೆ ಮತ ನೀಡಿ ಗೆಲ್ಲಿಸುತ್ತಿರಿ ಮತ್ತು ನಮ್ಮ ಪಕ್ಷದ ಪ್ರತಿನಿಧಿಯಾಗಿ ಹಾಗೂ ನರೇಂದ್ರ ಮೋದಿಯವರ ಕೈ ಬಲಪಡಿಸುವ ಸಲುವಾಗಿ ಕಾರ್ಯಕರ್ತರು ತಾವೆಲ್ಲರೂ ಮನೆಮನೆಗೆ ಹೋಗಿ ಜೊತೆಗೆ ಕರೆದುಕೊಂಡು 90 ರಷ್ಟು ಮತವನ್ನು ಮಾಡಿಸುವಲ್ಲಿ ದುಡಿಯಬೇಕು.
ಸುರೇಶ್ ಅಂಗಡಿಯವರು ಕೇಂದ್ರ ರೈಲ್ವೆ ಸಚಿವರಾಗಿ ಅಪಾರ ಸಂಖ್ಯೆಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು ಇನ್ಮುಂದೆ ಮಂಗಳ ಸುರೇಶ್ ಅಂಗಡಿ ಅವರಿಗೆ ಆರಿಸಿ ತಂದಿದ್ದೇ ಆದರೆ ಬೆಳಗಾವಿ ಕ್ಷೇತ್ರದಲ್ಲಿ ಯಾವ್ಯಾವ ಕೆಲಸವನ್ನು ಮಾಡಬೇಕು ಎಂದು ಹೇಳುತ್ತಾರೋ ಅವರಿಗೆ ಎಲ್ಲಾ ಕೆಲಸವನ್ನು ಮಾಡಿ ಕೊಡುತ್ತೇನೆ ಎಂದು ಭರವಸೆ ನೀಡಿದರು.
ಕರ್ನಾಟಕದಲ್ಲಿ ಭಾಗ್ಯಲಕ್ಷ್ಮಿ ಯೋಜನೆ. ಕಿಸಾನ್ ಸಮ್ಮಾನ ಯೋಜನೆ.ಹೀಗೆ ಹಲವಾರು ಯೋಜನೆಗಳನ್ನು ಯಡಿಯೂರಪ್ಪ ಸರ್ಕಾರ ತಂದಿದ್ದು ಮುಂಬರುವ ದಿನಮಾನಗಳಲ್ಲಿ ಮತ್ತೆ ಹಲವು ಉಪಯುಕ್ತ ಯೋಜನೆಗಳನ್ನು ತರಲಾಗುವುದು ಎಂದು ಈ ಸಂದರ್ಭದಲ್ಲಿ ನುಡಿದರು.
ಈ ಸಂದರ್ಭದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಇಲಾಖೆ ಸಚಿವರಾದ ಜಗದೀಶ್ ಶೆಟ್ಟರ್. ಆಹಾರ ಮತ್ತು ನಾಗರಿಕ ಸರಬರಾಜು ಸಚಿವರು ಉಮೇಶ್ ಕತ್ತಿ. ಬೆಳಗಾವಿ ಲೋಕಸಭಾ ಅಭ್ಯರ್ಥಿ ಮಂಗಳ ಸುರೇಶ್ ಅಂಗಡಿ. ತಾಂಡ ಅಭಿವೃದ್ಧಿ ನಿಗಮ ಮತ್ತು ಕುಡಚಿ ಮತಕ್ಷೇತ್ರದ ಶಾಸಕರಾದ ಶ್ರೀ ಪಿ.ರಾಜೀವ್. ಸಿ.ಸಿ ಪಾಟೀಲ್. ಸುನಂದ ಪಾಟೀಲ್.ಮಾಜಿ ಸಂಸದರಾದ ಅಮರ್ ಸಿಂಗ್ ಪಾಟೀಲ. ಧನಲಕ್ಷ್ಮಿ ಶುಗರ್ಸ್ ಅಧ್ಯಕ್ಷರು ಮಲ್ಲಣ್ಣ ಯಾದವಾಡ. ಬಿಜೆಪಿ ರಾಮದುರ್ಗ ಮಂಡಳ ಅಧ್ಯಕ್ಷರು ರಾಜೇಶ್ ಬಿಳಗಿ. ಹೀಗೆ ಬಿಜೆಪಿ ಪಕ್ಷದ ಶಾಸಕರು.ಸಚಿವರು.ಮುಖಂಡರು ಸೇರಿದಂತೆ ಬಿಜೆಪಿ ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನ ಬಳಗದವರು ಉಪಸ್ಥಿತರಿದ್ದರು.
ವರದಿ : ಶ್ರೀಕಾಂತ್ ಪೂಜಾರಿಯ ರಾಮದುರ್ಗ