ಶುಕ್ರವಾರ , ನವೆಂಬರ್ 15 2024
kn
Breaking News

ಬಡಕುಟುಂಬಗಳಿಗೆ ನೆರವಾದ ಖ್ಯಾತ ಉದ್ಯಮಿ ಮತ್ತು ಸಮಾಜಸೇವಕರಾದ ಚಿಕ್ಕ ರೇವಣ್ಣನವರು

Spread the love

ರಾಮದುರ್ಗ: ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕು “ಹಸಿದವರಿಗೆ ಅನ್ನ” ಎಂಬ ಕಾರ್ಯಕ್ರಮದ ಮೂಲಕ ಬಡಕುಟುಂಬಗಳಿಗೆ 500 ದಿನಸಿ ಕಿಟ್ ಹಾಗೂ ಮೆಡಿಕಲ್ ಕೀಟಗಳನ್ನು ಶ್ರೀ ಮನಸೂರು ರೇವಣಸಿದ್ದೇಶ್ವರಮ ಹಾಸ್ವಾಮಿಗಳು, ಧಾರವಾಡ, ಶ್ರೀ ಶ್ರೀ ಶ್ರೀ ಜಗನ್ಮಾನಂದ ಮಹಾಸ್ವಾಮಿಗಳು ಸಿದ್ದಾರೂಢ ಮಠ, ರಾಮದುರ್ಗ ರವರ ಪೂಜ್ಯರ ಸಮ್ಮುಖದಲ್ಲಿ ವಿತರಿಸಿದರು.

ಕೋವಿಡ್ ಎರಡನೇ ಅಲೆಯಿಂದ ಆದಷ್ಟು ಉದ್ಯಮಿಗಳು ನೆಲಕಚ್ಚಿದ್ದು ಹಲವು ಕಾರ್ಮಿಕರ ಬಡ ಕುಟುಂಬಗಳು ಬೀದಿಗೆ ತಂದು ನಿಲ್ಲಿಸಿದೆ. ಅದರಲ್ಲೂ ಲಾಕ್ ಡೌನ್ ಹೊಡೆತಕ್ಕೆ ರಾಜ್ಯದ ಸಾವಿರಾರು ಬಡ ಕುಟುಂಬಗಳು ಕೆಲಸವಿಲ್ಲದೆ ತತ್ತರಿಸಿಹೋಗಿದ್ದು ಚೇತರಿಸಿಕೊಳ್ಳಲಾಗದ ಸ್ಥಿತಿಗೆ ತಲುಪಿದ್ದಾರೆ ಇಂತಹ ಬಡ ಕುಟುಂಬಗಳಿಗೆ ಖ್ಯಾತ ಉದ್ಯಮಿ ಹಾಗೂ ಸಮಾಜಸೇವಕರಾದ ಚಿಕ್ಕ ರೇವಣ್ಣನವರು ರಾಮದುರ್ಗ ಪಟ್ಟಣದ ಬಡಕುಟುಂಬಗಳಿಗೆ 500 ದಿನಸಿ ಕಿಟ್ ಹಾಗೂ ಮೆಡಿಕಲ್ ಕಿಟ್ ಗಳನ್ನು ವಿತರಿಸಿದರು.

ರಾಮದುರ್ಗ ತಾಲೂಕಿನಾದ್ಯಂತ ಪ್ರತಿ ನಿತ್ಯ 2 ಸಾವಿರ ಊಟದ ಪಾಕೇಟ್
ವಿತರಣೆ ಮಾಡಲಾಗುತ್ತಿದೆ.

ರಾಮದುರ್ಗ ತಾಲೂಕಿನಾದ್ಯಂತ ಪ್ರತಿ ದಿನವು 2 ಸಾವಿರ ಕುಡಿಯುವ ನೀರನ ಬಾಟಲ್ ವಿತರಣೆ ಮಾಡಲಾಗುತ್ತಿದೆ.

ತಾಲೂಕಿನಾದ್ಯಂತ ಪ್ರತಿನಿತ್ಯವು ಪ್ರತಿ ಹಳ್ಳಿಗಳಿಗೂ ಸಂಚರಿಸಿ ಮಾಸ್ಕ ಗಳನ್ನು ವಿತರಣೆ ಮಾಡಲಾಗುತ್ತಿದೆ.

500 ಬಡ ಕುಟುಂಬಗಳಿಗೆ ದಿನಸಿ ಸಾಮಗ್ರಿಗಳ ಕಿಟ್ ವಿತರಣೆ ಮಾಡಿದರು.ಈ ಒಂದು ರೇಷನ್ ಕಿಟ್‌ಗೆ 5 ಕೆ.ಜಿ. ಅಕ್ಕಿ, 1 ಕೆ.ಜಿ. ತೊಗರಿ ಬೆಳೆ, 1 ಕೆ.ಜಿ. ಗೋದಿ ಹಿಟ್ಟು, 1ಕೆ.ಜಿ. ಸಕ್ಕರೆ, 1 ಕೆ.ಜಿ. ಅಡುಗೆ ಎಣ್ಣೆ, 1 ಟೀ ಪುಡಿ, 1 ಸ್ನಾನದ ಸೋಪು, 1 ಬಟ್ಟೆ ಸೋಪು, ಈ ಎಲ್ಲಾ ದಿನಸಿ ಸಾಮಗ್ರಿಗಳನ್ನು ಒಂದು ಆಹಾರದ ಕಿಟ್ ಮಾಡಿ ಪ್ರತಿ ಬಡವರ
ಮನೆಗೆ 1 ಕಿಟ್‌ನಂತೆ ವಿತರಣೆ ಮಾಡಿದರು. _500 ಬಡ ಕುಟುಂಬಗಳಿಗೆ ಮೆಡಿಕಲ್ ಕಿಟ್ (ಸ್ಟೀಮರ್ ) ವಿತರಿಸಿದರು.

ಈ ಒಂದು ಕಾರ್ಯಕ್ರಮದಲ್ಲಿ ‘ಶ್ರೀ ಚಿಕ್ಕರೇವಣ್ಣರವರು
ಆಪ್ತರಾದ ಶಿವಾನಂದ ಮುತ್ತನ್ನವರ ಎಸ್.ಸಿ.ಎಸ್.ಟಿ.ರಾಜ್ಯ ಕಾರ್ಯದರ್ಶಿಗಳು ಹುಬ್ಬಳ್ಳಿ, ರಾಮದುರ್ಗದ ಮುಖಂಡರಾದ ಬಿ.ಆರ್ ದೊಡಮನಿ, ಅಪ್ಪಣ್ಣ ರಾಮದುರ್ಗ, ಎಮ್.ಡಿ.ಬಾವಾ, ಸಿಕಂದರ ಮಹತ್, ಬಸಪ್ಪ ಶೇಡಬಾಳ, ನಿಂಗಣ್ಣ ಕರಿಗಾರ, ಸುಮಿತ್ರಾ ಹಣಮನೇರಿ, ಬಾಲಾಪ್ಪ ತುರನೂರ ಹಾಗೂ ಇನ್ನೂ ಅನೇಕ ಶ್ರೀ ಚಿಕ್ಕರೇವಣ್ಣರವರ ಆಪ್ತ ಕಾರ್ಯದರ್ಶಿ ಮಾಲಿಂಗರಾಯ ಹಾಗೂ ಚಿಕ್ಕ ರೇವಣ್ಣನವರ ಅಭಿಮಾನಿ ಬಳಗದವರು ಪಾಲ್ಗೊಂಡಿದ್ದರು.

ವರದಿ. ಶ್ರೀಕಾಂತ ಪೂಜಾರ್ ರಾಮದುರ್ಗ


Spread the love

About gcsteam

Check Also

ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಆಗ್ರಹಿಸಿ ಮೂಡಲಗಿಯಲ್ಲಿ ಪ್ರತಿಭಟನೆ

Spread the loveಮೂಡಲಗಿ: ಅರಭಾವಿ ಕ್ಷೇತ್ರದ ಶಾಸಕರು ಹಾಗೂ ಕೆ.ಎಮ್.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಉಪ್ಪಾರ ಸಮಾಜದ ಮೀಸಲಾತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page