ಶುಕ್ರವಾರ , ನವೆಂಬರ್ 15 2024
kn
Breaking News

ಕರೋನಾ ವಾರಿಯರ್ಸ್ ರಿಗೆ ದಿನಸಿ ಕಿಟ್ ವಿತರಿಸಿದ ಸಮಾಜ ಸೇವಕ ಚಿಕ್ಕ ರೇವಣ್ಣನವರ

Spread the love

ಕಡಕೋಳ: ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕು ಕಡಕೋಳ ದಲ್ಲಿ ಇಂದು ದಿನಾಂಕ 28/05/2021 ರಂದು ಚಿಕ್ಕ ರೇವಣ್ಣನವರು ಖ್ಯಾತ ಉದ್ಯಮಿಗಳು ಶಿಕ್ಷಣ ಪ್ರೇಮಿ ಹಾಗೂ ಸಮಾಜ ಸೇವಕರು ರಾಮದುರ್ಗ ಇವರ ನೇತೃತ್ವದಲ್ಲಿ ಕೋರೋಣ ಮಹಾಮಾರಿಯ ವಿರುದ್ಧ ತಮ್ಮ ಜೀವನವನ್ನು ಲೆಕ್ಕಿಸದೆ ಹಗಲು ಇರುಳು ಎನ್ನದೆ ಹೋರಾಡುತ್ತಿರುವ ಪೌರಕಾರ್ಮಿಕರಿಗೆ ,ಆಶಾ ಕಾರ್ಯಕರ್ತೆಯರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ, ಕೋರೋಣ ವಾರಿಯರ್ಸ್ ರಿಗೆ ಹಾಗೂ ಬಡಜನರಿಗೆ ದಿನಸಿ ಕಿಟ್ ವಿತರಣೆ ಮಾಡಲಾಯಿತು.

ಲಾಕ್ ಡೌನ್ ಆದಾಗಿನಿಂದ ಸತತವಾಗಿ 31 ದಿನಗಳಿಂದ ಹಸಿದವರಿಗೆ ಅನ್ನ ಎಂಬ ಯೋಜನೆ ಅಡಿಯಲ್ಲಿ ಬೆಳಗ್ಗೆ ಹಾಗೂ ಮಧ್ಯಾಹ್ನ ರಾಮದುರ್ಗ ತಾಲೂಕಿನಾದ್ಯಂತಹ ಪ್ರತಿನಿತ್ಯ 2000 ಊಟದ ಪಾಕೇಟ್ ಹಾಗೂ 2000 ಕುಡಿಯುವ ನೀರಿನ ಬಾಟಲ್ ಮತ್ತು ರಾಮದುರ್ಗ ತಾಲ್ಲೂಕಿನಾದ್ಯಂತಹ ಪ್ರತಿ ಹಳ್ಳಿಗಳಿಗೂ ಸಂಚರಿಸಿ ಮಾಸ್ಕ ಗಳನ್ನು ವಿತರಿಸಿದರು.

ಮುಂದಿನ ಸರ್ಕಾರದ ಲಾಕ್ ಡೌನ್ ಆದೇಶದವರೆಗೆ ಯಾವುದೇ ಜಾತಿ ಧರ್ಮ ಭೇದಭಾವ ಮಾಡದೆ ಜನರಿಗೆ ಕುಡಿಯುವ ನೀರು ಮತ್ತು ಊಟದ ವ್ಯವಸ್ಥೆ ಹಾಗೂ ಇದರ ಜೊತೆಗೆ ಮಾಸ್ಕ ಗಳನ್ನು ವಿತರಿಸಲಾಗುವುದು.

ಕೋವಿಡ್ 19 , 2ನೇ ಅಲೆಯ ಲಾಕ್ ಡೌನ್ ಸಂದರ್ಭದಲ್ಲಿ ಜನರಿಗೆ ಕೆಲಸವಿಲ್ಲದೇ ತಮ್ಮ ಜೀವನವನ್ನು ನಡೆಸಲು ತುಂಬಾ ಕಷ್ಟಕರವಾಗಿದ್ದು ಇಂತಹ ಸಮಯದಲ್ಲಿ ಖ್ಯಾತ ಉದ್ಯಮಿಗಳಾದ ಚಿಕ್ಕ ರೇವಣ್ಣನವರು ರಾಮದುರ್ಗ ತಾಲೂಕಿನಾದ್ಯಂತಹ 30 ಸಾವಿರ ಕುಟುಂಬಗಳಿಗೆ ದಿನಸಿ ಸಾಮಗ್ರಿಗಳ ಕಿಟ್ ವಿತರಣೆ ಮಾಡಲಾಗುವುದು.

ಈ ಒಂದು ದಿನಸಿ ಕಿಟ್ ನಲ್ಲಿ 5 ಕೆಜಿ ಅಕ್ಕಿ ,1 ಕೆಜಿ ತೊಗರಿಬೇಳೆ, 1 ಕೆಜಿ ಗೋಧಿ ಹಿಟ್ಟು ,1 ಕೆಜಿ ಸಕ್ಕರೆ , 1 ಕೆಜಿ ಅಡುಗೆ ಎಣ್ಣೆ, 1 ಪಾಕೇಟ್ ಚಹಾಪುಡಿ ,ಬಟ್ಟೆ ಸೋಪು ,ಸ್ನಾನದ ಸೋಪು, ಈ ಎಲ್ಲಾ ದಿನಸಿ ಸಾಮಗ್ರಿಗಳನ್ನು ಒಂದು ಆಹಾರದ ಕಿಟ್ ಮಾಡಿ ಪ್ರತಿ ಬಡವರ ಮನೆಗೆ ವಿತರಣೆ ಮಾಡಲಾಗುತ್ತದೆ.

ಈ ಸಂದರ್ಭದಲ್ಲಿ ಕೋವಿಡ್-19 2ನೇ ಅಲೆಯು ದಿನೇದಿನೇ ಹೆಚ್ಚಾಗುತ್ತಿರುವುದರಿಂದ ಜನರಿಗೆ ಅನುಕೂಲವಾಗಲಿ ಎಂದು 30 ಸಾವಿರ ಕುಟುಂಬಗಳಿಗೆ ಸ್ಟೀಮರ್ ವಿತರಣೆ ಮಾಡಲಾಗುವುದು.

ಮುಂದಿನ ದಿನಗಳಲ್ಲಿ ಕೋರೋನಾ ಮಹಾಮಾರಿಯು 3ನೇ ಅಲೆಯು ಪ್ರಾರಂಭವಾಗಿ ಮಕ್ಕಳಲ್ಲಿ ಬರುವುದು ಎಂಬ ಮಾಹಿತಿಯನ್ನು ತಜ್ಞರು ನೀಡಿರುವುದರಿಂದ ಈ ಭೀಕರವಾದ ಮಹಾಮಾರಿಯನ್ನು ತಪ್ಪಿಸಿಕೊಳ್ಳಲು ಬಿಸಿನೀರಿನ ಹವೆಯನ್ನು ತೆಗೆದುಕೊಳ್ಳುವುದೊಂದೇ ದಾರಿಯೆಂದು ರಾಮದುರ್ಗ ತಾಲೂಕಿನಾದ್ಯಂತಹ ಪ್ರತಿ ಕುಟುಂಬಕ್ಕೆ ಒಂದು ಸ್ಟೀಮರ್ ನಂತೆ 30 ಸಾವಿರ ಮೆಡಿಕಲ್ ಕಿಟ್ ಕೊಡಲಾಗುವುದು. ಹಾಗೂ ಬಡವರು ದೀನದಲಿತರು ಕೂಲಿಕಾರ್ಮಿಕರು, ರೈತಬಾಂಧವರು, ಕಂಬಾರ, ನೇಕಾರ, ಕುಂಬಾರ ,ಸಮಗಾರ, ಬಡಿಗೇರ, ಪತ್ತಾರ ಹೀಗೆ ಮುಂತಾದ ಕುಲಕಸಬು ಮಾಡುತ್ತಿರುವ ಎಲ್ಲಾ ವರ್ಗದ ಜನರು ಕೊರೋನಾ ಸೇವಾ ಕಾರ್ಯಕರ್ತರು ,ಆರೋಗ್ಯ ಇಲಾಖೆಯವರು, ಪೋಲಿಸ್ ಸಿಬ್ಬಂದಿವರ್ಗದವರು, ಸಾರ್ವಜನಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವವರು, ಯಾರೂ ಸಹ ಹಸಿದು ಮಲಗಬಾರದು ಎಂದು ನನ್ನ ಕೈಯಲ್ಲಿ ಶಕ್ತಿಯಿದ್ದಷ್ಟು ದಿನಸಿ ಕಿಟ್ ವಿತರಣೆ ಮಾಡಲಾಗುವುದು.

ಈಗಾಗಲೇ 5 ಸಾವಿರ ಮೆಡಿಕಲ್ ಕಿಟ್ ಹಾಗೂ 5 ಸಾವಿರ ದಿನಸಿ ಸಾಮಗ್ರಿಗಳ ಕಿಟ್ ನ್ನು ವಿತರಿಸುವ ಮೂಲಕ ಈ ಕಾರ್ಯವು ನನ್ನ ಅಭಿಮಾನಿ ಬಳಗ ದಿಂದ ಪ್ರಾರಂಭವಾಗಿದ್ದು ರಾಮದುರ್ಗ ತಾಲೂಕಿನಲ್ಲಿ ಇನ್ನೂ ಸುಮಾರು 30 ಸಾವಿರ ಕುಟುಂಬಗಳಿಗೆ ದಿನಸಿ ಕಿಟ್ ಮತ್ತು ಮೆಡಿಕಲ್ ಕಿಟ್ ವಿತರಣೆ ಮಾಡಲಾಗುವುದು.

ರಾಮದುರ್ಗ ತಾಲೂಕಿನ ಸಮಸ್ತ ಜನತೆಗೆ ಖ್ಯಾತ ಉದ್ದಿಮೆಗಳಾದ ಚಿಕ್ಕ ರೇವಣ್ಣನವರ ನಿವೇದನೆ.

ಮಾನವ ಜನ್ಮ ಶ್ರೇಷ್ಠವಾದದ್ದು ಮತ್ತು ಅಮೂಲ್ಯವಾದದ್ದು ಜಗತ್ತಿನ ತುಂಬೆಲ್ಲ ಯಾರೂ ನಿರೀಕ್ಷಿಸದ ಕೋರೋಣ ಎಂಬ ಮಹಾಮಾರಿ ಸಾಂಕ್ರಾಮಿಕ ರೋಗವು ವ್ಯಾಪಿಸಿ ಮನು ಕುಲಕ್ಕೆ ಕಂಟಕ ವಾಗಿರುವುದು ತಮಗೆಲ್ಲ ತಿಳಿದ ವಿಷಯವಾಗಿದೆ ಹಾಗೂ ದುಃಖದ ಸಂಗತಿಯಾಗಿದೆ.

ರಾಮದುರ್ಗ ತಾಲೂಕಿನ ನನ್ನ ಜನತೆಯ ಸ್ವಯಂ ಪ್ರೇರಿತವಾಗಿ ಹಾಗೂ ಸಾಮಾಜಿಕ ಜವಾಬ್ದಾರಿಯಿಂದ ಅನಾವಶ್ಯಕವಾಗಿ ಮನೆಯಿಂದ ಹೊರಗೆ ಬಾರದೆ ಮನೆಯಲ್ಲಿ ಇದ್ದು ಅಗತ್ಯವಾದರೆ ಮಾತ್ರ ಮನೆಯಿಂದ ಹೊರಬಂದು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುತ್ತಾ ಮಾಸ್ಕ್ ಮತ್ತು ಸ್ಯಾನಿಟೈಸರ್ ಬಳಸುತ್ತಾ ಸ್ವಚ್ಛತೆಗೆ ಹೆಚ್ಚಿನ ಮಹತ್ವ ಕೊಟ್ಟು ವಿಶೇಷವಾಗಿ ಪ್ರತಿಯೊಬ್ಬರು ವ್ಯಾಕ್ಸಿನ್ ತೆಗೆದುಕೊಂಡು ಮಹಾಮಾರಿ ಯಾದ ಕೋರೋನಾ ವನ್ನು ಹೋಗಲಾಡಿಸೋಣ.

ಕೋರೋಣ ವಾರಿಯರ್ಸ್ ಗಂಟಲಿನಲ್ಲಿ ಸರಿ ಸುಮಾರು 3ರಿಂದ 4 ದಿನಗಳ ಕಾಲ ಇರುವುದರಿಂದ ಕುಟುಂಬದ ಸದಸ್ಯರೆಲ್ಲರೂ ಸ್ವಯಂಪ್ರೇರಿತರಾಗಿ ಒಂದು ದಿನಕ್ಕೆ ನಾಲ್ಕು ಬಾರಿ ಬಿಸಿನೀರಿನ ಹವೆಯನ್ನು ಬಾಯಲ್ಲಿ ತೆಗೆದುಕೊಂಡು ಮೂಗಿನಲ್ಲಿ ಬಿಡುವುದು ಮತ್ತು ಮೂಗಿನಲ್ಲಿ ತೆಗೆದುಕೊಂಡು ಬಾಯಲ್ಲಿ ಬಿಡುವುದರಿಂದ ಶ್ವಾಸಕೋಶಕ್ಕೆ ತಲುಪದೇ ಗಂಟಲಿನಲ್ಲಿ ಅಥವಾ ಮೂಗಿನಲ್ಲಿ ಕರೋನಾವೈರಸ್ ಸಾವನ್ನಪ್ಪುವುದರಿಂದ ಕೋರೋನಾ ಎಂಬ ಮಹಾಮಾರಿಯನ್ನು ಓಡಿಸಬಹುದು. ಈ ರೀತಿಯಾಗಿ ಪ್ರತಿ ದಿನಕ್ಕೆ ನಾಲ್ಕು ಬಾರಿ ಹತ್ತು ನಿಮಿಷದಷ್ಟು ಮಾಡಿದರೆ ಕೋರೋನಾ ಮುಕ್ತ ರಾಮದುರ್ಗ ವನ್ನಾಗಿ ಮಾಡುವ ಮಹಾದಾಸೆಯನ್ನು ಹೊಂದಿರುತ್ತೇನೆ ಎಂದು ಖ್ಯಾತ ಉದ್ಯಮಿಗಳಾದ ಚಿಕ್ಕ ರೇವಣ್ಣನವರು ಸಾರ್ವಜನಿಕರಲ್ಲಿ ಮನವರಿಕೆ ಹೇಳಿದರು.

ಈ ಒಂದು ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ಬಸವ ಮೃತ್ಯುಂಜಯ ಮಹಾಸ್ವಾಮಿಗಳು ಪಂಚಮಸಾಲಿ ಪೀಠ, ಶ್ರೀ ಜಗದಾತ್ಮಾನಂದ ಸ್ವಾಮೀಜಿ ಸಿದ್ಧಾರೂಢಮಠ ರಾಮದುರ್ಗ, ಪರಮಪೂಜ್ಯ ಶ್ರೀ ಕೃಷ್ಣಾನಂದ ಮಹಾಸ್ವಾಮಿಗಳು, ಮಹಾದೇವಪ್ಪ ಕಾಮಣ್ಣವರ, ರಾಮದುರ್ಗದ ಸಿಪಿಐ ಶಶಿಕಾಂತ್ ವರ್ಮಾ, ಬಿ ಆರ್ ದೊಡ್ಡಮನಿ, ಬಿ ಎಸ್ ಶೇಡಬಾಳ, ನಿಂಗಪ್ಪ ಕರಿಗಾರ್,ಎಮ್ ಡಿ ಬಾವಾ, ಅಪ್ಪಣ್ಣ ರಾಮದುರ್ಗ ಹಾಗೂ ಚಿಕ್ಕ ರೇವಣ್ಣನವರ ಅಭಿಮಾನಿ ಬಳಗದವರು ಭಾಗವಹಿಸಿದ್ದರು.

ವರದಿ. ಶ್ರೀಕಾಂತ ಪೂಜಾರ್ ರಾಮದುರ್ಗ


Spread the love

About gcsteam

Check Also

ತಮ್ಮ ಸ್ವಂತ ವೆಚ್ಚದಲ್ಲಿ ಅರಭಾವಿ ಕ್ಷೇತ್ರದಲ್ಲಿ ಜಾನುವಾರುಗಳ ಚರ್ಮ ಗಂಟು ರೋಗದ ಕಿಟ್‌ಗಳನ್ನು ವಿತರಿಸಿದ ಬಾಲಚಂದ್ರ ಜಾರಕಿಹೊಳಿ

Spread the loveಗೋಕಾಕ : ಜಾನುವಾರುಗಳಿಗೆ ಚರ್ಮ ಗಂಟು ರೋಗ ಹರಡುತ್ತಿದ್ದು, ಹಳ್ಳಿಗಳಿಗೆ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಜಾನುವಾರುಗಳನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page