ಪರಮಾನಂದವಾಡಿ:- ಸ್ಥಳೀಯ ಗ್ರಾ ಪಂ ಕಾರ್ಯಾಲಯದಲ್ಲಿ ಸಂವಿಧಾನ ಶಿಲ್ಪಿ ಡಾ|| ಬಾಬಾಸಾಹೇಬ್ ಅಂಬೇಡ್ಕರ್ 129 ನೇಯ ಜಯಂತಿಯನ್ನು ಆಚರಿಸಲಾಯಿತು. ನಂತರ ಗ್ರಾ ಪಂ ಅಧ್ಯಕ್ಷ ಬಾಹುಬಲಿ ಗಂಡೋಶಿ- ದೇಶವೆ ಕೋರೋನಾ ಕಿಚ್ಚಿನಿಂದ ಉರಿಯುತ್ತಿದೆ.ನಮ್ಮ ಜನ ಬಹಳಷ್ಟು ಎಚ್ಚರಿಕೆಯಿಂದ ಇರಬೇಕಾಗಿದೆ. ಈ ನಿಟ್ಟಿನಲ್ಲಿ ಅಂಬೇಡ್ಕರ್ ರ ಸಂವಿಧಾನ ನಮಗೆ ಅತ್ಯಂತ ಉಪಯುಕ್ತವಾಗಿದೆ. ಅವರು ಕೇವಲ ಸಂವಿಧಾನ ಶಿಲ್ಪಿ ಯಾಗಿರದೇ ಅವರೊಬ್ಬ ಆಥಿ೯ಕ ಚಿಂತಕ, ನೀರಾವರಿ ತಜ್ಞ, ಪತ೯ಕತ೯ರಾಗಿ ಜನಮನದಲ್ಲಿ ಅಚ್ಚಳಿಯಾಗಿ ಉಳಿದಿದ್ದಾರೆ. ಎಂದು ನುಡಿದರು.
ಗ್ರಾ.ಪಂ ಪಿ.ಡಿ.ಒ ರಾಜು ಬೆವನೂರ – ಅಂಬೇಡ್ಕರ್ ಅವರು ಸಮಾಜದಲ್ಲಿನ ಮೇಲು ಕೀಳುಗಳ ವಿರುದ್ಧ ಹೋರಾಟವನ್ನು ನಡೆಸಿದ್ದಾರೆ. ಸಮಾಜದಲ್ಲಿನ ಅಂಧ ಶ್ರದ್ಧೆ, ಮೂಡನಂಬಿಕೆ, ತಪ್ಪು ತಿಳುವಳಿಕೆಗಳ ಬಗ್ಗೆ ಅರಿವು ಮೂಡಿಸಿ, ಸಾಮಾಜಿಕ ಕ್ರಾಂತಿಯನ್ನೇ ಮಾಡಿದರು. ನಮ್ಮ ದೇಶ ಅನೇಕ ಜಾತಿ, ಉಪಜಾತಿ, ಧರ್ಮ, ಸಂಸ್ಕೃತಿಯನ್ನು ಒಳಗೊಂಡಿದ್ದು ವಿವಿಧತೆಯಲ್ಲೂ ಏಕತೆಯನ್ನು ಪ್ರತಿಪಾದಿಸುತ್ತದೆ. ಇಡೀ ವಿಶ್ವಕ್ಕೆ ಭಾರತದ ಸಂವಿಧಾನ ಶ್ರೇಷ್ಠವಾಗಿದೆ. ಅಂಬೇಡ್ಕರ್ ಸಂವಿಧಾನ ವನ್ನು ಶಾಸಕಾಂಗ, ಕಾಯಾ೯ಂಗ, ಮತ್ತು ನ್ಯಾಯಾಂಗ ಎಂಬ ಮೂರು ಅಂಶಗಳಲ್ಲಿ ಪ್ರತ್ಯೇಕಿಸಿದ್ದಾರೆ. ನಮ್ಮ ಸಂವಿಧಾನವನ್ನು ನಾವೆಲ್ಲರೂ ಕಾಪಾಡೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾ ಪಂ ಅಧ್ಯಕ್ಷ ಬಾಹುಬಲಿ ಗಂಡೋಶಿ, ಗ್ರಾ ಪಂ ಪಿ ಡಿ ಒ ರಾಜು ಬೆವನೂರ, ಚಿದಾನಂದ ಮಿಠಾರೆ, ಬಿ ಬಿ ಗಲಗಲಿ, ಭೂಪಾಲ್ ಕಾಂಬಳೆ, ಹಾಗೂ ಸವ೯ ಸದಸ್ಯರು ಹಾಜರಿದ್ದರು.
ವರದಿ:- ಶಿವು ಸ್ವಾಮಿ ಪರಮಾನಂದವಾಡಿ