ಮುಗಳಖೋಡ: ರಾಯಬಾಗ ತಾಲೂಕಿನ ಸುಕ್ಷೇತ್ರ ಮುಗಳಖೋಡ ಪಟ್ಟಣದಲ್ಲಿ ಡಾ.ಸಿ.ಬಿ.ಕುಲಿಗೋಡ ಅವರ ನಿವಾಸದಲ್ಲಿ ರಾಯಬಾಗದ ಅಭಾಜಿ ಪೌಂಡೇಶನ್ ವತಿಯಿಂದ ಕೊರೊನಾ ವಾರಿರ‍್ಸಗೆ ಹಮ್ಮಿಕೊಂಡ ಸತ್ಕಾರ ಸಮಾರಂಭದ ನೇತೃತ್ವವಹಿಸಿ ಮಾತನಾಡಿದ ಡಾ.ಸಿ.ಬಿ.ಕುಲಿಗೋಡ ಈಗಾಗಲೇ ಸಾಕಷ್ಟು ಕುಟುಂಬಗಳಿಗೆ ಕಲ್ಲಗಂಡಿ, ಆಹಾರ ಸಾಮಗ್ರಿಗಳನ್ನು ಹಂಚಿ ನಮ್ಮ ಕೈಲಾದ ಸಹಾಯವನ್ನು ಮಾಡಿದ್ದೇವೆ. ಅದರೊಂದಿಗೆ ಇಂದು ಆಶಾ ಕಾರ್ಯಕರ್ತರಿಯರಿಗೆ ಆಹಾರ ಸಾಮಗ್ರಿಗಳ ಕಿಟ್‌ನ್ನು ವಿತರಿಸುತ್ತಿದ್ದೇವೆ ಎಂದು ಹೇಳಿದರು.
ಪ್ರಪಂಚವನ್ನೇ ಬೆಚ್ಚಿಳಿಸಿರುವ ಕಿಲ್ಲರ ಕೊರೊನಾ ರೋಗ ದಿನದಿಂದ ದಿನಕ್ಕೆ ದೇಶದಲ್ಲಿ ತನ್ನ ಅಟ್ಟಹಾಸವನ್ನು ಮುಂದುವೆರೆಸಿದೆ. ಈ ಹಿನ್ನಲೆಯಲ್ಲಿ ದೇಶದಲ್ಲಿ ಲಾಕ್‌ಡೌನ್ ಜಾರಿಯಲ್ಲಿ ಇದ್ದು, ಈ ಕೊರೊನಾ ರೋಗಕ್ಕೆ ಹೆದರಿ ತಮ್ಮ ತಮ್ಮ ಮನೆಯಲ್ಲಿರುವಾಗ ಇಂದು ಈ ಕೊವಿಡ್-೧೯ ಕೊರೊನಾ ರೋಗದ ವಿರುದ್ಧ ಎದೆತಟ್ಟಿ ನಿಂತು ತಮ್ಮ ಪ್ರಾಣದ ಹಂಗನ್ನು ತೊರೆದು ಕಾರ್ಯನಿರ್ವಹಿಸುತ್ತಿರುವ ಪುರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು, ಡಾಕ್ಟರ್ಸ್, ಪೋಲೀಸ್ ಅಧಿಕಾರಿಗಳು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು, ಪತ್ರಕರ್ತರು, ಸೇರಿದಂತೆ ಸಮುದಾಯ ಆರೋಗ್ಯ ಕೇಂದ್ರ ಸಿಬ್ಬಂದಿಯವರ ಕಾರ್ಯ ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ. ಈ ಎಲ್ಲ ಸಿಬ್ಬಂದಿಯವರನ್ನು ನಾವೇಲ್ಲರೂ ಗೌರವಿಸಬೇಕು ಎಂದು ಜಿ.ಪಂ ಮಾಜಿ ಸದಸ್ಯರಾದ ಡಾ.ಸಿ.ಬಿ.ಕುಲಿಗೋಡ ಅವರು ಹೇಳಿದರು.
ಈ ಸಮಾರಂಭದಲ್ಲಿ ಸನ್ಮಾನ್ಯ ಶ್ರೀ ಪ್ರತಾಪಣ್ಣಾ ಪಾಟೀಲ ಅವರ ಅಮೃತ ಹಸ್ತದಿಂದ ಕೊರೊನಾ ವಾರಿಯರ‍್ಸಗಳಾದ ಪುರಸಭೆ ಅಧಿಕಾರಿಗಳು ಸಿಬ್ಬಂದಿಯವರು, ಡಾಕ್ಟರ್ಸ್, ಪೋಲೀಸ್, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು, ಪತ್ರಕರ್ತರು, ಸೇರಿದಂತೆ ಸಮುದಾಯ ಆರೋಗ್ಯ ಕೇಂದ್ರ ಸಿಬ್ಬಂದಿಯವರನ್ನು ಶ್ಯಾಲು ಹೊದಿಸಿ ಸನ್ಮಾನಿಸಿ ಅಭಿನಂದನಾ ಪತ್ರವನ್ನು ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಡಾ.ಸಂತೋಷ ಕುಲಿಗೋಡ, ವಸಂತ ಹೊಳ್ಕರ, ಪುರಸಭೆ ಮುಖ್ಯಾಧಿಕಾರಿ ಜಿ.ವಿ.ಡಂಬಳ, ಸಂಜಯ ಕುಲಿಗೋಡ, ಪುರಸಭೆ ಸದಸ್ಯ ಪಿ.ಪಿ.ಆದಪ್ಪಗೋಳ, ರಾಮು ಪಾಟೀಲ, ವಿಠ್ಠಲ ಯಡವನ್ನವರ, ಕರೇಪ್ಪ ಮಂಟೂರ, ಮಯೂರ ಕುರಾಡೆ, ರಮೇಶ ಯಡವನ್ನವರ, ಗೋಪಾಲ ಯಡವನ್ನವರ, ರವಿ ಹುಲ್ಲೋಳ್ಳಿ, ಕಪೀಲ ಕರಿಭೀಮಗೋಳ, ಆರಕ್ಷಕ ಠಾಣೆಯ ಎ.ಎಸ್.ಐ ದುಂದಮನಿ, ಸಮುದಾಯ ಆರೋಗ್ಯ ಕೇಂದ್ರದ ವೈಧ್ಯರಾದ ರಾಜೇಶ್ವರಿ, ಆಶಾ ಕಾರ್ಯಕರ್ತೆ ಮುಖ್ಯಸ್ಥೆ ಸವೀತಾ ಪೋಳ, ಅಂಗನವಾಡಿ ಮುಖ್ಯಸ್ಥೆ ಜಯಶ್ರೀ ಖಾನಟ್ಟಿ, ಪಿ.ಬಿ.ಖೇತಗೌಡರ, ಹನುಮಾಸಾಬ ನಾಯಿಕ, ಮುಪ್ಪಯ್ಯ ಹಿರೇಮಠ, ಅಲ್ಲಯ್ಯ ಹಿರೇಮಠ, ರಾಮಕೃಷ್ಣ ಕಂಬಾರ, ಪಿ.ಎಂ.ಕುಲಿಗೋಡ, ಎಸ್.ಎ.ಯಡವನ್ನವರ, ಮುಂತಾದವರು ಪಾಲ್ಗೊಂಡಿದ್ದರು.